ಗುಲ್ಬರ್ಗಾ

ಇಂದು 'ಸೈದಾಪುರ ರೇಲ್ವೆ ನಿಲ್ದಾಣ' ನಾಮಕಾರಣ

Published On :

ಕ.ಪ್ರ.ವಾರ್ತೆ, ಗುರುಮಠಕಲ್, ಡಿ.6
ಮೂರು ದಶಕಗಳ ಹೋರಾಟದ ಫಲವಾಗಿ ಇಲ್ಲಿನ ನಾರಾಯಣಪೇಟೆ ರೋಡ್ ಹೆಸರಿನ ರೈಲು ನಿಲ್ದಾಣದ ನಾಮಫಲಕವೀಗ ಬದಲಾಗುತ್ತಿದೆ. ಡಿ.7ರ ಮಧ್ಯಾಹ್ನ 2 ಗಂಟೆಗೆ ನಡೆಯುವ ಬೃಹತ್ ಸಮಾರಂಭದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ 'ಸೈದಾಪುರ ರೈಲು ನಿಲ್ದಾಣ' ಎಂದು ಮರುನಾಮಕರಣ ಮಾಡುವ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ತಿಂಗಳ ಪ್ರಾರಂಭದಲ್ಲಿಯೇ ನಡೆಯಬೇಕಾಗಿದ್ದ ಮರುನಾಮಕಾರಣ ಕಾರ್ಯಕ್ರಮ ಸಿದ್ಧತೆ ಎಲ್ಲವೂ ಪೂರ್ಣಗೊಂಡಿತ್ತು. ಆದರೆ, ಬೆಳಗಾವಿಯಲ್ಲಿ ಚಳಿಗಾಳದ ಅಧಿವೇಶನ ಹಿನ್ನಲೆಯಲ್ಲಿ ಕಾರ್ಯಕ್ರಮ ದಿನಾಂಕವನ್ನು ಮುಂದೂಡಲಾಗಿತ್ತು. ಅಧಿವೇಶನ ಮುಗಿದ ಹಿನ್ನೆಲೆ ಮರುನಾಮಕಾರಣ ಕಾರ್ಯಕ್ಕೆ ಚಾಲನೆ ದೊರೆತ್ತಿದೆ. ಕಾರ್ಯಕ್ರಮ ಹಿನ್ನೆಲೆ ನಿಲ್ದಾಣವನ್ನು ಸುಣ್ಣ-ಬಣ್ಣಗಳಿಂದ ಸಿಂಗರಿಸಲಾಗಿದೆ. ಹೈದರಾಬಾದ್‌ನಿಂದ ಸೈದಾಪುರಕ್ಕೆ ವಿಶೇಷ ರೈಲಿನ ಮೂಲಕ ಬೆಳಗ್ಗೆ 11 ಗಂಟೆಗೆ ಆಗಮಿಸಲಿರುವ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಬೃಹತ್ ಸಭೆಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸೈದಾಪುರ ನೆರೆಯ ರಾಜ್ಯದ ನಾರಾಯಣಪೇಟ್‌ಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಅದೇ ಆಂಧ್ರಪ್ರದೇಶದ ನಾರಾಯಣಪೇಟೆ ನಾಮಕಾರಣದೊಂದಿಗೆ ನಿಲ್ದಾಣದ ಹೆಸರು ತಳುಕು ಹಾಕಿ ಕರೆಯಲಾಗುತ್ತಿತ್ತು. ಅದರೆ ಇಲ್ಲಿನ ಕನ್ನಡಫರ ಸಂಘಟನೆಗಳು ಹಾಗೂ ಬುದ್ಧಿಜೀವಿಗಳ ನಿಲುವಿನಿಂದಾಗಿ ಕರ್ನಾಟಕದ ರೈಲು ನಿಲ್ದಾಣಕ್ಕೆ ಆಂಧ್ರ ರಾಜ್ಯ ಬಿಂಬಿಸುವಂಥ ಹೆಸರಿಡುವುದು ಸೂಕ್ತವಲ್ಲ ಎಂಬ ನಿರ್ಧಾರ ತಳೆದು ಹೋರಾಟ, ರೈಲುತಡೆಯಂಥ ಪ್ರತಿಭಟನೆ ನಡೆಸಲಾಗಿತ್ತು. ಕಂಡ ಕಂಡ ಅಧಿಕಾರಿಗಳು, ಸಚಿವರಿಗೆ ಮನವಿ ನೀಡಲಾಗಿತ್ತು.
3 ದಶಕಗಳಿಂದ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗದೇ ಬೇಡಿಕೆ ನೆನೆಗುದಿಗೆ ಬಿದ್ದಿತ್ತು. ಇದೀಗ ಖರ್ಗೆ ಅವರ ಆಡಳಿತದಲ್ಲಿ ಹೋರಾಟಗಾರರ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.