ಗುಲ್ಬರ್ಗಾ

ಆದರ್ಶ ಬದುಕಿಗೆ ಬೇಕು ಬಸವ ಸಂದೇಶ

Published On :

ಸುರಪುರ: ಜಾತಿರಹಿತ ಹಾಗೂ ವರ್ಗರಹಿತ ಸಮಾಜ ರಚನೆಗೆ 900 ವರ್ಷಗಳ ಹಿಂದೆಯೇ ಕ್ರಾಂತಿಯ ಬೀಜಗಳನ್ನು ನೆಟ್ಟ ಬಸವಣ್ಣ ಸಮಗ್ರ ಯುಗ ಪುರುಷ ಹಾಗೂ ಕಾಯಕದ ನಾಯಕ. ಸಮಾಜದಲ್ಲಿನ ಅಂಕು-ಡೊಂಕು, ಮೇಲು-ಕೀಳುಗಳನ್ನು ತೊಡೆಯುವ ಮೂಲಕ ಎಲ್ಲರೂ ಒಂದೇ ಎಂಬ ಬೀಜವನ್ನು ಬಿತ್ತಿದ ಮಹಾ ಮಾನವತಾವಾದಿ ಮತ್ತು ಸಮಾನತೆಯ ಹರಿಕಾರ ಎಂದು ಪ್ರಗತಿಪರ ಚಿಂತಕ ಸಿದ್ರಾಮಪ್ಪ ಬಾಲಪ್ಪಗೋಳ ಪ್ರತಿಪಾದಿಸಿದರು.
ಸಮಾನತೆ: ಸಮೀಪದ ತಿಮ್ಮಾಪುರದ ಗುಂಡಾನೋರ್ ನಿವಾಸದಲ್ಲಿ ಏರ್ಪಡಿಸಿದ್ದ ಬಸವ ತತ್ವ ಸಮಾವೇಶದಲ್ಲಿ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ಸಮಾಜದ ಜನರನ್ನು ಒಗ್ಗೂಡಿಸುವ ಮೂಲಕ ಈ ನಾಡಿನಲ್ಲಿ ಸಮಾನತೆ ಬೆಳೆಸುವಲ್ಲಿ ಶ್ರಮಿಸಿದರು ಎಂದರು.
ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಅಸ್ಪೃಶ್ಯತೆ, ಲಿಂಗ ತಾರತಮ್ಯ, ಮೇಲು ಕೀಳು ಎಂಬ ಜಾತಿ ವ್ಯವಸ್ಥೆಯನ್ನು ಸರಿದಾರಿಗೆ ತರಲು ಸಮಾಜದಲ್ಲಿ-ಜನತೆಯಲ್ಲಿ ಜಾಗೃತಿಯನ್ನು ಮತ್ತು ವೈಚಾರಿಕತೆ ಮೂಡಿಸುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು ಎಂದರು.
ಅಭಿವೃದ್ಧಿ: ಕಾಯಕದ ಮೂಲಕ ದೇವರನ್ನು ಕಾಣಿ ಎಂದ ಬಸವಣ್ಣನವರ ನುಡಿಮುತ್ತು ಅರ್ಥ ಮಾಡಿಕೊಂಡು ಕರ್ತವ್ಯ ಪಾಲಿಸಿದರೆ ದೇಶ ಎಲ್ಲ ವಿಧದಲ್ಲಿಯೂ ಅಭಿವೃದ್ಧಿಗೊಳ್ಳುತ್ತದೆ. ಬಸವಣ್ಣನವರ ಬದುಕು, ಬರಹ, ಸಾಮಾಜಿಕ ಕೊಡುಗೆಗಳು ಅಪಾರವಾಗಿವೆ. ಎಲ್ಲ ಕಾಲಕ್ಕೂ ಪ್ರಸ್ತುತ ಆಗಬಲ್ಲ ಅವರ ತತ್ವ ಸಂದೇಶಗಳು ನಮಗೆಲ್ಲ ಆದರ್ಶ ಎಂದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್ ಸಮಾವೇಶ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಬಸಣ್ಣ ಬೂದೂರ, ಬಾಗೋಡಿ ಚನ್ನಬಸವ ಮೂತರ್ ಶರಣಬಸಪ್ಪ ಕಲ್ಲಾ ಮಾತನಾಡಿದರು. ಶರಣಪ್ಪ ಗುಡುದಿನ್ನಿ ರಚಿಸಿದ ಶ್ರೀ ನೀಲಕಂಠ ಎನ್ನುವ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಚನ್ನಮಲ್ಲಿಕಾರ್ಜುನ ಗುಂಡಾ ಸ್ವಾಗತಿಸಿದರು. ಶಿವಣ್ಣ ಇಜೇರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.