ರೇಲ್ವೆ: ಬೇಡಿಕೆ ಈಡೇರಿಕೆಗಾಗಿ ಕರವೇ ಬೊಬ್ಬೆ ಚಳವಳಿ
ಯಾದಗಿರಿ: ರೇಲ್ವೆ ಇಲಾಖೆಗೆ ಸಂಬಂಧಿಸಿದ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಇಲ್ಲಿಯ ರೇಲ್ವೆ ನಿಲ್ದಾಣದಲ್ಲಿ ಸೋಮವಾರ ವಿನೂತನ ಬೊಬ್ಬೆ ಚಳವಳಿ ನಡೆಸಿ ಪ್ರತಿಭಟಿಸಿದರು. ಸೋಮವಾರ ನಗರದ ರೇಲ್ವೆ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಕಾರ್ಯಕರ್ತರು ಬೊಬ್ಬೆ ಹೊಡೆಯುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣು ಗದ್ದುಗೆ, ಯಾದಗಿರಿ- ಆಲಮಟ್ಟಿ ರೇಲ್ವೆ ಮಾರ್ಗ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಈ ಬಾರಿಯ ರೇಲ್ವೆ ಬಜೆಟ್ನಲ್ಲಿ 11 ಕೋಟಿ ಅನುದಾನ ಮೀಸಲಿಡಬೇಕು. ವಾಡಿ- ಗದಗ ರೇಲ್ವೆ ಮಾರ್ಗ ಆರಂಭ ಮಾಡಬೇಕು. ಗುಲ್ಬರ್ಗದಲ್ಲಿ ರೇಲ್ವೆ ವಲಯ ಕೇಂದ್ರವನ್ನು ಸ್ಥಾಪಿಸಬೇಕು. ಕರ್ನಾಕದಲ್ಲಿನ ರೇಲ್ವೆ ನಿಲ್ದಾಣಕ್ಕೆ ಇರುವ ನಾರಾಯಣಪೇಟ ರೋಡ್ ಎಂಬ ಹೆಸರು ಬದಲಿಸಿ ಸೈದಾಪುರ ರೇಲ್ವೆ ನಿಲ್ದಾಣ ಎಂಬ ಹೆಸರು ಮರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತ ಮನವಿಪತ್ರವನ್ನು ರೇಲ್ವೆ ವ್ಯವಸ್ಥಾಪಕರಿಗೆ ಸಲ್ಲಿಸಿದರು. ದೇವು ಪಾಟೀಲ್, ಸಿದ್ದುರಡ್ಡಿ, ರವಿ ದೇವರಮನಿ, ಮರೆಪ್ಪ, ಬಾಪು, ಕಿರಣ, ಆನಂದ, ರಾಜು, ಶರಣು ಇಟಗಿ, ಭೀಮು, ಸಂಗಮೇಶ, ದತ್ತು, ಪ್ರಕಾಶ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

