ಹುಣಸಗಿ; ನೀರಿನ ಗೊಂದಲ, ಗ್ರಾಪಂನಲ್ಲಿ ಖಾಲಿ ಕೊಡಗಳು
ಹುಣಸಗಿ: ಇಲ್ಲಿನ ವಾರ್ಡ್ ನಂ.4ರ ನಿವಾಸಿಗಳಿಗೆ ಸರಿಯಾದ ನೀರಿನ ಪೂರೈಕೆ ಆಗುತ್ತಿಲ್ಲವೆಂದು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಖಾಲಿ ಕೊಡಗಳೊಂದಿಗೆ ಮಹಿಳೆಯರು ಸೇರಿದಂತೆ ಪಂಚಾಯತ್ ಆವರಣದಲ್ಲಿ ಕುಳಿತು ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು.
ಸುಮಾರು 50 ಕ್ಕಿಂತ ಹೆಚ್ಚು ವರ್ಷಗಳ ಹಳೆಯದಾಗಿರುವ ಇಲ್ಲಿನ ಪೈಪ್ಲೈನ್ ಮುಖಾಂತರ ನೀರು ಹರಿಸಲಾಗುತ್ತದೆ. ಇಗೀಗ ಮನೆಗಳ ಸಂಖ್ಯೆಯು ಹೆಚ್ಚಾಗಿವೆ. ಆದಕಾರಣ ನೀರು ಸಮರ್ಪಕವಾಗಿ ಸಿಗುತ್ತಿಲ್ಲ.
ವಾರ್ಡ್ ನಂ.4ರ ನೀಲಕಂಠೇಶ್ವರ ದೇವಸ್ಥಾನದಿಂದ ಅಗಸಿಯವರೆಗಿನ ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಮತ್ತು ತಮಗೆ ನೆನಪಾದಾಗಲೆಲ್ಲ ನಸುಕಿನ 3,4 ಗಂಟೆಗೆ ನೀರು ಬಿಡುತ್ತಾರೆ. ಬೇಸಿಗೆಯಲ್ಲಾದರೆ ಪರವಾಗಿಲ್ಲ ಹೇಗೋ ಬೇಗನೆ ಎದ್ದು, ನೀರಿಗಾಗಿ ಕಾಯುತ್ತೇವೆ. ಆದರೆ ಚಳಿಯಲ್ಲಿ ನೀರಿಗೋಸ್ಕರ ಕಾಯ್ಕೊಂಡು ಕುರುವಂತಾಗಿದೆ ಎಂದು ಅಲ್ಲಿನ ನಿವಾಸಿ ಬಸಮ್ಮ ಮರಾಠಿ ಆರೋಪಿಸಿದರು.
ಮೋಟರ್ ಇರುವವರಿಗೆ: ನೀರಿನ ಮೋಟರ್ ಇರುವವರಿಗೆ ಮಾತ್ರ ನೀರು ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆಯು ಇರುವುದಿಲ್ಲ ಎಂದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ, ಈ ಮೊದಲು ಯಾವುದೇ ಮಾಹಿತಿ ನೀಡದೆ, ಈ ರೀತಿಯಾಗಿ ವರ್ತಿಸುವುದು ತರವಲ್ಲ. ಮೊದಲು ಅರ್ಜಿಯನ್ನು ಕೊಟ್ಟು, ಆ ನಂತರ ಪ್ರಶ್ನಿಸಬೇಕು. ಇದೀಗ ಮಾಹಿತಿ ನನ್ನ ಗಮನಕ್ಕೆ ಬಂದಿದ್ದು, ಇಂದಿನಿಂದ ನೀರು ಸರಿಯಾಗಿ ಪೂರೈಕೆ ಮಾಡಿಸಲಾಗುವುದು ಎಂದು ತಿಳಿಸಿದರು.
ಶಿವನಗೌಡ ಪಾಟೀಲ್, ಬಸವರಾಜ ಆಲ್ದಾಳ, ಪ್ರಭು ಪಡಶೆಟ್ಟಿ, ಸುಭಾಸ ದೇಸಾಯಿ, ರಾಜು ಮಲಗಲದಿನ್ನಿ, ರಾಜಶೇಖರ್ ಖಾನಾಪುರ, ಚೇತನ ಬಾಗೇವಾಡಿ, ಅನ್ನಮ್ಮ ಬಂಡೋಳಿ, ನಿರ್ಮಾಲಾ ರಂಗಂಪೇಠ, ಬಸಮ್ಮ ಮರಾಠಿ, ನೀಲಮ್ಮ ಮರಾಠಿ, ಫಾತೀಮಾ ಬೇಗಂ, ಮಮ್ತಾಜ್ ಬೇಗಂ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

