ಭಕ್ತಿಯ ನೆರವಿಂದ ಮಠ ಅಭಿವೃದ್ಧಿ: ಶ್ರೀ
ಯಾದಗಿರಿ: ತಾಲೂಕಿನ ಅಬ್ಬೆತುಮಕೂರು ವಿಶ್ವರಾಧ್ಯ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿಯ 47ನೇ ಹುಟ್ಟು ಹಬ್ಬವನ್ನು ಮಠದಲ್ಲಿ ಗುರುವಾರ ಆಚರಿಸಲಾಯಿತು.
ಶ್ರೀಗಳ ಹುಟ್ಟುಹಬ್ಬದ ನಿಮಿತ್ತ ಗುರುವಾರ ಬೆಳಗ್ಗೆ ವಿಶ್ವರಾಧ್ಯರ ಗದ್ದುಗೆಗೆ ಗೋರಟಾ ರುದ್ರ ಸಂಗೀತ ಬಳಗದಿಂದ ವಿಶೇಷ ರುದ್ರಾಭಿಷೇಕ ನಡೆಯಿತು. ಡಾ. ಗಂಗಾಧರ ಸ್ವಾಮೀಜಿ ವಿಶ್ವರಾಧ್ಯರ ಗದ್ದುಗೆಯ ದರ್ಶನ ಪಡೆದು ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಸಮಾರಂಭಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿ ಭಕ್ತರು ಶ್ರೀಗಳಿಗೆ ಶಾಲು ಹೊದಿಸಿ ಹಾರ ಹಾಕಿ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಮಠದ ಅಭಿವೃದ್ಧಿಗೆ ಭಕ್ತರ ನೆರವು: ನಂತರ ಆಶೀರ್ವಚನ ನೀಡಿದ ಸ್ವಾಮೀಜಿ, ವಿಶ್ವರಾಧ್ಯರ ಪರಂಪರೆಯನ್ನು ಎತ್ತಿ ಹಿಡಿದು, ಅವರ ತತ್ವ ಆದರ್ಶಗಳ ಬೆಳಕಿನಲ್ಲಿ ನಡೆಯುತ್ತಿದ್ದೇನೆ. ಜಾತಿ, ಮತ, ಪಂಥಗಳನ್ನು ಮೀರಿ ಮಾನವತೆಯ ನೆಲೆಗಟ್ಟಿನಲ್ಲಿ ಎಲ್ಲರೂ ಒಂದೇ ಎಂಬ ಭಾವದಲ್ಲಿ ಭಕ್ತರನ್ನು ಕಾಣಲಾಗುತ್ತಿದೆ. ಅಂತೆಯೇ ಲಕ್ಷಾಂತರ ಭಕ್ತರು ಶ್ರೀಮಠಕ್ಕೆ ಬರುತ್ತಿದ್ದಾರೆ. ಎಲ್ಲರ ಭಕ್ತಿಯ ನೆರವಿನಿಂದ ಮಠ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುತ್ತಿದೆ ಎಂದರು.
ವಿಶ್ವರಾಧ್ಯರು ಈರೂಢವನ್ನು ಮೀರಿ ಆರೂಢರಾದವರು. ಉನ್ನತ ಸಾಧನೆಯ ಮೂಲಕ ಸಂತರಾದ ಮಹಾಂತರು. ಅಂತಹವರ ದರ್ಶನ ಭಾಗ್ಯದಿಂದ ಮನುಷ್ಯನ ಕಾಳಿಕೆ ಕಳೆಯುತ್ತದೆ. ವಿಶ್ವರಾಧ್ಯರ ಕೃಪೆಗೆ ಒಳಗಾದವರು ಭವ ಬಂಧನದಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ನಾಗನಗೌಡ ಕಂದಕೂರ, ಚನ್ನಪ್ಪಗೌಡ ಮೋಸಂಬಿ, ಡಾ. ಸುಭಾಶ್ಚಂದ್ರ ಕೌಲಗಿ, ಹನುಮಾನ ಸೇಠ, ಡಾ. ವೀರೇಶ ಜಾಕಾ, ಎಸ್.ಎನ್. ಮಿಂಚನಾಳ, ರಾಮಶೆಟ್ಟಿ ಹುಗ್ಗಿ, ಸಿದ್ದು ಪಾಟೀಲ್, ರಾಜು ಬಾಂಬೆ, ವೀರಣ್ಣ ಪ್ಯಾರಸಾಬಾದಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

