ಗುಲ್ಬರ್ಗಾ

ದಲಿತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

Published On :

ಹುಣಸಗಿ: ಸಮೀಪದ ಬಲಶೆಟ್ಟಿಹಾಳ ಗ್ರಾಮದಲ್ಲಿ ಇತ್ತೀಚಿಗೆ ದಲಿತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯು ಹುಣಸಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರು ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಮುಖ್ಯ ರಸ್ತೆ ಮೂಲಕ ವಿಶೇಷ ತಹಸೀಲ್ ಕಚೇರಿಯವರೆಗೆ ಘೋಷಣೆ ಕೂಗುತ್ತಾ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಚಂದ್ರು ಚಕ್ರವರ್ತಿ ಮತ್ತು ಶರಣಪ್ಪ ವಾಗಣಗೇರಿ, ಬಲಶೆಟ್ಟಿಹಾಳ ಗ್ರಾಮದ  ಬಸಪ್ಪ ಚಲುವಾದಿ ಕುಟುಂಬದವರ ಮೇಲೆ ಕೆಲ ದುಷ್ಕರ್ಮಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದು ಖಂಡನೀಯ ಎಂದರು. ಹಲ್ಲೆ ನಡೆಸಿದ ದುಷ್ಕರ್ಮಿಗಳಲ್ಲಿ ಯಾರನ್ನೂ ಬಂಧಿಸದಿರುವ ಪೊಲೀಸರ ವರ್ತನೆ ಖಂಡನೀಯ ಎಂದರು.
  ರಾಮಣ್ಣ ಕಲ್ಲದೇವನಹಳ್ಳಿ ಹಾಗೂ ಮೂರ್ತಿ ಬೊಮ್ಮನಹಳ್ಳಿ ಮಾತನಾಡಿ, ಎಲ್ಲಾ ಆರೋಪಿಗಳನ್ನು ಶೀಘ್ರ ಬಂದಿಸಬೇಕು. ಗ್ರಾಮದ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಘಟನೆಯ ತನಿಖೆಯನ್ನು ಬೇರೆ ಪೊಲೀಸರಿಗೆ ಒಪ್ಪಿಸಿ, ಹುಣಸಗಿ ಪಿಎಸ್‌ಐ ಅವರನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
  ವಿಶೇಷ ತಹಸೀಲ್ದಾರ್ ಬಸವರಾಜ ಅಂಬರಶೆಟ್ಟಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಶರಣಪ್ಪ ವಾಗಣಗೇರಿ, ಹೊನ್ನಪ್ಪ ರಸ್ತಾಪೂರ, ರಾಮಚಂದ್ರ ವಾಗಣಗೇರಿ, ಅಪ್ಪಣ್ಣ ಗಾಯಕವಾಡ, ಗೋಪಾಲ ವಜ್ಜಲ್, ಬಸವರಾಜ ಹುಣಸಿಹೊಳೆ, ಮಲ್ಲೇಶಿ ಕವಿ, ಭೀಮರಾಯ ದೊಡ್ಡಮನಿ, ಅಮಲಪ್ಪ ಹಳ್ಳಿ, ಚಂದ್ರಶೇಖರ ಹಳ್ಳೂರು, ಶಿವಪ್ಪ ಸದಬ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.