ಗುರು ಕರುಣೆಯಿಂದ ಜನ್ಮ ಸಾರ್ಥಕ: ಶಾಂತ ರುದ್ರಸ್ವಾಮಿ
ಕೆಂಭಾವಿ: ದೇವರ ಮೇಲೆ ನಂಬಿಕೆ ಇಟ್ಟು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗಲು ಸಾಧ್ಯ. ದೇವರನ್ನು ಪೂಜಿಸಬೇಕಾದರೆ ಮೊದಲು ಗುರುಗಳ ಕರುಣೆ ನಮ್ಮೆಲ್ಲರ ಮೇಲೆ ಅಗಬೇಕು. ಅಂಥ ಗುರುಗಳ ಸೇವೆಯನ್ನು ನಾವು ನಿತ್ಯ ಮಾಡಿದಲ್ಲಿ ಜನ್ಮ ಪಾವನವಾಗುತ್ತದೆ ಎಂದು ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತ ರುದ್ರಮುನಿ ಸ್ವಾಮೀಜಿ ಹೇಳಿದರು.
ಸಮೀಪದ ಕರಡಕಲ್ ಮಠದಲ್ಲಿ ನಡೆದ ಬನದ ಹುಣ್ಣಿಮೆ ಸಂಭ್ರಮ, ಮಹಾ ಚಂಡಿ ಹೋಮ, ಹನ್ನೊಂದು ಸಾವಿರ ದೀಪೋತ್ಸವ, 148ನೇ ಶಿವಾನುಭವ ಚಿಂತನ ಹಾಗೂ 2013ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರತಿಯೊಬ್ಬನಲ್ಲಿ ಗುರುಗಳ ಮತ್ತು ದೇವರ ಮೇಲೆ ಭಕ್ತಿ ಬಂದರೆ ದೇಶ ಮತ್ತು ಸಮಾಜ ಉದ್ಧಾರವಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮುದನೂರಿನ ಮಲ್ಲಿಕಾರ್ಜುನ ದೇವರು, ಶರಣಪ್ಪ ಶರಣರು ಖೈನೂರ, ದೊಡ್ಡಯ್ಯ ಶರಣರು ಅರನಾಳ, ವಿರುಪಕ್ಷಸ್ವಾಮಿ ನಾರಾಯಣಪುರ, ಸಿದ್ದನಗೌಡ ವಂದಗನೂರ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ, ಕರವೇ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸುರೇಶಗೌಡ, ಗುರುಸಿದ್ದಪ್ಪಗೌಡ, ಶಂಕರಗೌಡ, ಮಾನಪ್ಪ ಘಂಟಿ, ಮಾನಪ್ಪ ಮೇಸ್ತ್ರಿ, ಮಲ್ಲಣ್ಣ ಹೆಗ್ಗಣದೊಡ್ಡಿ ಇದ್ದರು. ಇದೇ ಸಂದರ್ಭದಲ್ಲಿ ದಾವಣಗೆರೆಯ ಗೌರಮ್ಮ ತಾಯಿ ಇವರಿಂದ ಐದು ದಿನ ಕಾಲ ದೇವಿಯ ಪುರಾಣ ನಡೆಯಿತು. ಭಾಗ್ಯವಂತಿ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಚೋಟೇಶ್ವರ ವೈದಿಕ ಬಳಗ ಸೊಲಾಪುರ ಇವರಿಂದ ಚಂಡಿ ಹೋಮ ನಡೆಯಿತು. ಶಿವಪ್ರಕಾಶ ಹಿರೇಮಠ ಸ್ವಾಗತಿಸಿದರು, ಮಲ್ಲಿಕಾರ್ಜುನ ಹಿರೇಮಠ ನಿರೂಪಿಸಿದರು. ಶರಣು ಭೀಗುಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

