ಅಪೌಷ್ಟಿಕತೆ ನಿವಾರಣೆ ಕಾರ್ಯ ಚುರುಕು
ಶಹಾಪುರ: ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಶಹಾಪುರ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅಪೌಷ್ಟಕತೆ ನಿವಾರಣೆಗೆ ಕ್ರಿಯಾಶೀಲ ಕೆಲಸವಾಗುತ್ತಿದೆ.
ಇಳಿಕೆ: ಅಂಗನವಾಡಿ ಶಿಕ್ಷಕಿಯರು ಒಂದೇ ಬಗೆಯ ಸೀರೆ ತೊಟ್ಟು ಮಕ್ಕಳ ಆಟ-ಪಾಠಕ್ಕೆ ಸಜ್ಜಾಗಿದ್ದಾರೆ. 2013ರವರೆಗೆ 505 ಅಪೌಷ್ಟಿಕತೆ ಇದ್ದ ಮಕ್ಕಳಲ್ಲಿ, 2012ರಿಂದ 2013ರವರೆಗೆ ಡಿಸೆಂಬರ್ವರೆಗೆ 325 ಇದೆ. ಸದ್ಯ ತಾಲೂಕಿನಲ್ಲಿ 6 ವರ್ಷದ ಅತಿ ಕಡಿಮೆ ತೂಕದ ಮಕ್ಕಳ ಸಂಖ್ಯೆ 180 ಇದೆ. ಸಾಧಾರಣಾ ತೂಕದ ಮಕ್ಕಳ ಸಂಖ್ಯೆ 10,586 ಇದೆ. ಇನ್ನೂ ಸಾಮಾನ್ಯ ತೂಕದ ಮಕ್ಕಳು 17,601 ಇದೆ. ತಿಂಗಳವಾರು ಈ ಸಂಖ್ಯೆ ಹೆಚ್ಚು ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ 325 ಮಕ್ಕಳ ಸಂಖ್ಯೆ ಇಳಿಮುಖವಾಗಿ ಅಪೌಷ್ಟಿಕತೆಯಿಂದ ಪಾರಾಗಿದ್ದಾರೆ.
ಆರೋಗ್ಯ ತಪಾಸಣೆ: ಪ್ರತಿ ಮಗುವಿಗೆ ವಾರ್ಷಿಕ ರು. 750 ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ವಿಶೇಷ ಪ್ರಕರಣಗಳಿದ್ದರೆ,ಹೆಚ್ಚಿನ ಅಗತ್ಯದ ಚಿಕಿತ್ಸೆಯನ್ನು ಸರ್ಕಾರಿ ವೆಚ್ಚದಲ್ಲಿ ಮಾಡಿಸಲಾಗುತ್ತದೆ. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ. ಇಲ್ಲಿನ ಸಿಡಿಪಿಒ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಬಗ್ಗೆ ಶಿಕ್ಷಕಿಯರಿಗೆ ಆದೇಶ ನೀಡಿದ್ದಾರೆ. ಅಂತೆಯೇ ತಾಲೂಕಿನಲ್ಲಿ ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸಲಾಗುತ್ತಿದೆ.
ಕ್ಷೀರಭಾಗ್ಯ: ಸರ್ಕಾರದ ಮಹತ್ವದ ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತಿದೆ. ಎಲ್ಲ ಮಕ್ಕಳಿಗೂ 15 ಗ್ರಾಂ ಹಾಲಿನ ಪುಡಿಯಲ್ಲಿ 150 ಮಿ.ಲೀ.ನೀರನ್ನು ಬೆರೆಸಿ ಕುಡಿಸಲಾಗುತ್ತಿದೆ. 3 ವರ್ಷದವರೆಗಿನ ಮಕ್ಕಳಿಗೆ ಮನೆಗಳಿಗೆ ನೀಡಲಾಗುತ್ತದೆ. 3-6 ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲೇ ವಿತರಿಸಲಾಗುತ್ತದೆ.
ಮೊಟ್ಟೆ ವಿತರಣೆ: ಸಾಧಾರಣದ ತೂಕದ ಮತ್ತು ಕಡಿಮೆ ತೂಕದ ಮಕ್ಕಳಿಗೆ ವಾರದಲ್ಲಿ 3ದಿನ ಮೊಟ್ಟೆಗಳನ್ನು ವಿತರಿಸಲಾಗುತ್ತಿತ್ತು. ಅಂಗನವಾಡಿ ಶಿಕ್ಷಕಿಯರೇ ತಮ್ಮ ಸ್ವಂತ ದುಡ್ಡಿನಿಂದ ಮೊಟ್ಟೆ ಖರೀದಿಸಿ ನಂತರ ಹಣ ಪಡೆಯುವಂತಿತ್ತು. ಆದರೆ ಈಗ ಆ ವ್ಯವಸ್ಥೆ ಇಲ್ಲವಾಗಿದೆ. ಅಲ್ಲದೇ ಮೊಟ್ಟೆಗಳನ್ನು ನೀಡುವುದು ಕೈಬಿಟ್ಟಿದ್ದಾರೆ. ತಾಲೂಕಿನಲ್ಲಿ 367 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 263 ಕೇಂದ್ರಗಳು ಸ್ವಂತ ಕಟ್ಟಡದಲ್ಲಿವೆ. ಉಳಿದ 104 ಕೇಂದ್ರಗಳು ಸಮುದಾಯ ಭವನ, ಗುಡಿ ಗುಂಡಾರಗಳಲ್ಲಿ, ಗ್ರಾಂ.ಪ. ಕಟ್ಟಡದಲ್ಲಿ ಪ್ರಾಥಮಿಕ ಶಾಲೆಯಲ್ಲಿ, ಮತ್ತು ಬಾಡಿಗೆಯಲ್ಲಿ ಅವಲಂಬಿಸಿವೆ. 25-30, 35ರ ಅಂಗನವಾಡಿ ಕೇಂದ್ರಗಳಿಗೆ ಒಂದು ವಲಯ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 14 ವಲಯಗಳಿವೆ. 3-4 ತಿಂಗಳಿಗೊಂದು ಗ್ಯಾಸ್ ಬೇಕಾಗುತ್ತದೆ. ಅಂಗನವಾಡಿ ಮಕ್ಕಳ ಆರೋಗ್ಯ, ಆಟ ಪಾಠಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ತಾಲೂಕಿನಲ್ಲಿ ಅಪೌಷ್ಟಿಕತೆ ವಿರುದ್ಧ ಇಲಾಖೆ ಸಮರ ಸಾರಿದೆ. ಪ್ರತಿ ವರ್ಷ ಹೀಗೆ ಅಪೌಷ್ಟಿಕತೆ ಇಳಿಮುಖವಾದಾಗ ಸರ್ಕಾರದ ಯೋಜನೆಗಳಿಗೆ ಅರ್ಥ ಬರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

