ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಇಂದು ಬಿಸ್ಮಿಲ್ಲಾ ದಿನಾಚರಣೆ
ಗುಲ್ಬರ್ಗ: 19ನೇ ಶತಮಾನದ ಸ್ವಾತಂತ್ರ್ಯ ಹೋರಾಟದ ನಾಯಕ ಶಹೀದ್ ಅಷ್ಪಾಕ್ ಉಲ್ಲಾ ಖಾನ ಹಾಗೂ ರಾಮಪ್ರಸಾದ್ ಬಿಸ್ಮಿಲ್ಲಾ ಹುತಾತ್ಮ ದಿನಾಚರಣೆಯನ್ನು ಡಿ.20 ರಂದು ಇನಾಂದಾರ್ ಕಾಲೇಜಿನ ಸೆಂಟ್ರಲ್ ಕಾಮತ್ ಮೇಲೆ ಬೆಳಗ್ಗೆ 11ಕ್ಕೆ ಆಚರಿಸಲಾಗುವುದು. ಅಖಿಲ ಭಾರತ ತಂಜೀಮೆ ಇನಸಾಫ್ ಹೈ-ಕ ವಿಭಾಗೀಯ ಅಧ್ಯಕ್ಷ ಹುಸ್ತಾದ್ ಸಾದತ್ ಹುಸೇನ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಬಸಣ್ಣ ಸಿಂಗೆ, ಇನಾಂದಾರ್ ರಿಜನಲ್ ಮತ್ತು ಏಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಖಮರುಝಾಮ ಹುಸೇನಿ ಇನಾಂದಾರ, ಕನವಿನರ್ ಮಾಲಾಮುಲ್ಲಾ, ಖಜಾಂಜಿ ಸೂರ್ಯಕಾಂತ, ಗುಲ್ಬರ್ಗ ಜಿಲ್ಲಾ ಕನವಿನರ್ ಹೆಚ್.ಎಂ. ಪಟೇಲ್ ಕಾರ್ಯದರ್ಶಿ ಮಹ್ಮದ್ ಜಿಯಾಯೊದ್ದೀನ್  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ನ್ಯಾಯವಾದಿ ಭೀಮಾಶಂಕರ ಮಾಡಿಯಾಳ ತಿಳಿಸಿದ್ದಾರೆ.
ಜ.5ರಂದು ಪ್ರತಿಭಾ ಪುರಸ್ಕಾರ
ಗುಲ್ಬರ್ಗ: ಭೋವಿ (ವಡ್ಡರ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬರುವ ಜನವರಿ 5ರಂದು ನಗರದ ವಿಶ್ವೇಶ್ವರ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭೋವಿ (ವಡ್ಡರ) ಸಮಾಜ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ರಾಮ ದಂಡಗುಲಕರ್ ತಿಳಿಸಿದ್ದಾರೆ. ಪ್ರಸಕ್ತ 2012-13ನೇ ಸಾಲಿನಲ್ಲಿ ಪಾಸಾದ ಎಸ್‌ಎಸ್‌ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಶೇ.60ಕ್ಕೂ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಡಿ.28 ರೊಳಗಾಗಿ ವಿಠ್ಠಲ್ ನೆಲೋಗಿ, ಮನೆ. 11- 779/37ಎ, ಭಗತಸಿಂಗ್ ಚೌಕ್, ವಡ್ಡರಗಲ್ಲಿ, ಬ್ರಹ್ಮಪುರ, ಗುಲ್ಬರ್ಗ- 585303 (ಮೊಬೈಲ್ 9900633209, 7795245596).
ರಾಷ್ಟ್ರೀಕೃತ ಬ್ಯಾಂಕ್ ಖಾತೆ ಕಡ್ಡಾಯ
ಗುಲ್ಬರ್ಗ: ಪ.ಜಾ. ಮತ್ತು ಪಂಗಡದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಶಿಷ್ಯ ವೇತನ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆ ತೆರೆಯುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಎಲ್ಲ ವಿದ್ಯಾರ್ಥಿಗಳಿಗೆ 2012-13ನೇ ಸಾಲಿನ ಶಿಷ್ಯ ವೇತನವನ್ನು ಮಂಜೂರು ಮಾಡಿ ಅವರವರ ಖಾತೆಗೆ ಜಮಾಯಿಸಲಾಗಿದೆ. ಕೆಲವೊಂದು ವಿದ್ಯಾರ್ಥಿಗಳ ಖಾತೆ ಸಂಖ್ಯೆಗಳು ಡೋರಮಂಟ್ ಆಗಿದ್ದು, ಶಿಷ್ಯ ವೇತನ ಜಮೆ ಮಾಡಲು ತೊಂದರೆಯಾಗುತ್ತಿದೆ. ವಿಶೇಷವಾಗಿ ಹಲವಾರು ವಿದ್ಯಾರ್ಥಿಗಳು ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆ ಸಂಖ್ಯೆ ಹೊಂದಿರುವ ವಿದ್ಯಾರ್ಥಿಗಳ ಖಾತೆ ಸಂಖ್ಯೆ ಡೋರಮಂಟ್ ಆಗಿರುವ ಪ್ರಯುಕ್ತ ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.