ಗುಲ್ಬರ್ಗಾ

21ರಂದು ಯುವಜನರ ಸಮಸ್ಯೆ ಸವಾಲುಗಳು: ಸಂವಾದ

Published On :

ಗುಲ್ಬರ್ಗ: ಆ. 21ರಂದು ಗುಲ್ಬರ್ಗದಲ್ಲಿ ನಡೆಯುವ ಎಐಡಿವೈಒನ 4ನೇ ಜಿಲ್ಲಾ ಮಟ್ಟದ ಯುವಜನ ಸಮ್ಮೇಳನಕ್ಕೆ ಪೂರಕವಾಗಿ ನಗರದ ಸರ್ಕಾರಿ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಯುವಜನರ ಮುಂದಿರುವ ಸಮಸ್ಯೆ ಹಾಗೂ ಸವಾಲುಗಳು ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆವಿಷ್ಕಾರ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಂಚಾಲಕ ವಿ.ಜಿ. ದೇಸಾಯಿ ಮಾತನಾಡಿ, ಪ್ರಸ್ತುತ ಸಾಮಾಜಿಕ ವ್ಯವಸ್ಥೆ ಕರಾಳವಾಗಿದ್ದು, ವಿದ್ಯಾರ್ಥಿ ಯುವಜನರು ಜಟಿಲವಾದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು, ದುಶ್ಚಟಗಳಿಂದ ಹೊರಬರಲಾಗದೆ ನಲುಗುವಂತಾಗಿದೆ ಎಂದರು.
ಇನ್ನೊಂದೆಡೆ ಪದವಿ, ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್ ಪದವಿ ಪಡೆದ ಯುವಜನರಿಗೆ ಉದ್ಯೋಗವಿಲ್ಲ. ತಾತ್ಕಾಲಿಕ ಹಾಗೂ ಗುತ್ತಿಗೆ ಪದ್ಧತಿ ನೇಮಕ ಪ್ರಕ್ರಿಯೆ, ಯುವ ಜನರಲ್ಲಿ ಅಭದ್ರತೆ ಭಾವನೆಯನ್ನು ಬೆಳೆಸಿದೆ. ಆದ್ದರಿಂದ ವಿದ್ಯಾರ್ಥಿ ಯುವಜನರು ಎದೆಗುಂದದೆ. ಭಗತ್‌ಸಿಂಗ್, ನೇತಾಜಿ ಅವರಂತಹ ಆದರ್ಶಗಳ ಮೇಲೆ ಸಂಘಟಿತವಾದ ಪ್ರಜಾಸತಾತ್ಮಕ ಹೋರಾಟಗಳಲ್ಲಿ ತೊಡಗಿಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜು ಪ್ರಾಚಾರ್ಯ ಬಸವರಾಜ ಗಾಣೂರೆ ಅಧ್ಯಕ್ಷತೆ ವಹಿಸಿ ಮಾತನಾಡಿ,  ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿ ಯುವಬಜನರು ಪ್ರಗತಿಪರವಾದ ವಿದ್ಯಾರ್ಥಿ ಯುವಜನ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಸಮಿತಿ ಸದಸ್ಯ ಭಾಗಣ್ಣ ಬುಕ್ಕಾ ಪ್ರಾಸವಿಕವಾಗಿ ಮಾತನಾಡಿದರು. ಪುಟ್ಟರಾಜ ಪುಣಶೆಟ್ಟಿ ನಿರೂಪಿಸಿದರು. ಶರಣಬಸಪ್ಪ ಪೊಸ್ತೆ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.