ಪರಮೇಶ್ವರರ ಕಾರ್ಯ ಮುತ್ತಿನಂಥದ್ದು
ಕ.ಪ್ರ.ವಾರ್ತೆ, ಚಿಂಚೋಳಿ, ಡಿ. 11
ಜಗತ್ತಿನ ಯಾವುದೇ ಧರ್ಮದಲ್ಲಿ ಜಾತಿ, ಭೇದ- ಭಾವ ಇರುವುದಿಲ್ಲ. ತಪಸ್ಸು ಎಂದರೆ ಅಜ್ಞಾನವನ್ನು ಸುಟ್ಟು ಹಾಕಿ ಸುಜ್ಞಾನವನ್ನು ಪಡೆಯುವುದು. ಈ ನಿಟ್ಟಿನಲ್ಲಿ ಸೊನ್ಯಾಲಗಿರಿ ಪರ್ವತಲಿಂಗ ಪರಮೇಶ್ವರ ಮಹಾರಾಜರು 9 ತಿಂಗಳು 9 ದಿವಸದ ಮೌನ ಅನುಷ್ಠಾನ ತಪಸ್ಸು ಸಾಧನೆ ಮಾಡಿದ್ದು ಶ್ಲಾಘನಾರ್ಹ ಎಂದು ಹಾರಕೂಡ ಚಿಂಚೋಳಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸೊನ್ಯಾಲಗಿರಿಯಲ್ಲಿ ಕಳೆದ 9 ತಿಂಗಳು 9 ದಿವಸದ ಮೌನ ತಪಸ್ಸಿನ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಉಪ್ಪು, ಆಲಿಕಲ್ಲು, ಮುತ್ತು ನೀರಿನಲ್ಲಿ ಹುಟ್ಟಿದ್ದರೂ ಉಪ್ಪು ಹಾಗೂ ಆಲಿಕಲ್ಲು ನೆಲಕ್ಕೆ ಬಿದ್ದ ನಂತರ ಕರಗುತ್ತದೆ. ಆದರೆ ಪರಮೇಶ್ವರ ಮಹಾರಾಜರು ಮಾಡುತ್ತಿರುವ ಕೆಲಸ ಕಾರ್ಯಗಳು ಮುತ್ತಿನಂಥವು. ಅವೆಂದೂ ಕರಗುವುದಿಲ್ಲ ಎಂದು ಬಣ್ಣಿಸಿದರು.
ದೇವರು ಬೇರೆಯಾದ್ರೆ ಭಾವವೊಂದೇ: ಬಂಜಾರ(ಲಂಬಾಣಿ) ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ್ದರೂ ಜಾತಿನಿಂದನೆ ಎಂದಿಗೂ ಮಾಡುವುದಿಲ್ಲ. ಎಲ್ಲರೂ ಸುಶಿಕ್ಷಿತರಾಗಿದ್ದಾರೆ. ಲಂಬಾಣಿ ಜನಾಂಗದಲ್ಲಿ ಶಿಕ್ಷಣ, ಕೃಷಿ ಇನ್ನಿತರ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ. ದೇವರನ್ನು ಪೂಜಿಸುವುದು ಬೇರೆ ಬೇರೆಯಾಗಿದ್ದರೂ ಎಲ್ಲರಿಗೂ ಸಿಗುವ ದೇವರ ಆಶೀರ್ವಾದ ಮಾತ್ರ ಒಂದೇ ತಪಸ್ಸಿನಿಂದ ಎಲ್ಲವನ್ನು ಸಾಧಿಸಲು ಸಾಧ್ಯವಿದೆ ಎಂದು ಹಾರಕೂಡ ಚೆನ್ನವೀರ ಶಿವಾಚಾರ್ಯರು ಹೇಳಿದರು.
ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, ಕಲ್ಯಾಣ ನಾಡಿನಲ್ಲಿ ಸಾಧು, ಸನ್ಯಾಸಿ, ಮಹಾಂತ, ಶಿವಯೋಗಿಗಳಾಗಿ ನಾಡಿನಲ್ಲಿ ಬಾಳಿ ಬೆಳಗಿದ್ದಾರೆ. ಅವರ ಸರತಿಯಲ್ಲಿ ಪರಮೇಶ್ವರ ಮಹಾರಾಜರು ಒಬ್ಬರಾಗಿದ್ದಾರೆ ಎಂದರು.
ತಾಂಡಾ ಕಂದಾಯ ಗ್ರಾಮವಾಗಲಿ: ರಾಜ್ಯದಲ್ಲಿ ಬಂಜಾರ ಲಂಬಾಣಿ ತಾಂಡಾಗಳು ಅಭಿವೃದ್ಧಿಗೊಳ್ಳಬೇಕಾದರೆ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಪರಿವರ್ತಿಸಿದಾಗ ಮಾತ್ರ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು.
ಸಮಾರಂಭದಲ್ಲಿ ಭರತನೂರ ಶ್ರೀಚಿಕ್ಕಗುರುನಂಜೇಶ್ವರ ಸ್ವಾಮಿಜಿ, ಜೇಮಸಿಂಗ್ ಮಹಾರಾಜ, ಬಳಿರಾಮ ಮಹಾರಾಜ ಮುಂತಾದವರು ಆಶೀರ್ವಚನ ನೀಡಿದರು.
ಡಾ. ತುಕಾರಾಮ ಪವಾರ, ರಾಮಚಂದ್ರ ಜಾಧವ, ಅರುಣಕುಮಾರ್ ಪವಾರ, ಈಶ್ವರ ನಾಯಕ, ಡಾ. ಪಾಂಡುರಂಗ ಪೂಜಾರಿ, ಸುಭಾಷ ರಾಠೋಡ, ವಿಠ್‌ಠಲ್ ಜಾಧವ, ಭೀಮರಾವ ತೇಗಲತಿಪ್ಪಿ, ಶಾಮ ಪವಾರ, ಪ್ರೇಮಸಿಂಗ್ ಚವ್ಹಾಣ, ರಾಮಶೆಟ್ಟಿ ಪವಾರ, ವಿನೋದ ಚವ್ಹಾಣ, ಬಾಬು ಜಾಧವ, ಬಲಬೀಮ ನಾಯಕ, ಪಾರ್ವತಿ ಚವ್ಹಾಣ, ರಾಜು ಜಾಧವ, ಜಿತೇಂದ್ರ ಚವ್ಹಾಣ, ಗೋರಖನಾಥ ರಾಠೋಡ ಮೋತಿರಾಮ ಚವ್ಹಾಣ ಇತರರು ಬಂಜಾರ ಸಮಾಜದ ಮುಖಂಡರು ಹಾಗೂ ಮಹಿಳೆಯರು ಮಕ್ಕಳು, ವಿವಿಧ ಗ್ರಾಮ ಮತ್ತು ತಾಂಡಾಗಳಿಂದ ಲಂಬಾಣಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಪರಮೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶಂಕರರಾವ ಪವಾರ ಸ್ವಾಗತಿಸಿದರು. ಬಾಬು ಪವಾರ ಚೇಂಗಟಾ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಜಾಧವ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

