ಗುಲ್ಬರ್ಗಾ

ನಳದ ಪೈಪ್ ದುರಸ್ತಿಗೆ ನಾಗರಿಕರ ಆಗ್ರಹ

Published On :

ಶಹಾಪುರ: ಪಟ್ಟಣದ ಚರಬಸವ ಕಾಲನಿಯಲ್ಲಿನ ಅಗಸಿ ಹತ್ತಿರ ಸಾರ್ವಜನಿಕ ನಳದ ಪೈಪು ಒಡೆದು ದಿನ ನಿತ್ಯ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ. ಸಂಬಂಧಿಸಿದವರು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆಂದು ಕಾಲನಿಯ ಜನರು ಆರೋಪಿಸಿದ್ದಾರೆ.
ಕಳೆದ ಒಂದು ವಾರಗಳಿಂದ ಪೈಪಿನ ದುರಸ್ತಿಗಾಗಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ರೀಪೇರಿ ಕಾರ್ಯ ಮಂದಗತಿಯಲ್ಲಿ ಕೆಲಸ ಮಾಡುತ್ತ ತಗ್ಗು ತೋಡಿ ಹಾಗೆ ಬಿಟ್ಟಿದ್ದಾರೆ. ಅಲ್ಲದೆ ನೀರು ಪೋಲು ಮಾಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ರಿಪೇರಿಗೆಂದು ಹರವಿದ ತಗ್ಗಿನಲ್ಲಿ ನಿತ್ಯ ಕಲ್ಲು ಮಣ್ಣು ಹಾಕುತ್ತ ಆಟವಾಡುತ್ತಿರುತ್ತಾರೆ. ಪುರಸಭೆ ಸಿಬ್ಬಂದಿ ರಿಪೇರಿಗೆಂದು ಕಳೆದ ವಾರಗಳಿಂದ ತಗ್ಗು ತೋಡಿ ಹಾಗೆ ಬಿಟ್ಟಿದ್ದಾರೆ. ಶಾಲೆಯ ಮಕ್ಕಳು ಸೇರಿದಂತೆ ನಿತ್ಯ ಸಾವಿರಾರು ಜನ ಓಡಾಡುವ ಈ ರಸ್ತೆಯಲ್ಲಿ ಯಾವ ಮಕ್ಕಳು ಈ ತಗ್ಗಿನಲ್ಲಿ ಬೀಳಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ. ನೀರಿಗಾಗಿ ಕೆಲ ವಾರ್ಡ್‌ಗಳಲ್ಲಿ ಸಾಕಷ್ಟು ಜನ ಪರದಾಡಿದರೆ ಇಲ್ಲಿ ನೀರು ಹಾಳುಮಾಡುತ್ತಿದ್ದಾರೆ. ತಕ್ಷಣವೇ ಕಾಳಜಿ ವಹಿಸಲು ಜನತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.