ಗುಲ್ಬರ್ಗಾ

'ಜಿಲ್ಲಾ ಹಿರಿಯ ನಾಯಕರಿಂದ ಹೆರೂರ್‌ಗೆ ಅನ್ಯಾಯ'

Published On :

ಗುಲ್ಬರ್ಗ/ಶಹಾಬಾದ್: ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ವಿಠ್ಠಲ್ ಹೆರೂರ್‌ರ ಸಂಘಟನೆ ಲಾಭವನ್ನು ಪಡೆದಿದ್ದು, ಜಿಲ್ಲೆ ಹಿರಿಯ ನಾಯಕರಿಂದ ಅವರಿಗೆ ರಾಜಕೀಯವಾಗಿ ಅನ್ಯಾಯವಾಗಿದೆ ಎಂದು ಜಿಪಂ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಗುರುಶಾಂತ ಪಟ್ಟೇದಾರ ಆರೋಪಿಸಿದರು.
ನಗರದ ಜಗದಂಬಾ ದೇವಸ್ಥಾನದಲ್ಲಿ ಇತ್ತೀಚೆಗೆ ನಿಧನರಾದ ವಿಧಾನಸಭೆಯ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೆರೂರ್‌ಗೆ ಅಭಿಮಾನಿ ಬಳಗದಿಂದ ನುಡಿ ನಮನ ಹಾಗೂ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವನವಿಡಿ ಹೋರಾಟ: ಕೋಲಿ ಸಮಾಜದ ಸಂಘಟನೆಗೆ, ಈ ಸಮಾಜವನ್ನು ಪರಿಶಿಷ್ಠ ಪಂಗಡದಲ್ಲಿ ಸೇರಿಸಲು ಜೀವನವಿಡಿ ಹೋರಾಟ ನಡೆಸಿದ್ದರು. ಅದರ ಫಲವಾಗಿ ಈಗಾಗಲೇ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಬೇಕಾಗುವ ಎಲ್ಲ ಕಡತಗಳನ್ನು ಸಿದ್ದಪಡಿಸಿದ್ದು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಪ್ರಯತ್ನಿಸಿದರೆ ಚಳಿಗಾಲದ ಅಧಿವೇಶನದಲ್ಲಿ ಸಂಸತ್‌ನಲ್ಲಿ ಚರ್ಚಿಸಿ, ಕೇವಲ ಒಂದು ತಿಂಗಳ ಒಳಗಾಗಿ ಎಸ್‌ಟಿಗೆ ಸೇರಿಸುವ ಕಾರ್ಯ ಮಾಡಬಹುದಾಗಿದೆ ಎಂದು ಹೇಳಿದರು.
ವಿಠ್ಠಲ್ ಹೆರೂರ್ ಸಾವಿನ ಹಿಂದೆ ರಾಜಕೀಯ ಷಡ್ಯಂತ್ರವಿದ್ದು, ಆರೋಗ್ಯ ಗುಣವಾಗುವಂತಿದ್ದರು, ಸಮರ್ಪಕ ವೈದ್ಯಕೀಯ ಚಿಕಿತ್ಸೆ ನೀಡದೆ ಕೊಲ್ಲಲಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸಿಒಡಿ ತನಿಖೆ ನಡೆಸಿ, ಅವರ ಸಾವಿನ ಹಿಂದಿನ ಪಿತೂರಿಯನ್ನು ಹೊರಗೆ ತರಬೇಕೆಂದು ಆಗ್ರಹಿಸಿದರು.
ರಾಜಿಯಾಗದ ಹೋರಾಟ: ಮಾಜಿ ಸಚಿವ ಸಿ. ಗುರುನಾಥ ಮಾತನಾಡಿ, ಹೆರೂರ್ ಒಬ್ಬ ಸ್ವಾಭಿಮಾನಿ, ಛಲಗಾರ, ಜೀವನ ಪರ್ಯಂತ ಹೋರಾಟದ ಜೀವನವನ್ನು ಆಯ್ಕೆ ಮಾಡಿಕೊಂಡು, ತಾವು ನಂಬಿದ ಸಿದ್ಧಾಂತಗಳಿಗಾಗಿ ಯಾರೊಂದಿಗೂ ರಾಜಿಯಾಗಿದೆ ಹೋರಾಟ ನಡೆಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳವಾರ, ದಲಿತ ಮುಖಂಡ ಸುರೇಶ ಮೆಂಗನ್, ಕರಾದಸಂಸ ತಾಲೂಕು ಸಂಚಾಲಕ ಕೃಷ್ಣಪ್ಪ ಕರಣಿಕ, ಉಪನ್ಯಾಸಕ ಡಾ.ಎಂ.ಎಸ್. ಶಿರವಾಳ, ಕಸಾಪ ಅಧ್ಯಕ್ಷ ಸಂತೋಷಕುಮಾರ್ ಇಂಗಿನಶೆಟ್ಟಿ, ಜೆಡಿಎಸ್ ಮುಖಂಡ ಮಹ್ಮದ್ ಉಬೇದುಲ್ಲಾ ಮಾತನಾಡಿದರು.
ನಗರಸಭೆ ಸದಸ್ಯರಾದ ಡಾ. ಅಹ್ಮದ್ ಪಟೇಲ್, ಸಾಬಣ್ಣ ಬೆಳಗುಂಪಿ, ರಾಮಕುಮಾರ್ ಸಿಂಘೆ, ಬಿಜೆಪಿ ಅಧ್ಯಕ್ಷ ಶಾಂತಕುಮಾರ್ ದಂಡಗುಲಕರ್, ಮುಖಂಡರಾದ ದೇವೆಂದ್ರ ಅರಣಕಲ್, ಭೀಮರಾವ ಸಾಳೊಂಕೆ, ಡಿ.ಎಂ. ಇಗಟಿಕರ್, ಮಲ್ಲಣ್ಣ ಸಣಮೋ, ಈರಣ್ಣ ಇಂಗಳಗಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.