ಗುಲ್ಬರ್ಗಾ

ಮಲ್ಲಯ್ಯನ ಜಾತ್ರಾ ವೈಭವ...

Published On :

ಕನ್ನಡಪ್ರಭ ವಾರ್ತೆ  ಆಳಂದ  ಡಿ.9
ತಾಲೂಕಿನ ಮಾಡಿಯಾಳ ಗ್ರಾಮದ ಸುಕ್ಷೇತ್ರ ಮಲ್ಲಯ್ಯನ ಜಾತ್ರಾ ಮಹೋತ್ಸವ ಅಂಗವಾಗಿ ದರ್ಶನಕ್ಕೆ ಭಾನುವಾರ ಬೆಳಗ್ಗೆಯಿಂದಲೇ ನಾನಾ ಕಡೆಗಳಿಂದ ಬಂದ ಭಕ್ತರ ದಂಡು ಎರಡ್ಮೂರು ತಾಸು ಸರತಿಯಲ್ಲಿ ನಿಂತು ದರ್ಶನ ಪಡೆದರು.
  ಜಾತ್ರೆಯ ವಿಶೇಷವಾದ ಸಜ್ಜೆ ರೊಟ್ಟಿ, ಕಡಬು, ಬಜ್ಜಿ, ಪುಂಡಿಪಲ್ಲೆ ಸೇರಿದಂತೆ ನಾನಾ ತರಹದ ಊಟದ ಪದಾರ್ಥಗಳಿಂದ ಪ್ರಸಾದ ತಯಾರಿಸಿ ಭಕ್ತಿ ಭಾವದೊಂದಿಗೆ ತಮ್ಮ ಕುಟುಂಬ ಪರಿವಾರದೊಂದಿಗೆ ಬಂದು ಪ್ರಸಿದದ್ಧ ದೇವತೆ ಗುಡ್ಡದ ಮಲ್ಲಯ್ಯನಿಗೆ ಅರ್ಪಿಸಿ ಹರಕೆ ತೀರಿಸಿದರು. ನಂತರ ಜಾತ್ರೆಯಲ್ಲಿ ಬಂದ ಐವರು ಮಲ್ಲಯ್ಯನ ವಗ್ಗ್ಯಾಗಳನ್ನು ಬರಮಾಡಿಕೊಂಡು ನೈವೇದ್ಯ ಮತ್ತು ಕೈಲಾದಷ್ಟು ಕಾಣಿಕೆ ನೀಡಿ ಸತ್ಕರಿಸಿದರು.
  ಪ್ರತಿ ವರ್ಷ ಜಾತ್ರೆಯು ಎರಡು ದಿನಗಳ ಕಾಲ ನಡೆಯುತ್ತಿತ್ತು. ಈ ಬಾರಿ ಜಾತ್ರೆಯನ್ನು ಭಾನುವಾರ ನಿಗದಿ ಮಾಡಲಾಗಿತ್ತು. ಜಾತ್ರೆಗೆ ನೆರೆಯ ಮಹಾರಾಷ್ಟ್ರ ಮತ್ತು ರಾಜ್ಯದ ಜನರು ಭಾಗವಹಿಸಿದ್ದರು.
  ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ವಾಹನಗಳ ನಿಲುಗಡೆಗೆ ಸೂಕ್ತವಾದ ಸ್ಥಳ ಗುರುತು ಮಾಡದೆ ಇರುವುದರಿಂದ ಮುಖ್ಯ ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿತ್ತು. ವಾಹನಗಳನ್ನು ದಾಟಿ ದರ್ಶನಕ್ಕೆ ಬರಲು ಭಕ್ತರು ಹರಸಾಹಸ ಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.