ಕಾಂಪೌಂಡ್ ನಿರ್ಮಾಣಕ್ಕೆ ಶಾಸಕರ ಭರವಸೆ
ಸುರಪುರ: ಇಲ್ಲಿಯ ಉರ್ದು ಶಾಲೆಯ ಕಾಂಪೌಂಡ್ ಗೋಡೆ ನಿರ್ಮಿಸಿಲು ತಮ್ಮ ಅನುದಾನದಲ್ಲಿ ಒದಗಿಸುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ ನೀಡಿದರು.
ಸಮೀಪದ ರಂಗಂಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಉರ್ದು ಶಿಕ್ಷರ ಸಂಘ ಸಂಯುಕ್ತವಾಗಿ ಗುರುವಾರ ತಾಲೂಕು ಮಟ್ಟದ ಉರ್ದು ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಮೇಳ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ನೇಮಕ: ತಾಲೂಕಿನಲ್ಲಿ ಸಾಕಷ್ಟು ಶಿಕ್ಷಕರ ಕೊರತೆ ಇದೆ. ಅದರಲ್ಲಿಯು ಉರ್ದು ಶಿಕ್ಷಕರ ಸಮಸ್ಯೆ ಹೆಚ್ಚಾಗಿದೆ. ಈ ಬಾರಿ ನೇಮಕಾತಿ ನಂತರ ತಾಲೂಕಿಗೆ ಕೊರತೆಯಾಗದಂತೆ ಪೂರ್ಣ ಶಿಕ್ಷಕರನ್ನು ಒದಗಿಸಲು ಪ್ರಯತ್ನಿಸಿದ್ದೇನೆ. ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಬಗ್ಗೆ ನನಗೆ ಮಾಹಿತಿ ನೀಡಿದರೆ ತಕ್ಷಣವೇ ನಿಯೋಜನೆಗೆ ಕ್ರಮ ಕೈಗೊಳ್ಳುತ್ತೇನೆ. ಮಕ್ಕಳ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿಯಾಗಿರುವುದರಿಂದ ಪ್ರತಿ ಮಕ್ಕಳ ಕಲಿಕೆಗೆ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಬೇಕು. ಈ ಬಾರಿ ಹೆಚ್ಚಿನ ಫಲಿತಾಂಶ ತರಲು ಎಲ್ಲಾ ಶಿಕ್ಷಕರು ಪ್ರಯತ್ನಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಕ್ಷೇತ್ರ ಸಮನ್ವಯ ಅಧಿಕಾರಿ ಮಹಾದೇವ ರಡ್ಡಿ, ಸಿಆರ್ಸಿಗಳಾದ ರಾಮಣ್ಣ ಪೂಜಾರಿ, ಜಾಕೀರ ಹುಸೇನ್, ಮಹಾದೇವಪ್ಪ ಗುತ್ತೇದಾರ, ಪುರಸಭೆ ಸದಸ್ಯರಾದ ದಾವಲಸಾಬ್ ಚಿಟ್ಟಿವಾಲೆ, ಮಹಿಬೂಬ್ ಒಂಟಿ, ಪುರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಗಫಾರ ನಗನೂರಿ, ಪ್ರಮುಖರಾದ ಅಬ್ದುಲ್ ಅಲೀಂ ಗೋಗಿ, ಶಿವುಕುಮಾರ ಎಲಿಗಾರ, ನಾಸೀರ ಹುಸೇನ್ ಕುಂಡಾಲೆ ದೇವರಾಜ ಪಾಟೀಲ, ಶಾಲೆ ಪ್ರಗು. ಮಹ್ಮದ್ ಯುನೂಸ್ ವೇದಿಕೆಯಲ್ಲಿದ್ದರು.
ಶರಣುಕುಮಾರ ಜಾಲಹಳ್ಳಿ, ರಾಮಣ್ಣ, ಸಮುದಾನಿ ಕಚ್ಚಿಬಡಿಗಿ, ಸಾಬೀರ ಹುಸೇನ್ ಕುಂಡಾಲೆ, ಶಕೀಲ ಅಹ್ಮದ್ ಸಗರ, ಶರಣಬಸಮ್ಮ, ಯಾಸೀನಾ ಬೇಗಂ, ಮಹಿಮುನ, ಮನೋಹರ್, ಸಾಬೀರ ಹುಸೇನ್, ಎಕ್ಬಾಲ ಅಹ್ಮದ್ ರಾಯಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

