ಗುಲ್ಬರ್ಗಾ

ಸಾಮೂಹಿಕವಾಗಿ ಏಳು ನೌಕರರ ಅಮಾನತು!

Published On :

ಗುಲ್ಬರ್ಗ: ಸಾರಿಗೆ ಸಂಸ್ಥೆಯಲ್ಲಿನ ದಬ್ಬಾಳಿಕೆಗೆ ಕೊನೆಯೇ ಇಲ್ಲದಂತಾಗಿದೆ. ಕರ್ತವ್ಯಕ್ಕೆ ಗೈರು ಹಾಜರಿ ನೆಪದಲ್ಲಿ ಆಳಂದ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ 7 ನೌಕರರನ್ನು ಡಿ.16ರಂದು ಸಾಮೂಹಿಕವಾಗಿ ಅಮಾನತು ಮಾಡಲಾಗಿದೆ. ಉತ್ತಮ ಸೇವೆಗಾಗಿ ಪ್ರಶಸ್ತಿ ಪಡೆದವರು, ಅನಾರೋಗ್ಯ, ಕಣ್ಣಿನ ತೊಂದರೆ ಎಂದು ಮುಂಚೆ ಮಾಹಿತಿ ನೀಡಿದವರು, ಮನೆಯಲ್ಲಿ ತೊಂದರೆ, ತುಸು ವಿಳಂಬವಾಗಿ ಸೇವೆಗೆ ಬರುವ ಸೂಚನೆಯನ್ನು ಬುಕಿಂಗ್ ಅಧಿಕಾರಿಗೆ ಮುಂಚೆಯೇ ನೀಡಿದವರಿಗೂ ಶಿಸ್ತುಕ್ರಮದ ಪೆಟ್ಟು ನೀಡಲಾಗಿದೆ.
ಆಳಂದ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕರಾದ ನಾಮದೇವ, ಲಾಡಪ್ಪ, ದೇವೀಂದ್ರಪ್ಪ, ಭೀಂರಾವ, ಹಾಗೂ ಚಾಲಕ ಕಂ- ನಿರ್ವಾಹಕರಾದ ಮುತ್ತಣ್ಣ, ಅರ್ಜುನ, ಶ್ರೀಕಾಂತ ಅಮಾನತುಗೊಂಡ ನೌಕರರು. ಚಾಲಕ ಕಂ- ನಿರ್ವಾಹಕ ಮುತ್ತಣ್ಣ ಸರಸಂಬಾ ಸಂಸ್ಥೆಗೆ ಸೇರಿದಾಗಿನಿಂದ ಗೈರುಹಾಜರಿ ಎಂಬ ಆರೋಪ ಹೊತ್ತಿಲ್ಲ. ಬೆಸ್ಟ್ ಕಂಡಕ್ಟರ್ ಎಂದು ಎರಡು ಬಾರಿ ಅವಾರ್ಡ್ ಪಡೆದಿದ್ದರೂ ತುರ್ತು ಕೆಲಸದ ನಿಮಿತ್ತ ಭಾನುವಾರ ರಜೆ ತೆಗೆದುಕೊಂಡಿದ್ದ. ಸೋಮವಾರ ವಾರದ ರಜೆ ಇದ್ದಿದ್ದರಿಂದ ಬಂದಿರಲಿಲ್ಲ. ಆದರೆ, ಮಂಗಳವಾರ ಕೆಲಸಕ್ಕೆ ಬಂದಾಗ ಮೇಲಧಿಕಾರಿಗಲು ಅಮಾನತು ಆದೇಶ ನೀಡಿದ್ದಾರೆ.  ನಿವೃತ್ತಿ ಅಂಚಲ್ಲಿರುವ ಚಾಲಕ ನಾಮದೇವ ಅನುಭವಿಸುತ್ತಿರುವ ಕಣ್ಣಿನ ತೊಂದರೆ, ತಪಾಸಣೆಗೆ ಹೋಗಿರುವ ವಿಚಾರ ಡೀಪೋ ಮ್ಯಾನೇಜರ್‌ನಿಂದ ಹಿಡಿದು ಎಲ್ಲರಿಗೂ ಗೊತ್ತಿದೆ. ಆದರೂ ಅಮಾನತು ಶಿಕ್ಷೆಗೆ ಒಳಗಾದವರ ಪಟ್ಟಿಯಲ್ಲಿ ಅವರ ಹೆಸರು ಪ್ರತ್ಯಕ್ಷವಾಗಿದೆ. ಮನೆಯಲ್ಲಿ ಕುಟುಂಬ ಸದಸ್ಯರಿಗೆ ಹುಷಾರಿಲ್ಲ, ತುಸು ವಿಳಂಬವಾಗಿ ಕೆಲಸಕ್ಕೆ ಬರುತ್ತೇನೆಂದು ಇಬ್ಬರು ಸಿಬ್ಬಂದಿ ತಮ್ಮ ಕರ್ತವ್ಯದ ಅವಧಿ ಮುಂಚೆಯೇ ಬುಕಿಂಗ್ ಸೆಕ್ಷನ್‌ಗೆ ಮಾಹಿತಿ ನೀಡಿದ್ದರೂ ಅಮಾನತುಗೊಂಡಿದ್ದಾರೆ. ಇನ್ನುಳಿದವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.

- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.