ಗುಲ್ಬರ್ಗಾ

ನಾಳೆ ಸುರಪುರ ಪುರಸಭೆ ವಿರುದ್ಧ ಧರಣಿ

Published On :

ಸುರಪುರ: ಸ್ಥಳೀಯ ಪುರಸಭೆಯ ನಾಗರಿಕರಿಗೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ನಾಳೆ ಶನಿವಾರ ದಿ.21 ರಂದು ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ರಾಜೂಗೌಡರ ನೇತೃತ್ವದಲ್ಲಿ ಪುರಸಭೆ ಕಾರ್ಯಾಲಯದ ಮುಂದೆ ಒಂದು ದಿನದ ಧರಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪುರಸಭೆ ಪ್ರತಿಪಕ್ಷದ ನಾಯಕ ವೇಣುಮಾಧವ ನಾಯಕ ಹೇಳಿದ್ದಾರೆ.
ಪುರಸಭೆಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಾರ್ಯಾಲಯಕ್ಕೆ ಬರುವುದಿಲ್ಲ ಮತ್ತು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಪಟ್ಟಣದಲ್ಲಿ ಕುಡಿವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿ, ನೈಮಲ್ಯ ವ್ಯೆವಸ್ಥೆ ಹದಗೆಟ್ಟು ಹೋಗಿದೆ. ಅನೇಕ ತಿಂಗಳಿಂದ ಬೀದಿಗಳು ಕತ್ತಲಲ್ಲಿ ಕೊಳೆಯುತ್ತಿವೆ. 2012-13ರ ಬರ ಪರಿಹಾರ ಕಾಮಗಾರಿ ಅಡಿಯಲ್ಲಿ ಅವ್ಯವಹಾರವಾಗಿದೆ ಎಂದು ದೂರಿದ್ದಾರೆ. ಪುರಸಭೆಯಲ್ಲಿ ವೈಯಕ್ತಿಕ ಅನುದಾನದಡಿಯಲ್ಲಿ ಬರುವ ಶೇ.22.75, ಶೇ.7.25, ಶೇ.3ರ ಮತ್ತು ಬಿಆರ್ಜಿಎಪ್ ಅನುದಾನ, ಎಸ್ಜೆಎಸ್‌ಆರ್‌ವೈ ಅನುದಾನ ಸದ್ಭಳಿಕೆಯಾಗಿಲ್ಲ. ಡಾ. ಅಂಬೇಡ್ಕರ್ ಭವನ ಪ್ರಾರಂಭಿಸಿಲ್ಲ. ಅಂಬೇಡ್ಕರ್ ವೃತ್ತ ನವೀಕರಣ ಹಾಗೂ ಮೂರ್ತಿ ಉದ್ಘಾಟನೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಾವಿಗಳು ಹೊಳು ತುಂಬಿ ಹೋಗಿದ್ದು, ಅವನ್ನು ಸ್ವಚ್ಛಗೊಳಿಸಿಲ್ಲ. ಹಸನಾಪುರದ ರಾಜಾ ನಾಲ್ವಡಿ ವೆಂಕಟಪ್ಪನಾಯಕ ವೃತ್ತ ನವೀಕರಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪುರಸಭೆ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಪುರಸಭೆ ಸದಸ್ಯರು, ಮುಖಂಡರು, ಕಾರ್ಯಕರ್ತರು ಮತ್ತು ವಾಜಪೇಯಿ ವಸತಿ ನಿಗಮದ ಎಲ್ಲ ಫಲಾನುಭವಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆಂದು ವೇಣುಮಾಧವ ನಾಯಕ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.