ಗುಲ್ಬರ್ಗಾ

ಹನುಮಾನ್ ದೇಗುಲದಲ್ಲಿ ಕಾರ್ತೀಕ ಸಂಭ್ರಮ

Published On :

ಹುಣಸಗಿ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ವೇದಿಕೆಯ ಮುಖಾಂತರ ವಿದ್ಯಾರ್ಥಿಗಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿಯು ಉತ್ತಮ ವೇದಿಕೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗವಹಿಸಲು ಶಿಕ್ಷಕ ಯಲ್ಲಪ್ಪ ಚಂದನಕೇರಿ ಕೋರಿದರು.
  ಇಲ್ಲಿಗೆ ಸಮೀಪದ ಅರಕೇರಾ (ಜೆ) ಗ್ರಾಮದ ಬಸವೇಶ್ವರ ಹಿರಿಯ ಪ್ರಾಥಮಿಕ ವಸತಿ ಶಾಲೆಯಲ್ಲಿ ನಡೆದ ಗುಂಡಲಗೇರಾ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಜೊತೆಗೆ ಕ್ರೀಡೆ, ಯೋಗಾಭ್ಯಾಸ: ಕ್ಲಸ್ಟರ್‌ನ ಸಮೂಹ ಸಂಪನ್ಮೂಲಾಧಿಕಾರಿ ಶಿವಪುತ್ರಪ್ಪ ಮಾತನಾಡಿ, ಮಕ್ಕಳು ಓದಿನ ಜತೆಜತೆಗೆ ಕ್ರೀಡೆ, ಯೋಗಾಭ್ಯಾಸ, ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರು. ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಪಲಗಲದಿನ್ನಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಸಿಆರ್ಪಿ ಶಿವಪುತ್ರಪ್ಪ, ರಾಜಕುಮಾರ, ಶಿವನಗೌಡ ಹಾವರಗಿ, ಗುಂಡಲಗೇರಾ, ಕೋಳಿಹಾಳ, ಇಸಾಂಪೂರ, ಸದಬ, ಯಡಹಳ್ಳಿ, ಅರಕೇರಾ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
 ವಿದ್ಯಾರ್ಥಿಗಳು ಧರಿಸಿದ್ದ ಸ್ವಾಮಿ ವಿವೇಕಾನಂದ, ವಾಲ್ಮೀಕಿ, ವೀರಭದ್ರೇಶ್ವರ ಇನ್ನಿತರ ವೇಶಗಳು ಗಮನಸೆಳೆದವು. ಕಂಠಪಾಠ, ಧಾರ್ಮಿಕ ಪಠಣ, ವೇಶ, ಚಿತ್ರಕಲೆ, ಯೋಗಾಸನ, ಆಶುಭಾಷಣ, ಪ್ರಬಂಧ ರಚನೆ ಹಾಗೂ ಗುಂಪು ಕಾರ್ಯಕ್ರಮಗಳಾದ ಜನಪದ ನೃತ್ಯ, ಕೋಲಾಟ, ದೇಶಭಕ್ತಿಗೀತೆ ಸೇರಿದಂತೆ ಇನ್ನಿತರ ಸ್ಪರ್ಧೆಗಳು ಜರುಗಿದವು. ಬಸವೇಶ್ವರ ಶಾಲೆಯು ಹೆಚ್ಚಿನ ಬಹುಮಾನ ಪಡೆಯಿತು. ಬಸವರಾಜ ಸಜ್ಜನ ಸ್ವಾಗತಿಸಿದರು. ಕು. ನಿವೇದಿತಾ ವಂದಿಸಿದರು. ಶಿಕ್ಷಕಿ ಶಾರದಾ ಬಿರಾದಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.