ಗುಲ್ಬರ್ಗಾ

ರಸ್ತೆ ಅಭಿವೃದ್ಧಿ; ಜಿಪಂಗೆ 5 ಕೋಟಿ ನೀಡಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಡಿ.1
ರಸ್ತೆಗಳ ನಿರ್ವಹಣೆ, ದುರಸ್ತಿ, ಹೊಸ ರಸ್ತೆಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿಗೆ 5 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಪಂ ಅಧ್ಯಕ್ಷ ರಮೇಶ ಮರಗೋಳ ಗುಲ್ಬರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಸ್ಥಳೀಯ ಪ್ರದೇಶದ ಅಭಿವೃದ್ಧಿಗಾಗಿ ಲೋಕಸಭಾ ಸದಸ್ಯರಿಗೆ 5 ಕೋಟಿ, ಶಾಸಕರಿಗೆ 2 ಕೋಟಿ ಮತ್ತು ವಿಧಾನ ಪರಿಷತ್ ಸದಸ್ಯರಿಗೆ 2 ಕೋಟಿ ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ. ಅದೇ ಮಾದರಿಯಲ್ಲಿ ಪ್ರತಿ ಜಿಪಂ ಸದಸ್ಯರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ 1 ಕೋಟಿ ಪ್ರತಿವರ್ಷ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾದಾಗ ಜನರು ಜಿಪಂಗೆ ಬೇಡಿಕೆ ಸಲ್ಲಿಸುತ್ತಾರೆ. ಜಿಪಂಗೆ ತುರ್ತು ಪರಿಸ್ಥಿತಿಯಲ್ಲಿ ಕೊಳವೆಬಾವಿ ಮಂಜೂರು ಮಾಡುವ ಯೋಜನೆ ಇರುವುದಿಲ್ಲ. 6-7 ವರ್ಷಗಳ ಹಿಂದೆ ಕೊಳವೆಬಾವಿ ಯೋಜನೆ ಜಾರಿಯಲ್ಲಿತ್ತು. ಕಾಲಕಾಲಕ್ಕೆ ಅವಶ್ಯಕತೆಗೆ ತಕ್ಕಂತೆ ಕೊಳವಿಬಾವಿ ಮಂಜೂರು ಮಾಡುವ ಅಧಿಕಾರವನ್ನು ಜಿಪಂಗೆ ನೀಡಬೇಕು ಎಂದರು.
2011- 12ನೇ ಸಾಲಿನಿಂದ ಸ್ಥಗಿತಗೊಳಿಸಲಾದ ಲೆಕ್ಕಶೀರ್ಷಿಕೆ 5054ನ್ನು ಪುನರ್ ಪ್ರಾರಂಭಿಸಿ ಅದರ ಅನುಷ್ಠಾನದ ಅಧಿಕಾರವನ್ನು ಜಿಪಂಗೆ ನೀಡಬೇಕು. 2010- 11ನೇ ಸಾಲಿನ ಲೆಕ್ಕಶೀರ್ಷಿಕೆ 5054ರ ಅಡಿಯಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳಿಗೆ ಇನ್ನೂ 259.87 ಲಕ್ಷ ಅನುದಾನ ಬಿಡುಗಡೆ ಆಗಬೇಕಾಗಿದೆ. ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಈ ಹಣವನ್ನು ತಕ್ಷಣದಲ್ಲಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಲೆಕ್ಕ ಶೀರ್ಷಿಕೆ 3054ರ ಅಡಿಯಲ್ಲಿ 2011-12ನೇ ಸಾಲಿಗೆ 1133.58 ಲಕ್ಷ ಅನುದಾನವಿತ್ತು. ಈ ವರ್ಷಕ್ಕೆ (2012-13) 469.12 ಲಕ್ಷ ಆಗಿದೆ. ಈ ಅನುದಾನ ಕಡಿಮೆ ಮಾಡಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಇದರಲ್ಲಿಯೂ ಸಹ 250 ಲಕ್ಷ ಮುಂದುವರಿದ ಕಾಮಗಾರಿಗಳಿವೆ. ಇದು ಹಿಂದಿನ ವರ್ಷ ಇದ್ದಷ್ಟು ಮುಂದುರಿಸಲು ಅಂದರೆ 1133.58 ಲಕ್ಷ ನೀಡಬೇಕು ಎಂದರು.
ಲೆಕ್ಕಶೀರ್ಷಿಕೆ 3054ರ ಅಡಿಯಲ್ಲಿ ದಿನಗೂಲಿ ನೌಕರರ ಸಂಬಳಕ್ಕಾಗಿ 495 ಲಕ್ಷ ಕಳೆದ ವರ್ಷಕ್ಕೆ ಇರಿಸಲಾಗಿತ್ತು. ಈ ವರ್ಷಕ್ಕೆ ಈ ಮೊತ್ತವನ್ನು ದಿನಗೂಲಿ ನೌಕರರಿಗಾಗಿ ಪ್ರತ್ಯೇಕವಾಗಿ ನೀಡಿ ಯಾವುದೇ ಅಭಿವೃದ್ಧಿ ಯೋಜನೆಗಳಲ್ಲಿ ಸೇರಿಸಬಾರದು ಎಂದು ಸಿಎಂ ಅವರಿಗೆ ಜಿಪಂ ಅಧ್ಯಕ್ಷರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.