ಅಫ್ಜಲ್ ಗುರುಗೆ ಗಲ್ಲು: ಹಿಂದೂ ಸೇವಾ ಸಮಿತಿ ವಿಜಯೋತ್ಸವ
ಯಾದಗಿರಿ: ಸಂಸತ್ ಭವನದ ಮೇಲೆ ಭಯೋತ್ಪಾದನೆಗೆ ಪ್ರೇರಣೆ ನೀಡಿದಂಥ ಪಾತಕಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡಿದನ್ನು ಸ್ವಾಗತಿಸಿ ಇಲ್ಲಿಯ ಹಿಂದೂ ಸೇವಾ ಸಮಿತಿ ಅಧ್ಯಕ್ಷ ನಾರಾಯಣರಾವ ಚವ್ಹಾಣ ನೇತೃತ್ವದಲ್ಲಿ ಸ್ಟೇಶನ್ ಏರಿಯಾದ ಮಹಾಲಕ್ಷ್ಮೀ ಭವನದ ಬಳಿ ಶನಿವಾರ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ನಾರಾಯಣರಾವ, ಇಂತಹ ನೀಚ ಕೃತ್ಯ ಎಸಗಿದವರು ಯಾರೇ ಆಗಲಿ, ಯಾವುದೇ ಧರ್ಮದವನಾಗಲಿ ಕ್ಷಮೆಗೆ ಅರ್ಹನಲ್ಲ. ಅಂಥವರಿಗೆ ಸೂಕ್ತ ಶಿಕ್ಷೆ ಕೇವಲ ಮರಣದಂಡನೆಯಾಗಿದೆ. ಸಂಸತ್ತಿನ ಮೇಲೆ ದಾಳಿ ಮಾಡಿದ ಉಗ್ರ ಅಫ್ಜಲ್ ಗುರುವನ್ನು ಇಷ್ಟು ದಿನ ಉಳಿಸಿದ್ದೇ ತಪ್ಪು. ಆದರೂ ಈಗಲಾದರೂ ಎಚ್ಚೆತ್ತುಕೊಂಡು ಗಲ್ಲು ಶಿಕ್ಷೆ ನೀಡಿರುವುದನ್ನು ಹಿಂದೂ ಸೇವಾ ಸಮಿತಿ ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ ಎಂದರು. ದಶರಥಸಿಂಗ್ ಠಾಕೂರ್, ಗಣೇಶ ಬಾಪ್ಕರ್, ಸೋಹನ ಪ್ರಸಾದ, ರಘು ಚವ್ಹಾಣ, ದತ್ತುಸಿಂಗ್ ಠಾಕೂರ್, ಆನಂದ ನಾಟೇಕಾರ, ಶರಣು ಸಜ್ಜನ, ಸತೀಶ ಸಗರ, ಶಾಂತಕುಮಾರ ಕರನಾಳ ಇತರರು ಇದ್ದರು. ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.
ಶ್ರೀರಾಮಸೇನೆ: ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಸ್ವಾಗತಿಸಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಸುಭಾಷ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಪದಾಧಿಕಾರಿಗಳಾದ ಸುರೇಶ ದಿಗ್ಗಾಯಿ, ಮಹೇಶ ಕಿರಗಿ, ಮಲ್ಲುಗೌಡ, ಶಿವು ಕಾನಗಡ, ಮಲ್ಲು ಬಾಡದ, ನಾಗರಾಜ, ಆನಂದ ಕೋರಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

