ವಿತರಣಾ ಕಾಲುವೆಗೆ ಅಡ್ಡಿ; ನೀರು ಸ್ಥಗಿತ
ಹುಣಸಗಿ: ಕೃಷ್ಣಾ ಭಾಗ್ಯ ಜಲ ನಿಗಮದ ವಿತರಣಾ ಕಾಲುವೆಯ (ನಂ. 6) ದ್ವಾರದ ಬಳಿ ಕಲ್ಲೊಂದು ಕಾಲುವೆಗೆ ಅಡ್ಡವಾಗಿ ಬಿದ್ದ ಕಾರಣ, ಕಾಲುವೆಯಲ್ಲಿ ಸರಾಗವಾಗಿ ನೀರು ಬಾರದಂತಾಗಿತ್ತು. ಇದರಿಂದ ರೈತರು ತೀವ್ರ ಕಂಗಾಲಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗಮನ ಹರಿಸಿರಲಿಲ್ಲ: ಕೆಲ ದಿನಗಳ ಹಿಂದೆಯೇ ಘಟನೆ ಸಂಭವಿಸಿದ್ದು, ರೈತರಿಗೆ ಆಗ ಅಷ್ಟೇನು ನೀರಿನ ಅಗತ್ಯವಿಲ್ಲದ್ದರಿಂದ ಯಾರು ಕಾಲುವೆಯ ಕಡೆ ಗಮನ ಹರಿಸಿದ್ದಿಲ್ಲ. ಆದರೆ ಇದೀಗ ಮುಂದಿನ ಹಂಗಾಮಿನ ಬತ್ತ ನಾಟಿಗಾಗಿ ನೀರಿನ ಅಗತ್ಯವಿರುವುದರಿಂದ ಪರಿಸ್ಥಿತಿ ಎಲ್ಲರಿಗೂ ಮನವರಿಕೆಯಾಗಿದೆ ಎಂದು ರೈತ ಹೊನ್ನಕೇಶವ ದೇಸಾಯಿ ತಿಳಿಸಿದರು.
ಸದ್ಯ ರೈತರು ನೀರಿನ ದಾಹ ತಾಳದಂತಾಗಿ ಕಷ್ಟಪಟ್ಟು ಮುಖ್ಯ ಕಾಲುವೆಯಿಂದ ಪೈಪ್ ಮೂಲಕ ವಿತರಣಾ ಕಾಲುವೆಗೆ ಹಾಕಿ ನೀರು ಪಡೆಯುತ್ತಿದ್ದಾರೆ.ಆದರೂ ರೈತರಿಗೆ ಸಾಕಾಗುವಷ್ಟು ನೀರು ಬಾರದಂತಾಗಿದೆ.
ಆತಂಕ: ಈ ಬಗ್ಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಕಂಡು ಲಿಖಿತವಾಗಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಪಾದಿಸಿದರು. ಈ ವಿತರಣಾ ಕಾಲುವೆಯಿಂದ ಒಂದು ಸಾವಿರಕ್ಕೂ ಹೆಚ್ಚು ಎಕರೆಗಳಿಗೆ ನೀರುಣಿಸಲಾಗುತ್ತಿದೆ. ಎಲ್ಲರಿಗೂ ಮುಂದಿನ ಹಂಗಾಮಿಗೆ ಬತ್ತ ನಾಟಿ ಮಾಡುವ ಧಾವಂತದಲ್ಲಿರುವುದರಿಂದ ರೈತರು ಆತಂಕಗೊಳ್ಳಲು ಕಾರಣವಾಗಿದೆ. ಕಾಲುವೆ ದ್ವಾರದಲ್ಲಿ ಕಲ್ಲೊಂದು ಅಡ್ಡವಾಗಿದೆ.
ಅದನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೀಘ್ರವೇ ಎಂದಿನಂತೆ ನೀರು ಹರಿಯುವಂತೆ ಮಾಡಲಾಗುವುದೆಂದು ಸ್ಥಳಕ್ಕೆ ಭೇಟಿ ನೀಡಿದ ನಿಗಮದ ಹುಣಸಗಿ ಉಪವಿಭಾಗದ ಎಇ ಅಶೋಕಕುಮಾರ್ ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಆರ್.ಎಂ. ರೇವಡಿ, ರೈತ ಮಲ್ಲಣ್ಣ ದೇಸಾಯಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

