ಸಾಹಿತ್ಯ ಸೃಷ್ಟಿಗೆ ಗಂಭೀರ ಅಧ್ಯಯನ ಅಗತ್ಯ
ಕನ್ನಡಪ್ರಭ ವಾರ್ತೆ ಶಹಾಪುರ ಡಿ.25
ಇಂದು ಯುವಕರು ಸಾಹಿತ್ಯದ ಬರವಣಿಗೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ ಮತ್ತು ಬರವಣಿಗೆಯ ಜೊತೆಗೆ ಶಿಸ್ತುಬದ್ಧ ಗಂಭೀರ ಅಧ್ಯಯನದ ಅಗತ್ಯವಿದೆ ಎಂದು ಬೆಳಗಾವಿಯ ರಾಣಿಚೆನ್ನಮ್ಮ ವಿವಿ ಕುಲಸಚಿವ ಡಾ. ರಂಗರಾಜ ವನದುರ್ಗ ತಿಳಿಸಿದರು.
ಶಹಾಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಹೃದಯಿ ಬಳಗ ಹಮ್ಮಿಕೊಂಡ ವಿಶಾಲ ಸಿಂಧೆ ದೊರನಹಳ್ಳಿಯವರ ಸವಿ ಸವಿ ನೆನಪು ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃತಿ ಬಿಡುಗಡೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಮಾನುಷಯ್ಯ ಐಕೂರ, ಸುರೇಶ ಕಲ್ಮನಿ, ಭೀಮಾಶಂಕರ, ಶರಣು ಕಲ್ಮನಿ ಮುಂತಾದವರು ಬಯಲಾಟ ನೃತ್ಯದ ಮೂಲಕ ವಿಭಿನ್ನವಾಗಿ ಕೃತಿ ಬಿಡುಗಡೆ ನಡೆಯಿತು. 23ರಂದು ನಿಧನ ಹೊಂದಿದ ಜೆ.ಎಸ್. ಶಿವರುದ್ರಪ್ಪರಿಗೆ ಮೌನ ಆಚರಣೆ ಮಾಡಿದ ನಂತರ ಮಹೇಶ ಪತ್ತಾರ ಗೀತ ಮನಮ ಸಲ್ಲಿಸಿದರು. ಕನ್ನಡ ಉಪನ್ಯಾಸಕಿ ನಯನ ಕೆ.ಜೆ. ಕೃತಿ ವಿಮರ್ಶೆ ಮಾಡಿದರು.
ಪತ್ರಕರ್ತ ಶಿವರಂಜನ್ ಸತ್ಯಂಪೇಟ, ಡಾ. ಶೈಲಜಾ ಬಾಗೇವಾಡಿ, ಡಾ. ಬಸವರಾಜ ಇಜೇರಿ ಮುಂತಾದವರು ಮಾತನಾಡಿದರು. ಸಾಹಿತಿ ಬುದ್ಧಘೋಷ ದೇವಿಂದ್ರಪ್ಪ ಹೆಗ್ಡೆ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಪ್ರೊ. ಸೂಗಯ್ಯ ಹಿರೇಂಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕಿ ಹಣಮಂತಿ ನಿರೂಪಿಸಿದರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಬೂದಯ್ಯ ಹಿರೇಮಠ, ಮಹೇಶ ಪತ್ತಾರ, ಸ್ವಾತಿ, ಶಿಲ್ಪಾ, ಮೇಘಾ, ರಾಮಕೃಷ್ಣಾ ಮುಂತಾದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಶ್ವಿನಿ ಗೋಗಿ ಸ್ವಾಗತಿಸಿದರು. ಪರಿಮಳ ಒಡಿಯರ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ಅನವಾರ, ಮೇಘಾ, ಮಹಾಲಕ್ಷ್ಮೀ ಅತಿಥಿಗಳನ್ನು ಪರಿಚಯಿಸಿ, ಹ್ಯಯಾಳಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

