ನೆಮ್ಮದಿ ಜೀವನಕ್ಕೆ ಉತ್ತಮ ಆರೋಗ್ಯ ಅಗತ್ಯ
ಚಿತ್ತಾಪುರ: ಜೀವನದಲ್ಲಿ ಸಂತಸದಿಂದ ಹಾಗೂ ನೆಮ್ಮದಿಯಿಂದ ಬಾಳಲು ಮನುಷ್ಯನಿಗೆ ಉತ್ತಮ ಆರೋಗ್ಯ ಅಗತ್ಯ ಎಂದು ತಹಸೀಲ್ದಾರ್ ಬಾಲರಾಜ ದೇವರಖದ್ರಾ ಹೇಳಿದರು.
ಇಲ್ಲಿನ ಡಾ. ಓಂ ಇಂಡೋ ಜರ್ಮನ್ ಆಸ್ಪತ್ರೆಯಲ್ಲಿ ಗುಲ್ಬರ್ಗ ಲಯನ್ಸ್ ಕ್ಲಬ್ ಹಾಗೂ ಜ್ಯೋತಿ ಸೇವಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಬಾಲ್ಯದಿಂದಲೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು. ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ಒಳ್ಳೆಯ ತರಕಾರಿ, ಹಣ್ಣು- ಹಂಪಲು ಸೇವಿಸಬೇಕು. ಪ್ರತಿ ದಿನ ಯೋಗ, ವಾಯುವಿಹಾರ ಆಳವಡಿಸಿಕೊಳ್ಳಬೇಕು.
ಆರೋಗ್ಯ ಉತ್ಮಮವಾಗಿದ್ದರೆ ಶೈಕ್ಷಣಿಕವಾಗಿ ಸುಧಾರಣೆಯಾಗಿ ಈ ದೇಶದ ಉತ್ತಮ ನಾಗರಿಕನಾಗಿ ಹೊರಹೊಮ್ಮುತ್ತಾನೆ. ಜತೆಗೆ ಆಯುಷ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಗುಲ್ಬರ್ಗ ನೃಪತುಂಗ ಲಯನ್ಸ್ ಕ್ಲಬ್ ಅಧ್ಯಕ್ಷ ಮಧೂಸೂದನ್ ಶಾಸ್ತ್ರೀ, ತಹಸೀಲ್ದಾರ್ ಮಲ್ಲೇಶ ತಂಗಾ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಕ್ಲಬ್ ಹಿರಿಯ ಸದಸ್ಯೆ ಸುನಂದಾ ಮಾಮಡಿ, ಶಿವರಾಜ ಪಾಟೀಲ್, ಹಣಮಯ್ಯ ಬಲುರೆ, ಯೋಜನಾ ವ್ಯವಸ್ಥಾಪಕಿ ಸಿಸ್ಟ್ರ್ ಲೂಸಿಪ್ರಿಯಾ, ಸಿಸ್ಟರ್ ಸೆಲನ್, ಸಿಸ್ಟರ್ ಜೂಲಿ, ಮಹಾದೇವ ಅಂಗಡಿ, ಸಾಯಬಣ್ಣ ಮಳಖೇಡ, ಆರ್.ಬಿ. ತಾವರೆ, ಆನಂದ ಮುಕ್ತೆದಾರ ಉಪಸ್ಥಿತರಿದ್ದರು.
ಡಾ. ಫ್ಲಾವಿಯಾ ಹಾಗೂ ಡಾ. ಶರಣಮ್ಮ ಅವರು 71ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿದರು. ಹಾಗೂ ಒಳ ರೋಗಿಗಳಿಗೂ ತಪಾಸಣೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

