ಗುಲ್ಬರ್ಗಾ

ತಡವಾಗಿ ದೊರೆತ ನ್ಯಾಯಕ್ಕೆ ಅರ್ಥವೆಲ್ಲಿ?

Published On :

ಗುಲ್ಬರ್ಗ: ಮಹಮ್ಮ ದ್ ಅಫ್ಜಲ್‌ಗೆ ಗಲ್ಲು ಶಿಕ್ಷೆಯಾಗಬೇಕೆಂದು ಸಂಸತ್ತಿನ ಮೇಲಿನ ಆಕ್ರಮಣದಲ್ಲಿ ಹುತಾತ್ಮರಾದ ಸೈನಿಕರ ಸಂಬಂಧಿಕರು ಅವರ ವೀರಪದಕವನ್ನು ಹಿಂತಿರುಗಿಸಬೇಕಾಯಿತು.
 ಇದಕ್ಕಿಂತ ಅವಮಾನ ಇನ್ನೇನಿರಬಹುದು? ಇಷ್ಟು ತಡವಾಗಿ ದೊರೆತ ನ್ಯಾಯವನ್ನು ನೋಡಿದರೆ ಅರ್ಥವೇ ಇಲ್ಲ ಎನ್ನಿಸುತ್ತಿದೆ. ಅಮೆರಿಕ, ಸದ್ದಾಂ ಹುಸೇನ್ ಮತ್ತು ಒಸಾಮಾ ಬಿನ್ ಲಾಡೆನ್ ಆದರ್ಶ ನಿರ್ಮಾಣವಾಗದಿರಲೆಂದು ಅವರನ್ನು ತತ್ಪರತೆಯಿಂದ ಶಿಕ್ಷೆ ನೀಡಿತು. ಅದೇ ರೀತಿ ತತ್ಪರತೆ ಭಾರತ ಸರ್ಕಾರ ತೋರಿಸಿದ್ದರೆ, ಭಯೋತ್ಪಾದನೆ ಮೇಲೆ ಸ್ವಲ್ಪವಾದರೂ ನಿಯಂತ್ರಣ ಪಡೆಯಬಹುದಿತ್ತು.
ಭಯೋತ್ಪಾದಕರು ಸಾಯುವ ಸಿದ್ಧತೆಯೊಂದಿಗೆ ಜಿಹಾದ್ ಮಾಡುತ್ತಿರುವಾಗ ಅವರಿಗೆ ಭಾರತದಲ್ಲಿ 12 ವರ್ಷಗಳ ಕಾಲ ಪೋಷಿಸುತ್ತಿದ್ದರೆ ಅವರಿಗೆ ಶಿಕ್ಷೆ ಭಯವೆನಿಸಲಾರದು.
ಆದರೂ ತಡವಾಗಿಯಾದರೂ ಕೇಂದ್ರದ ಸರ್ಕಾರ ಎಚ್ಚೆತ್ತುಕೊಂಡು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದೆ. ಇದರಿಂದ ಸ್ವಲ್ಪವಾದರೂ ಉಗ್ರರಿಗೆ ನಡುಕದ ಸಂದೇಶ ರವಾನೆಯಾದಂತಾಗಿದೆ.
 ಕೇಂದ್ರ ಚುರುಕಾಗಿ ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಕಾರ್ಯ ಪ್ರವತ್ತವಾಗಬೇಕು. ರಾಜಕೀಯ ಬದಿಗಿಟ್ಟು ದೇಶರಕ್ಷಣೆ, ಸಾಮರಸ್ಯ ಕಾಪಾಡುವ ಕೆಲಸಕ್ಕೆ ಕೇಂದ್ರ ಒತ್ತು ನೀಡಲಿ ಎಂದು ಕರ್ನಾಟಕ ಯುವಜನ ಹೋರಾಟ ಸಮಿತಿ ಪ್ರಮುಖ, ಹೋರಾಟಗಾರ ಅನಂತ ಗುಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.