ಗುಲ್ಬರ್ಗಾ

ಇಳುವರಿಯಲ್ಲಿ ನಷ್ಟ; ವರದಿ ಶೀಘ್ರ ಸಿದ್ಧ

Published On :

ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ತೊಗರಿ ಒಟ್ಟು 48,555 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅಲ್ಪಾವಧಿ ತಳಿಗಳಾದ ಟಿಎಸ್‌ಆರ್ 3 ತೊಗರಿಯೂ ಮಾಗುವ ಮತ್ತು ಕಟಾವಿನ ಹಂತದಲ್ಲಿದೆ.
ಆದರೆ, ದೀರ್ಘಾವಧಿ ತಳಿಗಳಾದ ಮಾರುತಿ, ಡಬಲ್ ಮೂಕಿ, ಬಿಎಸ್‌ಆರ್ ಮತ್ತು ಆಶಾ ತಳಿಗಳು ನೆನೆ ಹಾಗೂ ಹೂ ಮತ್ತು ಚಳ್ಳಿ ಹಂತದಲ್ಲಿದ್ದು, ಬೆಳೆಗಳು ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಮುಂಜಾವಿನ ಜಾವದಲ್ಲಿ ಮಂಜು ಬಿದ್ದ ಕಾರಣದಿಂದ ನೆನೆ ಹೂ ಮತ್ತು ಚೆಳ್ಳಿ ಉದುರಿದ್ದು ಕಂಡು ಬಂದಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ತಿಳಿಸಿದ್ದಾರೆ.
ವಿಜ್ಞಾನಿಗಳ ತಂಡದೊಂದಿಗೆ ಕೃಷಿ ಅಧಿಕಾರಿಗಳು ತೊಗರಿ ಬೆಳೆಯ ಐನೋಳಿ, ದೇಗಲಮಡಿ, ಕೊಳ್ಳುರ, ಫತ್ತೇಪುರ, ನಾಗಾಇದಲಾಯಿ, ತುಮಕುಂಟಾ, ಸಾಲೇಬೀರನಳ್ಳಿ, ಚಿಮ್ಮನಚೋಡ, ಐನಾಪುರ, ಚೇಂಗಟಾ, ಪಸ್ತಪುರ, ರುಮ್ಮನಗೀಡ, ಕರಚಖೇಡ, ಭಕ್ತಂಪಳ್ಳಿ, ಸುಲೇಪೇಟ್, ಗಡಿಕೇಶ್ವರ, ರಾಯಕೋಡ, ಹೋಡೇಬೀರನಳ್ಳಿ ಮತ್ತು ಕೊರವಿ ಮುಂತಾದ ಹೂ ಮತ್ತು ನೆನೆ ಉದುರಿದ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಲಾಗಿದೆ. ಆದರೆ ತಾಲೂಕಿನಲ್ಲಿ ಹಾನಿಗೊಳಗಾದ ಕ್ಷೇತ್ರ ಮತ್ತು ಎಷ್ಟು ಇಳುವರಿಯಲ್ಲಿ ನಷ್ಟದ ಬಗ್ಗೆ ರೈತರಿಗೆ ಮತ್ತು ಸರ್ಕಾರಕ್ಕೆ ವರದಿ ನೀಡಲಾಗುವುದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.