ಕಾಂಗ್ರೆಸ್ ಸರ್ಕಾರ ಕನ್ನಡಕ್ಕೆ ದ್ರೋಹ ಬಗೆದಿದೆ: ಕರವೇ ಕಿಡಿ
ಗುಲ್ಬರ್ಗ/ಶಹಾಬಾದ್: ರಾಜ್ಯ ಸರ್ಕಾಕಾರದ ವಿರುದ್ಧ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಅವಹೇಳನಕಾರಿ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರದ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳದೆ ಕನ್ನಡಿಗರಿಗೆ ಹಾಗೂ ಕನ್ನಡಕ್ಕೆ ದ್ರೋಹ ಬಗೆದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ್ ನಾಟಿಕರ್ ಆಕ್ರೋಶ ವ್ಯಕ್ತಪಡಿಸಿದರು.
ವಾಡಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಕರವೇ ಸ್ಥಳೀಯ ಅಧ್ಯಕ್ಷ ಸಿದ್ದು ಪಂಚಾಳ ನೇತೃತ್ವದಲ್ಲಿ ಹಮ್ಮಿಕೊಂಡ 58ನೇ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಎಸಿಸಿ ಕಾರ್ಖಾನೆಯು ಹೊರ ರಾಜ್ಯದವರಿಗೆ ಕೆಲಸ ನೀಡುವ ಮೂಲಕ ಕನ್ನಡಿಗರಿಗೆ ಮೋಸ ಮಾಡುತ್ತಿದೆ. ಕನ್ನಡಿಗರಿಗೆ ಕೆಲಸ ನೀಡದ್ದಿದಲ್ಲಿ ಕಂಪನಿ ವಿರುದ್ಧ ಹೋರಾಟ ಹಮ್ಮಿಕೊಳ್ಳಲ್ಲಾಗುವುದು ಎಂದು ಎಚ್ಚರಿಕ್ಕೆ ನೀಡಿದರು.
ರಾಜ್ಯೋತ್ಸವ ಅಂಗವಾಗಿ ರಕ್ತದಾನ ಶಿಬಿರ, ಅನಾಥ ಮಕ್ಕಳಿಗೆ ಬಟ್ಟೆ ಹಾಗೂ ಹೊದಿಕೆಗಳನ್ನು ವಿತರಿಸಿದರು. ಕನ್ನಡದಲ್ಲಿ ಅಧಿಕ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ನೀಡಿ ಸನ್ಮಾಸಿದರು.
ಸ್ಥಳೀಯ ಅಧ್ಯಕ್ಷ ಸಿದ್ದು ಪಂಚಾಳ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಎಸಿಸಿ ಕಾರ್ಖಾನೆಯ ಎಚ್.ಆರ್.ವಿಭಾದ ಅಧಿಕಾರಿ ಜಯಪ್ರಕಾಶ ಪವಾರ, ಮಾದಿಗ ದಂಡೋರ ಸಮಾಜ ಜಿಲ್ಲಾಧ್ಯಕ್ಷ ರಾಜು ಮುಕ್ಕಣ, ಜಂಗಮ ಸಮಾಜ ತಾಲೂಕು ಅಧ್ಯಕ್ಷ ನೀಲಯ್ಯ ಸ್ವಾಮಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಮಲ್ಲೇಶಿ ಚುಕ್ಕೆರಿ, ಸದಸ್ಯ ಅಶೋಕ ಬಾಜಿರಾವ್, ಅಂಬಾದಾಸ, ಗಿರಿಮಲ್ಲಪ್ಪ ಕಟ್ಟಿಮನಿ, ಮತ್ತಯ್ಯ ಸ್ವಾಮಿ, ಮಜರ್ ಹುಸೇನ್, ಕಾಂಗ್ರೆಸ್ ಮುಖಂಡ ಬಶಿರ್ ಖುರೇಷಿ, ಭೀಮರಾಯ ಧೋರಿ, ಕೋಲಿ ಸಮಾಜ ಅಧ್ಯಕ್ಷ ನಾಗೇಂದ್ರ ಭಮನ್ನಳ್ಳಿ, ದೇಗಾಂವ ಸಮಾಜ ಮುಖಂಡ ಶಂಕರರಾವ ಮಿಣಜಗಿ, ಮರಾಠ ಸಮಾಜ ಅಧ್ಯಕ್ಷ ಹರಿಗಂಲಾಢೆ, ಮರವಾಡಿ ಸಮಾಜ ಅಧ್ಯಕ್ಷ ತಾರಚಂದ, ವಿಶ್ವಕರ್ಮ ಸಮಾಜ ಅದ್ಯಕ್ಷ ಅಶೋಕ ಪೋದ್ದಾರ, ಮಹೆಬೂಬ್ ಅಮೀನ್, ಕರವೇ ಮುಖಂಡರಾದ ಮಹೇಶ ಕಾಶಿ, ಅಶೋಕ ಭೀಮಳ್ಳಿ, ಶರಣಗೌಡ ಪಾಟೀಲ್, ಕಾಶಿನಾಥ ಎಂ., ಸಲ್ಮಾನ ಖಾನ, ಸಂತೋಷ, ಎಂ.ಡಿ.ಇಸ್ಮಾಲ್ ಜಿಲಾನಿ, ಆಕಾಶ ಜಾದವ ಇದ್ದರು.
ಕಾರ್ಯಕ್ರಮವನ್ನು ಕರವೇ ತಿಪ್ಪಣ್ಣ ಪಿ. ಲಂಡನಕರ್ ನಿರೂಪಿಸಿದರು. ಕರವೇ ಅಧ್ಯಕ್ಷ ಸಿದ್ದು ಪಂಚಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

