ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಶಿಕ್ಷಣದಿಂದ ಅಭಿವೃದ್ಧಿ
ಹುಣಸಗಿ: ಪ್ರತಿಯೊಬ್ಬರು ವಿದ್ಯಾವಂತರಾದಾಗ ಮಾತ್ರ ಸಮುದಾಯದ ಅಭಿವೃದ್ಧಿಯಾಗಲು ಸಾಧ್ಯ. ಎಸ್‌ಡಿಎಮ್ಸಿಗಳು ಪ್ರಾಥಮಿಕ ಶಿಕ್ಷಣದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕೆಂದು ಹುಣಸಗಿ ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ ಅಭಿಪ್ರಾಯ ಪಟ್ಟರು. ಪಟ್ಟಣದ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಎಸ್‌ಡಿಎಮ್ಸಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಇರುತ್ತೆ ಹೋಗುತ್ತದೆ. ಆದರೆ ಅಧಿಕಾರದಲ್ಲಿದ್ದಾಗ ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದರು. ಮುಖ್ಯ ಶಿಕ್ಷಕ ಬಸನಗೌಡ ಚೌದರಿ ಮಾತನಾಡಿದರು. ಪಿಡಿಒ ಬಸವರಾಜ ತಂಬಾಕಿ ಮಾತನಾಡಿದರು. ಭೀಮಣ್ಣ ವಾಲ್ಮೀಕಿ, ಹಣಮಂತ್ರಾಯ ಬೈಚಬಾಳ, ಪ್ರತೀಕ ಬೆಣ್ಣೂರು, ಬಸವರಾಜ ಬನ್ನೆಟ್ಟಿ, ಬಂದಗಿಸಾಬ ಸದಬ ಸೇರಿದಂತೆ ಕ್ಲಸ್ಟರ್‌ನ ಎಸ್‌ಡಿಎಮ್ಸಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು. ದೈಹಿಕ ಶಿಕ್ಷಕ ತುಕಾರಾವ್ ನಿರೂಪಿಸಿದರು. ಈರಯ್ಯ ಕೊಳ್ಳಿ ವಂದಿಸಿದರು.
ನೂತನ ಎಸ್‌ಡಿಎಂಸಿ ರಚನೆ
ಕೆಂಭಾವಿ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ನೂತನ ಎಸ್‌ಡಿಎಂಸಿ ರಚನೆ ಬುಧವಾರ ಮಾಡಲಾಯಿತು. ಅಧ್ಯಕ್ಷರಾಗಿ ಮಹಬೂಬಸಾಬ ದಫೇದಾರ, ಉಪಾಧ್ಯಕ್ಷ ಮೇರಾಜಬೇಗಂ ಕಲಕೇರಿ, ಸದಸ್ಯರಾಗಿ ಮೌಲಾನಾ ಗಾಲಿಬಖಾನ, ಅಬ್ದುಲ್ ವಾಹೀದ ಮೇತ್ರೆ, ಜಾಫರಸಾಬ ಸಾಸನೂರ, ಆಬಿದಹುಸೇನ ಖಾಜಿ, ಬಂದೇನವಾಜ ಬಸರಿ, ಬಂದೇನವಜ ಕಾಚಾಪುರ, ಮೇರಾಜ ಬೇಗಂ ದರ್ಗಾ, ಶಹಬಾಜ ಕಲಕೇರಿ, ಅನ್ವರ ಜಹಾಂ ಖಾಜಿ, ಮುಮತಾಜಬಿ ನಾಸಿ, ಹಸೀನಾಬೇಗಂ ನಾನಾಗೌಡ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆ ತಾಪಂ ಸದಸ್ಯ ಖಾಜಾಪಟೇಲ ಕಾಚೂರ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಪದ್ಮಾವತಿ ದೇವರಮನಿ, ಅಭಿವೃದ್ಧಿ ಅಧಿಕಾರಿ ಅನ್ಸರ್‌ಪಟೇಲ ಉಪಸ್ಥಿತರಿದ್ದರು. ಮೌಲಾನಾ ಸೈಯದ ಹುಸೇನ ನಿರೂಪಿಸಿ, ವಂದಿಸಿದರು.
ಮಂದಿರ, ಮೂರ್ತಿ ಪ್ರತಿಷ್ಠಾಪನೆ
ಗುರುಮಠಕಲ್: ದೇವಾಲಯಗಳು ಅಧ್ಯಾತ್ಮಿಕ ಶಕ್ತಿ ಕೇಂದ್ರಗಳು ಇವುಗಳ ನಿರ್ಮಾಣದಿಂದ ಮಾನಸಿಕ ನೆಮ್ಮದಿಯ ಜೊತೆ ಮನುಷ್ಯನಿಗೆ ಆದ್ಯತ್ಮಿಕ ಶಕ್ತಿ ಲಭ್ಯವಾಗುತ್ತದೆ ಎಂದು ಗುರುಮಠಕಲ್ ಖಾಸಮಠದ ಪೀಠಾಧಿಪತಿ ಗುರುಮುರುಘರಾಜೇಂದ್ರ ಶ್ರೀ ತಿಳಿಸಿದರು. ಪಟ್ಟಣದ ಕಟ್ಟೇಲಗೇರಾ ಬಡವಣೆಯಲ್ಲಿ ನೂತನ ಮಂದಿರ ಹಾಗೂ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿ, ದೇವಾಲಯಗಳು, ಮಠಗಳಿರುವುದರಿಂದ ದೇಶದ ಸಂಸ್ಕೃತಿ- ಪರಂಪರೆ ಉಳಿದಿದೆ ಎಂದರು. ಜಿಪಂ ಅಧ್ಯಕ್ಷ ಭೀಮಮ್ಮ ಕೃಷ್ಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಪ್ಪಾರ ಸಮಾಜ ಸೇರಿಸಲು ಮನವಿ
ಯಾದಗಿರಿ: ಭಗೀರಥ ಉಪ್ಪಾರ ಸಮಾಜ ಎಸ್‌ಟಿಗೆ ಸೇರಿಸುವಂತೆ ಆಗ್ರಹಿಸಿ ಭಗೀರಥ ಉಪ್ಪಾರ ಸಮಾಜದ ಪದಾಧಿಕಾರಿಗಳು ಗುಲ್ಬರ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.  ಉಪ್ಪಾರ ಸಮಾಜವು ಆರ್ಥಿಕ ಸಮಾಜಿಕ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಸಾಕಷ್ಟು ಹಿಂದುಳಿದಿದ್ದು, ಇದರಿಂದ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ.  ರಾಜ್ಯ ಉಪ್ಪಾರ ಸಮಾಜದ ರಾಜಾಧ್ಯಕ್ಷ ಎಚ್.ಸಿ. ನೀರಾವರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದಿದ್ದಾರೆ.
ಕಲ್ಲದೇವನಹಳ್ಳಿ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಹುಣಸಗಿ: ಸಮೀಪದ ಕಲ್ಲದೇವನಹಳ್ಳಿಯ ಶ್ರೀ ಖಾಸ್ಗತೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ಸುರಪುರನಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಕಿರಿಯರ ವಿಭಾಗದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಶಾಲೆಯ ಬಾಲಕರಾದ ರಮೇಶಕುಮಾರ್, ಅಭಿಷೇಕ, ಪ್ರವೀಣಕುಮಾರ್ ಹಾಗೂ ಪ್ರಮೋದಯ್ಯ ಪ್ರಥಮ ಸ್ಥಾನ ಗಳಿಸಿ ಯಾದಗಿರಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.