ಗುಲ್ಬರ್ಗಾ

ಕಬ್ಬಲಿಗ ಸಮಾಜ ತಬ್ಬಲಿಯಾಗಿದೆ: ಮುದ್ನಾಳ

Published On :

ಶಹಾಪುರ: ನೇರ ನುಡಿಯ ನಿಷ್ಠುರವಾದಿ ಶೋಷಿತ ವರ್ಗಗಳ ಗಟ್ಟಿ ಧ್ವನಿಯಾಗಿದ್ದ ದಿವಂಗತ ವಿಠ್ಠಲ್ ಹೆರೂರ್ ಅಗಲಿಕೆಯಿಂದಾಗಿ ಕಬ್ಬಲಿಗ ಸಮಾಜ ತಬ್ಬಲಿಗಳಾಗಿವೆ ಎಂದು ಜಿಲ್ಲಾ ಕಬ್ಬಲಿಗ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ ಅಭಿಪ್ರಾಯಪಟ್ಟರು.
ಪಟ್ಟಣದ ಹಳಿಸಗರದ ಅಂಬಿಗರ ಚೌಡಯ್ಯ ಮಠದ ಆವರಣದಲ್ಲಿ ಏರ್ಪಡಿಸಿದ್ದ ದಿ. ವಿಠ್ಠಲ್ ಹೆರೂರ್ ನುಡಿನಮನ ಸಭೆಯಲ್ಲಿ ಮಾತನಾಡಿದ ಅವರು, ಸದಾ ಗೊಡ್ಡು ಆಚಾರಗಳ ಪ್ರತಿಭಟಿಸುತ್ತಿದ್ದುದ್ದಲ್ಲದೇ ಅಧಿಕಾರದ ಆಸೆಗಾಗಿ ಯಾರೊಂದಿಗೂ ರಾಜಿಯಾಗದೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ನಿಜ ಹೋರಾಟಗಾರ ಅವರು ಸಮಾಜದ ಬಗ್ಗೆ ಕಂಡ ಕನಸು ನನಸು ಮಾಡುತ್ತಾ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯೋಣ ಎಂದು ಹೇಳಿದರು.
ಡಾ. ಮೋನಪ್ಪ ಶಿರವಾಳರು ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ಚರಬಸವ ಕಮಾನದಿಂದ ಹಳಿಸಗರದ ಅಂಬಿಗರ ಚೌಡಯ್ಯ ಮಠದ ವರೆಗೆ  ಮೌನ ಮೆರವಣಿಗೆ ಮಾಡಿ, ಒಂದು ನಿಮಿಷ ಮೌನಾಚರಣೆ ಮಾಡಿದರು. ಗಿರೆಪ್ಪಗೌಡ ಬಾಣತಿಹಾಳ, ನೀಲಕಂಠ ಬಡಿಗೇರ ನಿಂಗಣ್ಣ ಬೇವಿನ ಹಳ್ಳಿ ಸೇರಿದಂತೆ ಅನೇಕರು ಮಾತನಾಡಿದರು. ತಾಲೂಕ ಸಮಾಜದ ಅಧ್ಯಕ್ಷ ಮಹಾದೇವಪ್ಪ ಸಾಲಿಮನಿ, ಸಣ್ಣನಿಂಗಪ್ಪ ನಾಯ್ಕೋಡಿ, ರಾಮಾಂಜನೇಯ, ಡಾ. ಇಂದಿರಾ ಶಕ್ತಿ, ಶೋಭಾ ಬಾಣೆ, ಬಸಣ್ಣ ಸಿಂಘೆ, ತಿಪ್ಪಣ್ಣಪ್ಪ, ಗೋಪಾಲ ಸುರಪುರ, ಹೆರೂರ್ ಸಹೋದರರು. ಪಿಡ್ಡಪ್ಪ, ಚನ್ನಬಸ್ಸು, ಅಯ್ಯಣ್ಣ, ನಾಗಪ್ಪ ತಹಸೀಲ್ದಾರ್, ವಿನೋದ ಮಸ್ಕಿಕರ್, ರಮೇಶ ಹಳಿಸಗರ ಇದ್ದರು. ಜೇವಗರ್, ಚಿತ್ತಾಪುರ, ಗಾಣಗಾಪುರ, ಅಫಜಲ್ಪುರ ಜನ ಭಾಗವಹಿಸಿದ್ದರು. ನಾಗೇಂದ್ರಪ್ಪ ನಿರೂಪಿಸಿದರು. ನಿಜಲಿಂಗಪ್ಪ ವಡಗೇರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.