ಗ್ರಾಮಾಭಿವೃದ್ಧಿಗೆ ಇಚ್ಛಾಶಕ್ತಿ ಅಗತ್ಯ
ಶಹಾಪುರ: ಗ್ರಾಮೀಣ ಸಮಸ್ಯೆಗಳ ಪರಿಹಾರ ಹಾಗೂ ಗ್ರಾಮಾಭಿವೃದ್ಧಿಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಬಹುಮುಖ್ಯವಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ಹೊತಪೇಟೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಆಳುವ ಬಿಜೆಪಿ ಸರ್ಕಾರ ಸಾಕಷ್ಟು ತಾರತಮ್ಯ ನೀತಿ ಅನುಸರಿಸಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಿದೆ. ಆದರೂ ವಿವಿಧ ಯೋಜನೆಗಳಲ್ಲಿ ಅಭಿವೃದ್ಧಿಯ ಅನುದಾನದ ಸದುಪಯೋಗ ಪಡಿಸಿಕೊಂಡು ಅವಶ್ಯವಿರುವ ಗ್ರಾಮಗಳಿಗೆ ಅನುದಾನ ಕಲ್ಪಿಸಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದರು.
ಆಲೋಚಿಸಿ ಮತ ನೀಡಿ: ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನರನ್ನು ಘಾಸಿಗೊಳಸಿ ರಾಜ್ಯದ ಬೊಕ್ಕಸವನ್ನೇ ಲೂಟಿ ಮಾಡಿದೆ. ಭ್ರಷ್ಟಾಚಾರ ನಡೆಸಿ ಕೊನೆಗೆ ಜೈಲು ಪಾಲಾದ ಬಿಜೆಪಿ ಮಂತ್ರಿಗಳು ಇಂದು ಕಂಗಾಲಾಗಿದ್ದು, ಸ್ವತಂತ್ರ ಪಕ್ಷ ಸ್ಥಾಪಿಸಿದ್ದಾರೆ. ಜನಪರ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಹಾಳುಗೆಡವಿದ್ದಾರೆ. ಮುಂದಿನ ದಿನಗಳಲ್ಲಿ ಮತದಾರರು ಆಲೋಚಿಸಿ ಮತ ನೀಡಬೇಕೆಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಮುಸಲಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಜಿಪಂ ಅಧ್ಯಕ್ಷೆ ಮರೆಮ್ಮ ಶ್ಯಾಣೆನೋರ, ತಾಪಂ ಅಧ್ಯಕ್ಷೆ ಶಿವುಬಾಯಿ ಶಿವಮಾಂತಪ್ಪ ಚಂದಾಪುರ, ಮಲ್ಲಮ್ಮ ಮಾನಪ್ಪ ಮಕ್ತಾಪುರ, ಚಂದ್ರಶೇಖರ ಆರಬೋಳ, ದರ್ಮಣ್ಣ ಪೂಜಾರಿ, ಸಂಗನಗೌಡ ಪಾಟೀಲ್, ಜುಮ್ಮಣ್ಣ ಬಜಂತ್ರಿ, ಬಸವರಾಜ ವಿಬೂತಿಹಳ್ಳಿ, ಸಂಗಣ್ಣ ಕೊಲ್ಲೂರ, ದೇವಪ್ಪ ಪಟ್ಟೆದಾರ, ನಿಂಗಣ್ಣ ಕಲ್ಲೂರ, ಕಾಶಿಲಿಂಗ, ಖಂಡಪ್ಪಗೌಡ ಪಾಟೀಲ್, ಯಲ್ಲಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

