ಗುಲ್ಬರ್ಗಾ

ಸಹೋದರನ ಕೊಲೆಗೆ ಯತ್ನ

Published On :

ಗುಲ್ಬರ್ಗ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಣ್ಣನಿಗೆ ಚಾಕುವಿನಿಂದ ತಿವಿದು ಕೊಲೆಗೆ ಯತ್ನಿಸಿದ ಘಟನೆ ನದಿಸಿನ್ನೂರ ಗ್ರಾಮದಲ್ಲಿ ನಡೆದಿದೆ. ಮೈನೋದ್ದೀನ್ ಮಸಲದಾರ ಗಾಯಗೊಂಡಿದ್ದಾನೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಸದ್ದಾಂ ಹುಸೇನ್ ಎಂಬಾತ ತನ್ನ ಸಹೋದರ ಮೈನೊದ್ದೀನ್‌ಗೆ ಕೊಲೆ ಮಾಡಲು ಯತ್ನಿಸಿದ್ದಾನೆ. ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಪಲ್ಟಿ; ಮಹಿಳೆ ಗಾಯ
ಆಟೋ ಉರುಳಿ ಬಿದ್ದ ಪರಿಣಾಮ ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ಗುಲ್ಬರ್ಗದ ರೇಲ್ವೆ ನಿಲ್ದಾಣದ ಬಳಿ ನಡೆದಿದೆ. ಗಂಗಮ್ಮ ಗಂಡ ಜಲಾಲಪ್ಪ ಗಾಯಗೊಂಡಿದ್ದಾರೆ. ಆಟೋ ಚಾಲಕನ ನಿರ್ಲಕ್ಷ್ಯದಿಂದಾಗಿ ಆಟೋ ಪಲ್ಟಿಯಾಗಿದೆ ಎಂದು ಗಂಗಮ್ಮ  ಹೆಚ್ಚುವರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೈಕ್ ಸವಾರ ಸಾವು
ದಂಡೋತಿ ಗ್ರಾಮದ ಬಳಿ ಬೈಕ್ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಓಂ ಪ್ರಕಾಶ ನಾಯಿಕೊಡಿ ಮೃತನು. ಶಾಮನೂರ ಗ್ರಾಮಕ್ಕೆ ಹೋಗಿ ಜಾತ್ರೆ ಮುಗಿಸಿಕೊಂಡು ಮರಳಿ ಗ್ರಾಮಕ್ಕೆ ಬರುತ್ತಿದ್ದಾಗ ಬೈಕ್ ಸ್ಕೀಡ್ ಆಗಿ ಈ ಘಟನೆ ಸಂಭವಿಸಿದೆ. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಅಪಹರಣ
ಸೇಡಂ ತಾಲೂಕಿನ ಬಟೇಗಾರ(ಕೆ) ಗ್ರಾಮದಲ್ಲಿ ಯುವತಿಯ ಅಪಹರಣವಾಗಿದೆ. ಅದೇ ಗ್ರಾಮದ ರಾಜು ತಂದೆ ಶಿವರಾಯ ಫಸಲರ ಎಂಬಾತ ಯುವತಿಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದಾನೆಂದು ಯುವತಿಯ ತಂದೆ ವೆಂಕಟಸ್ವಾಮಿ ವಡ್ಡರ್ ಸೇಡಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಸ್ತೆ ಅಪಘಾತ; ಸಾವು
ಹುಮನಾಬಾದ್: ವಿಆರ್‌ಎಲ್ ವಾಹನ ಹಾಗೂ ಲಾರಿ ಡಿಕ್ಕಿಯಿಂದ ವಿಆರ್‌ಎಲ್ ಚಾಲಕ, ಗುಲ್ಬರ್ಗ ಬಾಬಾ ಜಾನಿಮಿಯ್ಯಾ(40) ಮೃತ ಪಟ್ಟ ಘಟನೆ ನಡೆದಿದೆ. ಮೃತದೇಹವನ್ನು ಜೆಸಿಬಿ ಯಂತ್ರದ ಮುಖಾಂತರ ಹೊರತೆಗೆಯಲಾಗಿದೆ. ಅಸ್ತವ್ಯಸ್ತ ಸಂಚಾರವನ್ನು ಪೊಲೀಸರು ಸುಗಮಗೊಳಿಸಿದರು. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.