ವರದಕ್ಷಿಣೆ ಕಿರುಕುಳ: ಜೀವ ಬೆದರಿಕೆ
ಮಹಿಳೆಗೆ ಪತಿ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿ ಘಟನೆ ಆದರ್ಶ ನಗರದಲ್ಲಿ ನಡೆದಿದೆ. ಭಾರತಿಗೆ ಪತಿ ಸೋಮಶೇಖರ ನಂದಿಮಠ, ಅತ್ತೆ ಗುರುಬಾಯಿ ನಂದಿಮಠ ಅವರು ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದಾರೆ. ಮದುವೆ ಸಂದರ್ಭದಲ್ಲಿ 1 ಲಕ್ಷ ವರದಕ್ಷಿಣೆ ಮತ್ತು 1 ತೊಲಿ ಬಂಗಾರ ನೀಡಲಾಗಿತ್ತು. ತವರು ಮನೆಯಿಂದ ಇನ್ನೂ 2 ಲಕ್ಷ, 2 ತೊಲಿ ಬಂಗಾರ ತರಬೇಕು. ತರದಿದ್ದಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಭಾರತಿ ಮಹಿಳಾ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇಬ್ಬರ ಬಂಧನ
ಗುಲ್ಬರ್ಗ: ಮಹಾರಾಷ್ಟ್ರದ ಪುಣೆಯಿಂದ ಗುಲ್ಬರ್ಗ ಮಾರ್ಗವಾಗಿ ಸೇಡಂ ಮತ್ತು ಚಿತ್ತಾಪುರಕ್ಕೆ ಸಿಎಚ್ ಪೌಡರ್ ಸಾಗಿಸುತ್ತಿದ್ದ ಇಬ್ಬರ ಆರೋಪಿಗಳನ್ನು ಗುಲ್ಬರ್ಗದ ಹೊರವಲಯದ ಪಟ್ಟಣ ಕ್ರಾಸ್ ಬಳಿ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಪುಣೆಯ ಮಡಪಾ ಮೂಲದ ಪ್ರಹ್ಲಾದ್ ಭಂಡಾರಿ(50) ಹಾಗೂ ಸುರೇಶ ಭಂಡಾರಿ ಬಂಧಿತರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 18 ಲಕ್ಷ ಮೌಲ್ಯದ ಬೊಲೆರೋ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಪಾದಚಾರಿ ಸಾವು
ಜೇವರ್ಗಿ: ತಾಲೂಕಿನ ಮುದಬಾಳ (ಬಿ) ಕ್ರಾಸ್ ಬಳಿ ಕಳೆದ ಬುಧವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬಾಬು ಮಡಿವಾಳ (45) ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸ್ಥಳಕ್ಕೆ ಪಿಎಸ್ಐ ಸುಧೀರ್ ಬೆಂಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಪಂ ಮಾಜಿ
ಉಪಾಧ್ಯಕ್ಷ ನಿಧನ
ಚಿಂಚೋಳಿ: ತಾಪಂ ಮಾಜಿ ಉಪಾಧ್ಯಕ್ಷ, ಕುರುಬ ಸಮಾಜದ ಹಿರಿಯ ಮುಖಂಡ, ಕಾಂಗ್ರೆಸ್ ಕಾರ್ಯಕರ್ತ ನರಸಪ್ಪ ಪೂಜಾರಿ ರುಸ್ತಂಪುರ (51) ಗುರುವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ, ಐವರು ಸಹೋದರರು ಇದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ರುಸ್ತಂಪುರದಲ್ಲಿ ಶುಕ್ರವಾರ ನಡೆಯಿತು.
ಸಂತಾಪ: ನರಸಪ್ಪ ಪೂಜಾರಿ ಅವರ ನಿಧನಕ್ಕೆ ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ್ ಜಮಾದಾರ, ಜಿಪಂ ಮಾಜಿ ಉಪಾಧ್ಯಕ್ಷ ಜಯಶ್ರೀ ಬಸವರಾಜ ಸಜ್ಜನಶೆಟ್ಟಿ, ಬಸವರಾಜ ಬಿರಾದಾರ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ತಾಲೂಕು ಗೊಂಡ ಸಮಾಜ ಅಧ್ಯಕ್ಷ ಮಲಕಪ್ಪ ಬಿರಾಪುರ, ರೇವಣಸಿದ್ದಪ್ಪ ಅಣಕಲ್, ನರಸಪ್ಪ ಮಾಸ್ಟರ್ ಕುಪನೂರ, ಹಣಮಂತ ಪೂಜಾರಿ, ಮಲ್ಲಿಕಾರ್ಜುನ ಸಕ್ರಿ, ಮೊಗಲಪ್ಪ ಕರಕಟ್ಟಿ ಇತರರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

