ಗಣಿತದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ
ಗುರುಮಠಕಲ್: ಗಣಿತ ವಿಷಯ ಕಡೆ ಮಕ್ಕಳು ಆಸಕ್ತಿ ಬೆಳೆಸಿಕೊಳಬೇಕು ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಾರುತಿ ಹುಜರಾತಿ ಹೇಳಿದರು. ಗುರುಮಠಕಲ್ನ ಗಾಂಧಿ ಮೈದಾನದ ಅವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ಜೀ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಗಣಿತ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಮೂಲಭೂತ ಶಿಕ್ಷಣದ ಪರಿಕಲ್ಪನೆ ಸಹಕಾರಿಯಾಗಲು ಉತ್ಸವ ಸಹಕಾರಿ. ಪ್ರತಿಯೊಬ್ಬರೂ ಉದ್ಯೋಗಿಗಳಾಗಿ, ವ್ಯವಹಾರದ ಕೌಶಲ್ಯ ವೃದ್ಧಿಗೊಳ್ಳಲು ಇದು ಮಾರ್ಗದರ್ಶನವಾಗಿದೆ ಎಂದರು. ಅನ್ವೇಷಕರಾಗಿ ಹೊಸ ಸಿದ್ಧಾಂತಗಳನ್ನು ಮಂಡಿಸುವ ಕಲೆ ಶಿಸ್ತಿನ ಜೀವನಕ್ಕೆ ಸಹಕಾರಿ. ದೇಶದ ಅಭಿವೃದ್ಧಿ ತಂತ್ರಗಾರಿಕೆಗೆ ಹಾಗೂ ಆರ್ಥಿಕವಾಗಿ ಸದೃಢವಾಗಲು, ಗಣಿತದತ್ತ ಮಕ್ಕಳ ಆಸಕ್ತಿ ಬೆಳೆಸಿದಾಗ ಕಾರ್ಯ ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅದ್ಯಕ್ಷ ಪಿ. ಕಿಷ್ಟಪ್ಪ ಮಾತನಾಡಿದರು. ಇಸಿಒ ದೇವಿಂದ್ರಪ್ಪ, ವೆಂಕಟರಡ್ಡಿ, ನಾರಾಯಣ ರಡ್ಡಿ, ಭೀಮಪ್ಪ, ಚಂದ್ರಕಾಂತ ರಡ್ಡಿ ಸೇರಿದಂತೆ ಕ್ಲಸ್ಟರ್ ಶಾಲೆಗಳ ಮಕ್ಕಳು ಶಿಕ್ಷಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

