ಮೌನೇಶ್ವರಬೆಟ್ಟ ಪ್ರಸಿದ್ಧ ಕ್ಷೇತ್ರವಾಗಿ ಬೆಳೆಯಲಿ: ಶ್ರೀ
ಶಹಾಪುರ: ವರವಿ, ಲಿಂಗನಬಂಡಿ, ಗೋನಾಲ, ತಿಂಥಣಿಯಂತೆ ಶಹಾಪುರದ ಮೌನೇಶ್ವರ ಬೆಟ್ಟವು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗುವುದರಲ್ಲಿ ಸಂಶಯವಿಲ್ಲ ಎಂಬುದಕ್ಕೆ ಬೆಟ್ಟದಲ್ಲಿ ಅಪಾರ ಭಕ್ತರು ಸೇರಿ ಎರಡು ದಿನ ಭಕ್ತಿಪೂರ್ವಕ ಜಾತ್ರೆ ನಡೆಸಿರುವುದು ಸಾಕ್ಷಿಯಾಗಿದೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ಬೆಟ್ಟದ ಮೌನೇಶ್ವರ ಜಾತ್ರೆ ಸಂಪನ್ನಗೊಂಡು ಪಟ್ಟಣದ ಹಳೆಪೇಟೆಯ ಕಾಳಿಕಾ ದೇವಸ್ಥಾನದಲ್ಲಿ ಗುಹಾಪ್ರವೇಶ ಕಾರ್ಯಕ್ರಮದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಗುರು ಕಾರುಣ್ಯ ಬಹುಮುಖ್ಯವಾಗಿದ್ದು, ಧಾರ್ಮಿಕ ಕಾರ್ಯಗಳ ಮೂಲಕ ಸಮಾಜ ಸಂಘಟಿಸುವ ಕಾರ್ಯ ನಡೆಯಬೇಕು. ಹಳೆಪೇಟೆಯಲ್ಲಿ ಸರ್ವ ಧರ್ಮದವರು ಇದ್ದು, ಎಲ್ಲರೂ ಸೇರಿ ಪ್ರತಿಯೊಂದು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದು, ಹಿಂದೂ ಸಮಾಜದ ಐಕ್ಯತೆಗೆ ನಾಂದಿಯಾಗಿದೆ. ಬೆಟ್ಟದಲ್ಲಿ ಜಗದ್ಗುರು ಮೌನೇಶ್ವರರು ತಪಸ್ಸು ಮಾಡಿದ ಸ್ಥಳವಾಗಿದ್ದು, ಪರಿಸರ ಕಾಳಜಿ ಜೊತೆಗೆ ದೇವಸ್ಥಾನದ ಅಭಿವೃದ್ಧಿಗೆ ಸರ್ವರ ಪ್ರಯತ್ನ ನಿರಂತರವಾಗಿ ನಡೆಯಲಿ ಎಂದು ಹೇಳಿದರು. ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.
ಅಕ್ರಮ: ತನಿಖೆಗೆ ಆಗ್ರಹ
ಶಹಾಪುರ: ತಾಲೂಕಿನ ಬೆಂಡೆಬೆಂಬಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾರ್ಯಾಲಯಕ್ಕೆ ಸಕಾಲದಲ್ಲಿ ಬಾರದೇ ಬಡವರಿಗೆ ತಲುಪುವ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕೆಲವು ಆಕ್ರಮಗಳು ನಡೆದಿವೆ ಎಂದು ಆರೋಪಿಸಿ ಜೆಡಿಎಸ್ ಎಸ್ಸಿ ಘಟಕದ ಉಪಾಧ್ಯಕ್ಷ ಬಿ.ಎಚ್. ಶರಣರಡ್ಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇಡೀ ಬೆಂಡೆಬೆಂಬಳಿ ಗ್ರಾಪಂ ಸೌಲಭ್ಯ ವಂಚಿತವಾಗಿದ್ದು, ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಶರಣುರಡ್ಡಿ ಮತ್ತು ತಾಯಪ್ಪ ಗಡ್ಡೆಸುಗೂರು, ಶಿವಶರಣ ಚಲವಾದಿ, ಯಲ್ಲಪ್ಪ ಹೊಸ್ಮನಿ, ಮರೆಪ್ಪ ಶಿವುಕುಮಾರ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

