ಗುಲ್ಬರ್ಗಾ

ಕಾಮಗಾರಿ ಮುಗಿಸಿ ಅಪನಂಬಿಕೆ ನಿವಾರಿಸಿ

Published On :

ಕನ್ನಡಪ್ರಭ ವಾರ್ತೆ  ಚಿಂಚೋಳಿ  ಡಿ.2
ಸರ್ಕಾರದಿಂದ ಮಂಜೂರಾಗಿರುವ ಕಾಮಗಾರಿಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕಾದರೆ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಾವಧಿಯಲ್ಲಿಯೇ ಪೂರ್ಣಗೊಳಿಸಿ ಜನರಲ್ಲಿನ ಅಪನಂಬಿಕೆ ಹೋಗಲಾಡಿಸಬೇಕು ಎಂದು ಶಾಸಕ ಡಾ.ಉಮೇಶ ಜಾಧವ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿ 68.50 ಲಕ್ಷ ವೆಚ್ಚದ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ಕೆಲಸಗಳು ಬೇಗನೆ ಮುಗಿಯುವುದಿಲ್ಲ ಎಂಬುದು ಜನರ ಭಾವನೆ. ಬ್ಯಾರೇಜ್ ಕಾಮಗಾರಿಯನ್ನು ಮಾರ್ಚ್ 14 ರೊಳಗೆ ಪೂರ್ಣಗೊಳಿಸಬೇಕು. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ಕೆಲವು ಕಡೆಗಳಲ್ಲಿ ಗುತ್ತಿಗೆದಾರರು ಕೆಲಸವನ್ನು ಪಡೆದುಕೊಂಡು ಅರ್ಧದಲ್ಲಿಯೇ ನಿಲ್ಲಿಸುತ್ತಿದ್ದಾರೆ. ಕಳಪೆ ಮಟ್ಟದಿಂದ ಕಾಮಗಾರಿ ನಡೆದರೆ ಅಂತಹವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಜಲ ಸಂಪನ್ಮೂಲ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾರೇಜ್ ನಿರ್ಮಾಣದಿಂದ ಅಚ್ಚುಕಟ್ಟು 55 ಹೆಕ್ಟರ್ ಜಮೀನು ನೀರಾವರಿಯಾಗಲಿದೆ.  ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಲಿದೆ. ಕುಡಹಳ್ಳಿ ಮತ್ತು ಹೊಸಳ್ಳಿ ಗ್ರಾಮಗಳ ದನಕರುಗಳಿಗೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರು ಲಭ್ಯವಾಗಲಿದೆ. ಬ್ಯಾರೇಜ್ ನಿರ್ಮಾಣದಿಂದ ಹೆಚ್ಚಿನ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಒಟ್ಟು 3604 ದಶಲಕ್ಷ ಘನಮೀಟರ್‌ಗಳಷ್ಟು ನೀರು ಸಂಗ್ರಹವಾಗಲಿದೆ ಎಂದರು.
ಜಿಪಂ ಸದಸ್ಯೆ ರೇಣುಕಾ ರಾಠೋಡ್, ಗ್ರಾಪಂ ಅಧ್ಯಕ್ಷೆ ಕಸ್ತೂರಿ ಭರತ ಬುಳ್ಳಾ, ಚಂದ್ರಕಾಂತ ರಂಗನೂರ, ಸಿದ್ದಲಿಂಗ ಸ್ವಾಮೀಜಿ, ಜಗನ್ನಾಥ ರಾಠೋಡ, ಗೋವಿಂದ ರಾಠೋಡ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನಿಲಕುಮಾರ್ ಕಳಸ್ಕರ್ ಸ್ವಾಗತಿಸಿ, ಬಸವರಾಜ ಶೀಲವಂತ ನಿರೂಪಿಸಿ, ಬಕ್ಕಪ್ಪ ಕಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.