ಗುಲ್ಬರ್ಗಾ

ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ

Published On :

ಯಾದಗಿರಿ: ಜಿಲ್ಲಾ ಆರ್ಯ ಈಡಿಗ ಸಮಾಜದ ವತಿಯಿಂದ ನಗರದ ಗಂಜ್ ರಸ್ತೆಯಲ್ಲಿರುವ ಬಾಲಯೋಗಿ ರಾಜೇಂದ್ರ ಸ್ವಾಮೀಜಿಗಳ ಆಶ್ರಮದಲ್ಲಿ ಗುರುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 159ನೇ ಜಯಂತ್ಯುತ್ಸವ ಆಚರಿಸಲಾಯಿತು.
  ಸಮಾರಂಭದಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಪೊಲೀಸ್ ಮಾತನಾಡಿ, “VÚßÁÚßVÚ×Úß ಮಾನವ ಕುಲ JM¥æÞ’ ಎಂದು ನಾಡಿನ ಜನತೆಗೆ ಸಂದೇಶ ನೀಡಿದ್ದಾರೆ. ಅವರು ಶಿಕ್ಷಣ, ಚಳವಳಿ ಮೂಲಕ ದೇಶದ ತುಂಬೆಲ್ಲಾ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ಪುರುಷರಾಗಿದ್ದಾರೆ. ಅವರ ವಿಚಾರ ಧಾರೆಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಂಡು ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
  ಸಮಾಜದ ಎಲ್ಲಾ ಹಿರಿಯರು ಯುವಕರು ಕೈಗೊಳ್ಳುವ ರಚನಾತ್ಮಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಇತರರಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.
  ನಿವೃತ್ತ ಶಿಕ್ಷಕ ರಾಮಯ್ಯ ಶಾಬಾದಿ ಮಾತನಾಡಿ, ನಾರಾಯಣ ಗುರುಗಳು ತಮ್ಮ ಬದುಕನ್ನು ಮಾನವ ಕುಲ ಒಳಿತಿಗಾಗಿ ಮೀಸಲಿಟ್ಟು ಜೀವಿತಾವಧಿಯಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಸಮಾಜದಲ್ಲಿದ್ದ ಜಾತಿ ಪದ್ಧತಿ ಪಿಡುಗನ್ನು ನಿರ್ಮೂಲನೆ ಮಾಡಲು ಶ್ರಮಿಸಿದರು. ನಾವೆಲ್ಲ ಸಮಾಜದ ಪ್ರಗತಿಗಾಗಿ ಶ್ರಮಿಸಿದರೆ ಮಾತ್ರ ಯುವ ಪೀಳಿಗೆಗೆ ಒಳ್ಳೆಯ ಸಂದೇಶ ನೀಡಲು ಸಾಧ್ಯ ಎಂದು ಹೇಳಿದರು.
  ಶ್ರೀನಿವಾಸ ಪೊಲೀಸ್ ಮಾತನಾಡಿದರು. ಸಮಾಜದ ತಾಲೂಕು ಅಧ್ಯಕ್ಷ ರವೀಂದ್ರ ಮುಂಡ್ರಗಿ, ನಗರ ಘಟಕದ ಅಧ್ಯಕ್ಷ ಮಹೇಂದ್ರಕುಮಾರ ಅನಪುರ, ಮಲ್ಲಣಗೌಡ ಮಾನಸಗಲ್, ನರಸಯ್ಯ ಶಾಬಾದಿ, ಶಿವರಾಜ ಯರಗೋಳ, ಎಸ್.ಎಸ್. ಹಾಬಳಕರ್, ರಾಮಯ್ಯ ಮುಂಡ್ರಗಿ, ರುಕ್ಮಯ್ಯ ಕಟ್ಟಿಮನಿ, ಸೈದಪ್ಪ, ರಾಘವೇಂದ್ರ, ಮಾರುತಿ, ಮರೆಪ್ಪ ಇಬ್ರಾಂಹಿಪುರ, ದತ್ತು ಶಾಬಾದಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.