ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಯುವತಿ ಮೇಲೆ ಹಲ್ಲೆ: ಪ್ರತಿಭಟನೆ
ಯಾದಗಿರಿ: ರಾಯಚೂರು ಸಂಸದ ಸಣ್ಣಫಕೀರಪ್ಪ ಪುತ್ರ ಮುತ್ತು ವೇಶ್ಯಾವಾಟಿಕೆ ಆರೋಪದ ಮೇಲೆ ಯುವತಿ ಹಾಗೂ ಆಕೆಯ ಸ್ನೇಹಿತ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಪ್ರತಿಭಟನೆ ನಡೆಸಿದರು. ನಗರದ ಬಸ್ ನಿಲ್ದಾಣದ ಎದುರುಗಡೆ ಜಮಾಯಿಸಿ ಪ್ರತಿಭಟನಾಕಾರರು, ರಾಯಚೂರು ಸಂಸದ ಸಣ್ಣಫಕೀರಪ್ಪ ಪುತ್ರ ಮುತ್ತು ವಿರುದ್ಧ ಘೋಷಣೆ ಕೂಗಿದರು. ಮಹಿಳೆಯರ ಮೆಲೆ ಹಲ್ಲೆ ಮಾಡಿರುವ ಮುತ್ತು ಅವರನ್ನು ಕೂಡಲೇ ಬಂಧಿಸಬೇಕು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣು ಇಟಗಿ, ತಾಲೂಕು ಅಧ್ಯಕ್ಷ ದೇವು ಪಾಟೀಲ್, ಸಿದ್ದು ರಡ್ಡಿ, ಬಾಪುಗೌಡ, ಹಣಮಂತ, ಭಾಗಣ್ಣ, ಶಿವು, ನಿತ್ಯಾನಂದ ಮತ್ತಿತರರು ಇದ್ದರು.
'ಭವಸಾಗರ ದಾಟಲು ಗುರು ಕೃಪೆ ಬೇಕು'
ಸುರಪುರ: ಮನುಷ್ಯ ಸಂಸಾರ ಜೀವನವನ್ನು ಸುಗಮವಾಗಿ ನಡೆಸಲು ಗುರುವಿನ ಕರುಣೆ ಬೇಕು. ನಾವು ಮಾಡುವಂತ ಪ್ರತಿಯೊಂದು ಕೆಲಸದಲ್ಲಿ ಸದ್ಗುರುವಿನ ಕೃಪೆ ನಮಗೆ ಅವಶ್ಯ ಎಂದು ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರಮುನಿ ಮಹಾಸ್ವಾಮಿ ತಿಳಿಸಿದರು. ತಾಲೂಕಿನ ಕರಡಕಲ್‌ನ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆ ಮತ್ತು 158ನೇ ಶಿವಾನುಭವ ಗೋಷ್ಠಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾನಸಿಕ ಶಾಂತಿ ಹೊಂದಬೇಕಾದರೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳಬೇಕು ಎಂದರು. ಸಾಹಿತಿ ಶಿವರುದ್ರಪ್ಪ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಜ.16 ರಂದು ಮಠದಲ್ಲಿ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. 501 ಮುತ್ತೈದೆಯರಿಗೆ ಉಡಿ ತುಂಬುವುದು, 501 ರೈತ ಭಕ್ತರಿಗೆ ಶಾಲು ಹೊದಿಸುವುದು, 1001 ಜನ ರೈತರಿಗೆ ಉಚಿತ ಸಾಗುವಾನಿ ಸಸಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಚಂದ್ರಶೇಖರಯ್ಯ ಸ್ವಾಮಿ ಯಕ್ತಾಪುರ, ನಿಂಗಣ್ಣ ಶರಣರು, ಶರಣಪ್ಪ ಶರಣರು ಕೈರೊಡಗಿ, ಬಸನಗೌಡ ಪೊಲೀಸ್ ಪಾಟೀಲ್ ದರ್ಶನಾಪುರ, ಭೀಮರೆಡ್ಡಿ ಸೇರಿದಂತೆ ಅನೇಕರಿದ್ದರು. ಶಾಂತಗೌಡ ಮಾಲಿ ಪಾಟೀಲ್, ಸಿದ್ದರಾಜ ಕಾಚಾಪುರ ಸಂಗೀತ ಕಾರ್ಯಕ್ರಮ ಜರುಗಿತು. ಶಿವುಪ್ರಕಾಶ ನಿರೂಪಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ವಂದಿಸಿದರು.
ಉಪನ್ಯಾಸ ಕಾರ್ಯಕ್ರಮ
ಶಹಾಪುರ: ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ಮಾಡಲಾಯಿತು.  ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿದರು.  ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ನಿಂಗಣ್ಣ ಸಿಂಪಿ ಮಾತನಾಡಿದರು. ಪ್ರಾಸ್ತಾವಿಕ ಕೇಂದ್ರದ ಸಂಚಾಲಕ ಸಿದ್ದಪ್ಪ ಸ.ಶಿ, ರವೀಂದ್ರ ಸ.ಶಿ ಸ್ವಾಗತಿಸಿದರು. ತಿಪ್ಪಣ್ಣ ದೋತ್ರೆ ವಂದಿಸಿ, ಈರಯ್ಯ ಹಿರೇಮಠ ಸ.ಶಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲುವೆ ನೀರಿನ ಮಟ್ಟ ಕುಸಿತ: ರೈತರಲ್ಲಿ ಆತಂಕ
ಶಹಾಪುರ: ಅಸಮರ್ಪಕ ಕಾಲುವೆಗಳು ಮತ್ತು ನೀರು ನಿರ್ವಹಣೆಯಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ನೀತಿಯಿಂದ ತಾಲೂಕಿನ ಕೊನೆ ಅಂಚಿನ ಕುರಕುಂದಾ ಗ್ರಾಮದ ಡಿ91 ಮುಖ್ಯ ಕಾಲುವೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದೆ. ಉಪಕಾಲುವೆಗಳಲ್ಲಿ ನೀರು ಹರಿಯದೇ ಶೇಂಗಾ ಇನ್ನಿತರ ಬೆಳೆಗಳು ಬಾಡುತ್ತಿದ್ದು, ರೈತರ ಸ್ಥಿತಿ ಗಂಭೀರವಾಗುತ್ತಿದೆ ಎಂದು ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟದ ಸಂಚಾಲಕ ನಿಂಗಣ್ಣಾಕೋಂಬೆನೊರ್ ಅಧಿಕಾರಿಗಳ ತಾರತಮ್ಯ ನೀತಿಗೆ ಅಸಮಧಾನ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ದೂರುಸಲ್ಲಿಸಿದ್ದಾರೆ. ಸದ್ಯ ಇರುವ ಬೆಳೆಗಳಿಗೆ ನೀರಿನ ಕೊರತೆಯಾಗಿದ್ದು, ವಿಪರೀತ ಚಳಿ ಇರುವ ದಿನದಲ್ಲಿಯೂ ರೈತವರ್ಗ ರಾತ್ರಿಯಿಡಿ ಹೊಲಕ್ಕೆ ನೀರು ಬಿಡಲು ಓಡಾಡುವ ಸ್ಥಿತಿ ಬಂದಿದೆ. ಕುರಕುಂದಾ ಭಾಗದ ರೈತರಿಗೆ ಒಂದೇ ಬೆಳೆಗೆ ಸಾಕಾಗುವಷ್ಟು ನೀರು ಬರುತ್ತಿಲ್ಲ. ಪಾಲನೆ ಪೋಷಣೆ ಹೆಸರಿನಲ್ಲಿ ಕಾಲುವೆ ರಿಪೇರಿಗೆ ಖರ್ಚು ಬಿದ್ದಿದೆ ಹೊರತಾಗಿ ಕಾಲುವೆಗಳು ಸಂಪೂರ್ಣ ಹದಗೆಟ್ಟಿವೆ. ಉತ್ತಮ ಇಳುವರಿ ಬರುವಂತಾಗಲು ಅಧಿಕಾರಿಗಳು ಇನ್ನಾದರು ಪರಿಶೀಲಿಸಿ ನೀರು ಹರಿಸುವ ಮೂಲಕ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಇಂದು ಸಂಕಷ್ಟ ಚತುರ್ಥಿ
ಕೆಂಭಾವಿ: ಸಮೀಪದ ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮಿ ಬಾಬಾ ಮಹಾರಾಜ ಮಠದಲ್ಲಿ ಶುಕ್ರವಾರ ಸಂಜೆ ಸಂಕಷ್ಟ ಚತುರ್ಥಿ ಆಚರಿಸಲಾಗುವುದು ಎಂದು ಮಠದ ವಕ್ತಾರ ಗಣೇಶ ಮಹಾರಾಜ ತಿಳಿಸಿದ್ದಾರೆ.  ಸ್ಪಷ್ಟನೆ ನೀಡಿರುವ ಅವರು, ಇಂದಿನ ದಿನವೇ ಸಂಕಷ್ಟ ಚತುರ್ಥಿ ಬಂದಿದ್ದು, ಇಂದು ಮಠದಲ್ಲಿರುವ ಸ್ವಯಂಭೂ ಸಿದ್ಧಿವಿನಾಯಕನಿಗೆ ವಿಶೇಷ ಪೂಜೆ ನೆರವೇರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.