ಗುಲ್ಬರ್ಗಾ

ನೌಕರರ ಪಿಂಚಣಿ ಹಿಂಬಾಕಿ ಹಣಕ್ಕೆ ಮನವಿ

Published On :

ಕ.ಪ್ರ. ವಾರ್ತೆ  ಅಫಜಲ್ಪುರ  ಡಿ.19
ರಾಜ್ಯ ಸರ್ಕಾರ 2006ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಆದರೆ 2010 ರಲ್ಲಿ ಜಾರಿಗೆ ಬಂದ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಹಿಂಬಾಕಿ ವೇತನವನ್ನು ಸರ್ಕಾರ ನೌಕರರಿಗೆ ನೀಡುತ್ತಿಲ್ಲ. ಇದರಿಂದ ನೌಕರರು ತೊಂದರೆ ಅನುಭವಿಸುವಂತಾಗಿದೆ ಎಂದು ಶಿಕ್ಷಕ ಶಿವಾನಂದ ಸ್ವಾಮಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಶಶೀಲ್ ನಮೋಶಿ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತ, ಈ ಹಿಂದೆ ಆದೇಶಿಸಿದ ಹಾಗೆ ಸರ್ಕಾರಿ ನೌಕರರ ಪಿಂಚಣಿಯನ್ನು ನೌಕರರ ಪಿಂಚಣಿ ಖಾತೆಗೆ ನೇರವಾಗಿ ವರ್ಗಾಯಿಸಬೇಕಾಗಿತ್ತು. ಆದರೆ ಈಗ ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿ ಬಂದ ದಿನಾಂಕದಿಂದಲೇ ನೀಡುತ್ತೇವೆ. ಹಿಂಬಾಕಿ ಹಣವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದೆ ಎಂದರು.
ಹೀಗಾಗಿ ಸರ್ಕಾರ ಈ ಆದೇಶವನ್ನು ಹಿಂಪಡೆದು ಹಿಂಬಾಕಿ ಹಣವನ್ನು ನೌಕರರ ಪಿಂಚಣಿ ಖಾತೆಗೆ ನೇರ ಜಮಾವಣೆಯಾಗುವಂತೆ ಒತ್ತಡ ಹೇರುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನಮೋಶಿ, ಈ ಕುರಿತು ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನಂತರ ಅವರು ತಾಲೂಕಿನ ಗಡಿ ಗ್ರಾಮಗಳಾದ ಮಾಶಾಳ, ಮಣ್ಣುರ, ಕರ್ಜಗಿ, ಉಡಚಾಣ, ಹೊಸೂರ, ಅಂಕಲಗಿ ಗ್ರಾಮಗಳು ಸೇರಿದಂತೆ ಇತರ ಗ್ರಾಮಗಳಿಗೆ ಭೇಟಿ ನೀಡಿ ಶಾಲೆಗಳ ಸಮಸ್ಯೆಗಳನ್ನು ವಿಚಾರಿಸಿದ್ದು, ಕೆಲವು ಕಡೆ ಸಣ್ಣ ಪುಟ್ಟ ಸಮಸ್ಯೆಗಳಿದ್ದು ಅವುಗಳನ್ನು ಸರಿಪಡಿಸುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಕೆಆರ್‌ಇಐಎಸ್ ಎಂಬ ಸಂಸ್ಥೆಯ ಅಡಿಯಲ್ಲಿ ನಡೆಯುವ ಮೂರಾರ್ಜಿ ದೇಸಾಯಿ ಕಿತ್ತೂರು ಚೆನ್ನಮ್ಮ, ಏಕಲವ್ಯ ವಸತಿ ಶಾಲೆಗಳು ನಡೆಯುತ್ತಿದ್ದು, ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ ಹಾಗೂ ಹಲವಾರು ವಿಷಯಗಳ ವಿಶೇಷ ಶಿಕ್ಷಕರು ಇಲ್ಲದಿರುವುದು ಕಂಡು ಬಂದಿದ್ದು ಬಹಳ ನೋವಿನ ಸಂಗತಿ ಎಂದರು.
ರವಿಕಾಂತ ಎಸ್. ಬಿರಾದಾರ, ಸಿದ್ದು ಚಿಂಚೋಳಿ, ಎಚ್.ಎಲ್. ಕಂಬಾರ, ಸುರೇಶ ಕುಮಸಗಿ, ಮಂಜುನಾಥ ರಾಠೋಡ, ಶಂಕರಲಿಂಗ ಬಳ್ಳೋಳಿ, ಶಿವುಕುಮಾರ್ ನಾಲತವಾಡ, ಶ್ರೀನಿವಾಸ ಜೋಶಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.