'ಲೇಖಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು'
ಶಹಾಪುರ: ಪ್ರತಿಯೊಬ್ಬ ವ್ಯಕ್ತಿ ತನ್ನದೇ ಆಲೋಚನೆಯಲ್ಲಿ ಮುಳುಗಿರುತ್ತಾನೆ. ಆದರೆ ಒಬ್ಬ ಲೇಖಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಇಡೀ ಸಮಾಜಕ್ಕೆ ಎಚ್ಚರಿಸುತ್ತಿರುತ್ತಾನೆ. ಕವಿ ಸಾಹಿತಿಗಳಿಗಿಂತ ಸಂಶೋಧಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಣ್ಣಿಗೇರಿ ತಲೆಬುರುಡೆಗಳಲ್ಲಿ ಕಾಲ ಕಳೆಯುವ ಬದಲು ಉಳಿದಿರುವ ತಲೆಬುರುಡೆ ಬಗ್ಗೆ ಸಂಶೋಧನೆ ನಡೆಯುಲಿ ಎಂದು ಬಳ್ಳಾರಿ ವಿವಿ ಕುಲಸಚಿವ ಡಾ. ರಂಗರಾಜ ವನದುರ್ಗ ನುಡಿದರು. ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಸರ್ವಜ್ಞ ಪ್ರಕಾಶನ ಹಮ್ಮಿಕೊಂಡ ಸಮಾರಂಭದಲ್ಲಿ ಮಾತನಾಡಿ, ಸಿದ್ದಣ್ಣ ಮ್ಯಾಗಿನಮನಿ ಸಂಶೋಧಿಸಿ ರಚಿಸಿದ ಶಹಾಪುರ ಪರಿಸರದ ಶಾಸನಗಳು ಮತ್ತು ದೇವಾಲಯಗಳು ಕೃತಿ ಬಿಡುಗಡೆಗೊಳಿಸಿ ನಿವೃತ್ತ ಪ್ರಾಚಾರ್ಯ ಬಿ.ಪಿ ಹೂಗಾರ ಮಾತನಾಡಿದರು. ಮನೆಗಳ ಶೋ ಕೇಸಿನಲ್ಲಿ ಸಾವಿರಾರು ರುಪಾಯಿ ಬೆಲೆಬಾಳುವ ನಾಯಿ, ಬೆಕ್ಕು, ಬೊಂಬೆಗಳನ್ನು ಇಡುವ ಬದಲು ಪುಸ್ತಕಗಳನ್ನು ಇಡಿ ಎಂದು ವಿಶ್ವರಾದ್ಯ ಸತ್ಯಂಪೇಟೆ ನುಡಿದರು. ಡಾ. ಬಸವರಾಜ ಇಜೇರಿ ಪ್ರಾಸ್ತಾವಿಕ ಮಾತನಾಡಿದರು. ಗುರುಬಸವಯ್ಯ ಗದ್ದುಗೆ, ಬಸವರಾಜ ಹಿರೇಮಠ, ಶಿವಣ್ಣ ಇಜೇರಿ, ಭೀಮರಾಯ ನುಚ್ಚಿನ, ಶೈಲಜಾ ಬಾಗೇವಾಡಿ, ಹಣಮಂತಿ ಇದ್ದರು. ಉಪನ್ಯಾಸಕ ಮಹೇಶ ಗಂವಾರ ನಿರೂಪಿಸಿ, ವಂದಿಸಿದರು.
ಕಾಂಗ್ರೆಸ್ಗೆ ಅಮರೇಶ ಗುಡ್ಬೈ
ಯಾದಗಿರಿ: ಕಾಂಗ್ರೆಸ್ ಪಕ್ಷವು ಬಂಜಾರ ಸಮಾಜವನ್ನು ಕಡೆಗಣಿಸುತ್ತಿದ್ದು, ಅದರಿಂದ ಮನನೊಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಮುಖಂಡ ಅಮರೇಶ ರಾಠೋಡ್ ಹೇಳಿದ್ದಾರೆ. ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಠೋಡ್, ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ 20 ವರ್ಷದಿಂದ ಕೆಲಸ ಮಾಡಿದ್ದೇನೆ. 1994ರಲ್ಲಿ ಗುರುಮಠಕಲ್ ಮತಕ್ಷೇತ್ರದ ಕೆಸಿಪಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ, 9 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇನೆ. 2012ನೇ ಸಾಲಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ನಮ್ಮ ಸಮಾಜ ಗುರುಮಠಕಲ್ ಮತಕ್ಷೇತ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ತಾಪಂ, ಜಿಪಂ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅದರಿಂದ ಮನನೊಂದು ಕಾಂಗ್ರೆಸ್ ತೊರೆಯುತ್ತಿದ್ದೇನೆ ಎಂದರು. ಬಿಎಸ್ಸಾರ್ಗೆ ಸೇರ್ಪಡೆ: ಕಾಂಗ್ರೆಸ್ ಬಂಜಾರ ಸಮಾಜವನ್ನು ಕಡೆಗಣಿಸುತ್ತಿದೆ. ಅದಕ್ಕೆ ಸಮಾಜದ ಬೆಂಬಲಿಗರೊಂದಿಗೆ ಫೆ. 13ರಂದು ರಾಯಚೂರಿನಲ್ಲಿ ನಡೆಯುವ ರಾಜ್ಯಮಟ್ಟದ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಬಿಎಸ್ಸಾರ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದರು. ವಿಶ್ವನಾಥ ಪತ್ತಾರ, ಶರಣಪ್ಪ ಜಾಕನಳ್ಳಿ, ಗೋಪಾಲ್ ಚವ್ಹಾಣ, ಡಾ.ದೇವಿಲಾಲ, ಚಂದ್ರಕಾಂತ ಚವ್ಹಾಣ, ದಶರಥ ರಾಠೋಡ್, ವೆಂಕಟೇಶ ರಾಠೋಡ್ ಅಲ್ಲಿಪುರ, ತಾರಾ ಸಿಂಗ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

