ಪ್ರತಿಭೆ ಹೊರಹಾಕಿ ಗೌರವ ಪಡೆಯಿರಿ: ಬಡಿಗೇರ
ಜೇವರ್ಗಿ: ಏನೂ ಸಾಧನೆ ಮಾಡಲಾಗದ ವ್ಯಕ್ತಿಗಳನ್ನು ಸಮಾಜದಲ್ಲಿ ಬೇರೆಯದ್ದೇ ದೃಷ್ಟಿಯಿಂದ ನೋಡಲಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅಳಕು ಇಟ್ಟುಕೊಳ್ಳದೇ ನಮ್ಮಲಿರುವ ಪ್ರತಿಭೆ ಹೊರ ಚೆಲ್ಲಿದಾಗ ಗೌರವ ಲಭಿಸುತ್ತದೆ ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಮಹಾದೇವ ಬಡಿಗೇರ ಹೇಳಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಲಬುರ್ಗಿ ಹಾಗೂ ಸ್ಥಳಿಯ ನೂರಂದೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕ ಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜನಪದ ಸಾಹಿತ್ಯ ಅಳಿಸಿ ಹೋಗುತ್ತಿದ್ದು, ಅದನ್ನು ನಾವುಗಳು ಉಳಿಸಿ, ಬೆಳೆಸಿಕೊಂಡು ಹೋಗಬೇಕು.
ವಿದ್ಯಾರ್ಥಿಗಳ ಓದಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದ್ದು, ಅವುಗಳ ಲಾಭ ಪಡೆದುಕೊಂಡು, ನಿರಂತರ ಪರಿಶ್ರಮ ವಹಿಸಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ಕಾಂಗ್ರೆಸ್ಮುಖಂಡ ಸಿದ್ರಾಮಪ್ಪಗೌಡ ಹರನೂರ ಉದ್ಘಾಟಿಸಿದರು. ನೂರಂದೇಶ್ವರ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಎ.ಸಿ.ಹಾರಿವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಉಪನ್ಯಾಸಕ ಬಸವರಾಜ ಕೋಳಕೂರ, ವೀರಣ್ಣ ಪೋ.ಪಾಟೀಲ, ಶರಣಗೌಡ ಸರಡಗಿ, ತಾಲೂಕ ಕ್ರೀಡಾಂಗಣ ವ್ಯವಸ್ಥಾಪಕ ಬಸಣ್ಣ ಪವಾರ ಆಗಮಿಸಿದ್ದರು.
ಸಿ.ಬಿ.ಕಮರಿಮಠ, ರಾಘವೇಂದ್ರ ಕುಲಕರ್ಣಿ, ಜೆ.ಡಿ.ಕೋರವಾರ, ವೆಂಕಟರಾವ ಮುಜಮದಾರ, ಮಹದೇವಯ್ಯ ಸ್ಥಾವರಮಠ, ನಿಂಬೆಣ್ಣ ರುದ್ರಪ್ಪಗೋಳ, ಸೈಯದ್ ಆಯಾಜ್, ಆರ್.ಡಿ.ಕೋರವಾರ ಇದ್ದರು. ಇದೇ ಸಂದರ್ಭದಲ್ಲಿ ಭಾವಗೀತೆ, ಗೀಗೀ ಪದ, ಲಾವಣಿ ಪದ, ಕೋಲಾಟ, ರಂಗಗೀತೆ, ಜನಪದ ಗೀತೆ, ಭಜನೆ, ಏಕಪಾತ್ರ ಅಭಿನಯ, ಸೋಬಾನ ಪದಗಳು, ಜೋಳ ರಾಗಿ ಬೀಸುವ ಹಾಡುಗಳು, ವೀರಗಾಸೆ, ಡೊಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಚರ್ಮವಾದ್ಯ ಸೇರಿದಂತೆ ಒಟ್ಟು 17 ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ವಿಜೇತರಾದ 17 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಗೊಳಿಸಲಾಯಿತು.
ಕಾಂಗ್ರೆಸ್ ಸೇರ್ಪಡೆ
ಜೇವರ್ಗಿ: ತಾಲೂಕಿನ ಶಖಾಪುರ (ಎಸ್.ಎ) ಗ್ರಾಮದ ಸುಮಾರು 15 ಜನ ಕೆಪಿಸಿಸಿ ಸದಸ್ಯ ಡಾ.ಅಜಯಸಿಂಗ್ ಅವರ ಸಮ್ಮುಖ ಕಾಂಗ್ರೆಸ್ ಸೇರ್ಪಡೆಯಾದರು.
ಶಖಾಪುರ ಗ್ರಾಮದ ಮಲ್ಲಿಕಾರ್ಜುನ, ದೇವಿಂದ್ರಪ್ಪ ತಳವಾರ, ಶಾಂತಪ್ಪ ಕೊಡಮನಹಳ್ಳಿ, ಮಲಿಗೆಪ್ಪ ಪೂಜಾರಿ, ಸಿದ್ದಪ್ಪ ಪೂಜಾರಿ, ಕೃಷ್ಣಪ್ಪ ಕರಕಿ, ಭೀಮು ಗೌಂಡಿ, ಶಾಂತು ಗೌಂಡಿ ಸೇರಿದಂತೆ 15 ಜನರಿಗೆ ಕಾಂಗ್ರೆಸ್ ಪಕ್ಷದ ಧ್ವಜ ನೀಡುವ ಮೂಲಕ ಡಾ.ಅಜಯಸಿಂಗ್ ಪಕ್ಷಕ್ಕೆ ಬರಮಾಡಿಕೊಂಡರು.
ಜಿಪಂ ಪ್ರತಿಪಕ್ಷದ ನಾಯಕ ಗುರುಲಿಂಗಪ್ಪಗೌಡ ಆಂದೋಲಾ, ಸಿದ್ರಾಮಪ್ಪಗೌಡ ಪಾಟೀಲ ಹರನೂರ, ತಾಪಂ ಅಧ್ಯಕ್ಷ ಶರಣಗೌಡ ಮದ್ರಕಿ, ಕೆಲ್ಲೂರ ಗ್ರಾಪಂ ಅಧ್ಯಕ್ಷ ಅಮಲಪ್ಪ ವಕೀಲ, ಕಾಶೀರಾಯಗೌಡ ಯಲಗೋಡ, ಸಕ್ರೆಪ್ಪಗೌಡ ಹರನೂರ, ಮಲ್ಲಿಕಾರ್ಜುನ ಸ್ವಾಮಿ ಅವರಾದ, ಚನ್ನಬಸಪ್ಪ ಸಾಹು ಹಂಗರಗಿ, ಮನೋಹರ ಕಾಮನಕೇರಿ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

