ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆ
ಗುಲ್ಬರ್ಗ: ನಗರದ ರಾಮನಗರದಿಂದ ಕಾಣೆಯಾದ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿಲ್ಲಿ ಪತ್ತೆಯಾಗಿದ್ದಾಳೆ. ಕೀರ್ತಿ ಅಲಿಯಾಸ್ ಶ್ವೇತಾ ತಂದೆ ಮಾಣಿಕ ಘತ್ತರಗಿ ಎಂಬ 14 ವರ್ಷದ ವಿದ್ಯಾರ್ಥಿನಿ ಡಿ. 29 ರಂದು ಇಲ್ಲಿನ ರಾಮನಗರದಿಂದ ಕಾಣೆಯಾಗಿದ್ದಳು. ಯಾವುದೋ ರೈಲು ಹತ್ತಿ ಈ ವಿದ್ಯಾರ್ಥಿನಿ ಬೆಂಗಳೂರಿಗೆ ಹೋಗಿದ್ದಳು. ಅಲ್ಲಿ ಆಟೋ ಚಾಲಕನೊಬ್ಬ ವಿದ್ಯಾರ್ಥಿನಿಯನ್ನು ವಿಚಾರಿಸಿ, ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರ ವಿಳಾಸ ಪಡೆದು ಬಾಲಕಿಯನ್ನು ಅವರಿಗೊಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿದ್ಯಾರ್ಥಿನಿ ಕಾಣೆಯಾಗಿದ್ದರಿಂದ ಆಕೆಯ ಪಾಲಕರು ತೀವ್ರ ಆತಂಕಕ್ಕೊಳಗಾಗಿದ್ದರು. ಬಾಲಕಿ ಪತ್ತೆಯಾದ ವಿಷಯ ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗೋಳಾ(ಬಿ); 3 ಮನೆ ಕಳವು
ಗುಲ್ಬರ್ಗ: ಆಳಂದ ತಾಲೂಕಿನ ಗೋಳಾ (ಬಿ) ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಮೂರು ಮನೆಗಳು ಕಳುವಾಗಿದ್ದು, ಸುಮಾರು ರು. 2 ಲಕ್ಷ ಮೌಲ್ಯದ ನಗ-ನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಗ್ರಾಪಂ ಪಿಡಿಓ ಶ್ರೀಮಂತ ಬಸಣ್ಣ, ಶಾಂತಾಬಾಯಿ ಶಿವಶರಣಪ್ಪ ಬಿರಾದಾರ, ಲಕ್ಷ್ಮೀಕಾಂತ ರುದ್ರಪ್ಪ ಸವರ್ಣಕರ್ ಎಂಬುವರ ಮನೆಗಳಲ್ಲಿ ಕಳ್ಳತನವಾಗಿವೆ. ಸುದ್ದಿ ತಿಳಿದು ಆಳಂದ ಡಿಎಸ್ಪಿ ಎಸ್.ಎಲ್. ಝಂಡೇಕರ್, ಸಿಪಿಐ ಹಟ್ಟಿ, ನರೋಣಾ ಪಿಎಸ್ಐ ಎಂ.ಎಚ್. ದೊರೆ ಹಾಗೂ ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಶಿವಾನುಭವಗೋಷ್ಠಿಗಳು
ಗುಲ್ಬರ್ಗ: ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದಿಂದ ಎಳ್ಳಾಮವಾಸ್ಯೆ ನಿಮಿತ್ತ ವಿವಿಧ ಶಿವಾನುಭವಗೋಷ್ಠಿಗಳು ಹಮ್ಮಿಕೊಳ್ಳಲಾಗಿದೆ. ಜ. 1ರಂದು ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನಲ್ಲಿ 341ನೇ ಶಿವಾನುಭವಗೋಷ್ಠಿ, ಜೇವರ್ಗಿ ತಾಲೂಕಿನ ಸುಕ್ಷೇತ್ರ ಶಾಖಾಪುರದ ವಿಶ್ವರಾಧ್ಯ ತಪೋವನ ಮಠದಲ್ಲಿ 231ನೇ ಶಿವಾನುವಭಗೋಷ್ಠಿ, ಗುಲ್ಬರ್ಗ ತಾಲೂಕಿನ ಸುಕ್ಷೇತ್ರ ಶ್ರೀನಿವಾಸ ಸರಡಗಿಯಲ್ಲಿ 178ನೇ ಶಿವಾನುಭವಗೋಷ್ಠಿ, ಜ. 6 ರಂದು ಶಹಾಪುರ ತಾಲೂಕಿನ ಸುಕ್ಷೇತ್ರ ಅಪ್ಪನ ಶಾಖಾಪುರ ಮಠದಲ್ಲಿ 158ನೇ ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಪದ್ಮಾವತಿ ನಿಧನ
ಗುಲ್ಬರ್ಗ/ಶಹಾಬಾದ್: ಗುಲ್ಬರ್ಗದ ನಿವಾಸಿ ಪದ್ಮಾವತಿ ವಿ. ಡಿಗ್ಗಿಕರ್(66) ಶನಿವಾರ ಮಧ್ಯರಾತ್ರಿ 1.30ಕ್ಕೆ ಮೃತಪಟ್ಟಿದ್ದಾರೆ. ಮೃತರಿಗೆ ಪತಿ, ಒಬ್ಬ ಪುತ್ರ, 3 ಜನ ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ನೆರವೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

