ವೈಜ್ಞಾನಿಕ ಮನೋಭಾವಕ್ಕೆ ವಿಜ್ಞಾನ ಮೇಳ ಸಹಕಾರಿ
ಹುಣಸಗಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಮೂಲಕ ವಿಜ್ಞಾನ ಮೇಳಗಳು ಸಹಕಾರಿಯಾಗುತ್ತವೆ ಎಂದು ಮಾರ್ಗದರ್ಶಕ ಶ್ರೀಹರಿ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಸಮೀಪದ ಕೋಳಿಹಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ಜೀ ಫೌಂಡೇಶನ್ ಸಹಯೋಗದಲ್ಲಿ ನಡೆದ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರು ಬದುಕಬೇಕಾದರೆ ವಿಜ್ಞಾನವನ್ನು ಚನ್ನಾಗಿ ಅರಿತುಕೊಳ್ಳಬೇಕೆಂದು ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳು ಗಾಳಿಯಿಂದ ವಿದ್ಯುತ್ ಉತ್ಪಾದನೆ, ಬೆಳಕಿನ ಪಾಶ್ರ್ವ ಪಲ್ಲಟ, ಸೈಫಾನ್ ಕಾರಂಜಿ, ಪೆರಿಸ್ಕೋಪ್, ಬೆಂಕಿಇಲ್ಲದ ಜ್ವಾಲೆ, ಚಟಪಟಿಸುವ ಚುರ್ಣ, ನೀರಿನ ಮೇಲ್ಮುಖ ಒತ್ತಡ, ಸೌರಮಂಡಲ, ವಸ್ತುವಿಕಸನ, ಶ್ವಾಸಕೋಶ, ರಕ್ತ ಪರಿಚಲನಾ ಕ್ರಿಯೆ, ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ, ತುಂಟ ಮುಚ್ಚಳ ಸೇರಿದಂತೆ ಅನೇಕ ಮಾದರಿಗಳ ಬಗ್ಗೆ ನೆರೆದವರಿಗೆ ಮಾಹಿತಿ ವಿವರಿಸಿದರು.
ಗ್ರಾಪಂ ಅಧ್ಯಕ್ಷೆ ದಾನಾಬಾಯಿ ಚವ್ಹಾಣ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಿಕ್ಷಣ ಪ್ರೇಮಿ ಮೋತಿಲಾಲ ಚವ್ಹಾಣ ಉದ್ಘಾಟಿಸಿದರು. ಸಿಆರ್ಪಿ ಶಿವಪುತ್ರಪ್ಪ, ಯಲ್ಲಪ್ಪ ಚಂದನಕೇರಿ, ಮುಖ್ಯ ಶಿಕ್ಷಕ ಎಸ್.ಡಿ. ಪಾಟೀಲ್, ಬಾಸು ರಾಠೋಡ, ನಿಂಗಣ್ಣ ಚವ್ಹಾಣ, ತಾರಾನಾಥ ರಾಠೋಡ, ಅಶೋಕ ದೇಸಾಯಿ, ಮಲ್ಲಪ್ಪ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶ್ರೀಶೈಲ್ ತಿಳ್ಳೊಳ್ಳಿ ನಿರೂಪಿಸಿದರು. ಬಸಯ್ಯ ಮಠಪತಿ ಸ್ವಾಗತಿಸಿ, ವಿಠ್ಠಲ್ ಚವ್ಹಾಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

