ಗುಲ್ಬರ್ಗಾ

ಮುಂದುವರಿದ ಆಟೋ ಮುಷ್ಕರ, ಶೀಘ್ರ ಪರಿಹಾರ...?

Published On :

 ವಿಶೇಷ ವರದಿ
ಗುಲ್ಬರ್ಗ: ಕಳೆದ 3 ದಿನಗಳಿಂದ ಆಟೋಗಳಿಲ್ಲದೆ ಗುಲ್ಬರ್ಗ ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ. ಎಲ್ಲೆಂದರಲ್ಲಿ ನಿಲ್ಲುವ ಮೂಲಕ ರಸ್ತೆಗಳು ಸದಾಕಾಲ ಆಟೋಗಳಿಂದಲೇ ತುಂಬಿ ತುಳುಕುತ್ತಿದ್ದವು. ಈಗ ನಗರ ರಸ್ತೆಗಳು ಇಷ್ಟೊಂದು ವಿಶಾಲವೇ ಎಂಬಂತಾಗಿದೆ.
ಮುಷ್ಕರ 3ನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಂಡಿಲ್ಲ. ಈಶಾನ್ಯ ಸಾರಿಗೆ ಸಂಸ್ಥೆ ಈಗಿರುವ ನೃಪತುಂಗ ಸಾರಿಗೆಯ 60 ಬಸ್ಸುಗಳ ಜೊತೆಗೇ ಇನ್ನೂ 30 ಹೆಚ್ಚಿನ ಬಸ್ಸುಗಳನ್ನು ರಸ್ತೆಗೆ ಇಳಿಸುವ ಮೂಲಕ ಆಟೋ ಕೊರತೆ ನೀಗಿಸುವ ದಿಶೆಯಲ್ಲಿ ಹಗಲು-ರಾತ್ರಿ ಶ್ರಮಿಸಲಾರಂಭಿಸಿದೆ.
ಏತನ್ಮಧ್ಯೆ ಜಿಲ್ಲಾ ಪೊಲೀಸ್, ಜಿಲ್ಲಾಡಳಿದತ ತುರ್ತು ಸಭೆ ನಡೆಸುವ ಮೂಲಕ ವರ್ತುಲ್ ರಸ್ತೆಗೆ ಮಾತ್ರ ಸೀಮಿತಗೊಳಿಸಿದ್ದ ಕ್ರೂಸರ್ ವಾಹನಗಳ ಮೇಲಿನ ನಗರ ಪ್ರವೇಶ ನಿಷೇಧ ತೆರವು ಮಾಡಿದ್ದಾರೆ. ಇದೀಗ ಬುಧವಾರ ಬೆಳಗ್ಗೆಯಿಂದ ಈ ವಾಹನಗಳು ನಗರ ಪ್ರವೇಶಿಸುತ್ತಿವೆ. ಜನತೆಗೆ ಇದರಿಂದಲೂ ತುಸು ನೆಮ್ಮದಿಯಾಗುವಂತೆ ನೋಡಿಕೊಂಡಿದ್ದಾರೆ.
ತಕ್ಷಣ ಪರಿಹಾರ ದೊರಕುವುದೇ? ನೃಪತುಂಗ ಸಾರಿಗೆ ಸೇವೆ ಹಳ್ಳಿಗಳಿಗೂ ವಿಸ್ತರಿಸಿ, ಜಗತ್ ವೃತ್ತದಿಂದ ಸೂಪರ್ ಮಾರ್ಕೆಟ್‌ಗೆ ಬಸ್ಸುಗಳನ್ನು ನೇರ ಓಡಿಸಬೇಡಿ ಎಂಬಿತ್ಯಾದಿ 27ಕ್ಕೂ ಹೆಚ್ಚು ಬೇಡಿಕೆಗಳಂದಿಗೆ ರ್ಯಾಲಿ ನಡೆಸಿ ಮನವಿ ನೀಡುವ ಸಂದರ್ಭದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಹಿಂಸಾಚಾರ, ಕಲ್ಲು ತೂರಾಟ, ಲಾಠಿ ಪ್ರಹಾರದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟು, ಸಂಧಿಗ್ಧ ಪರಿಸ್ಥಿತಿ ಹಾಗೆಯೇ ಬಿಗುವಿನಿಂದಲೇ ಮುಂದುವರೆದಿರುವುದರಿಂದ ನಗರದಲ್ಲಿ ನಾಗರಿಕರ ನೆಮ್ಮದಿ ಹರಣವಾದಂತಾಗಿದೆ.
“OÚ«Ú­sÚ®Úúڒ ಜಿಲ್ಲಾಡಳಿತ ಹಲವು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದಾಗ, ಹೆಸರು ಬಹಿರಂಗಕ್ಕೆ ಇಚ್ಛಿಸದ ಅಧಿಕಾರಿಗಳು ಮುಷ್ಕರ ಮಾಡಿದವರೇ ಅದನ್ನು ವಾಪಸ್ ಪಡೆದು ಸೇವೆಗೆ ಮುಂದಾಗಬೇಕೆ ವಿನಹ ಅದಕ್ಕೆ ಸಭೆ-ಚರ್ಚೆ ಅಂತ ಯಾಕೆ ಮಾಡಬೇಕು? ನಾವಾಗಾಲಿ(ಜಿಲ್ಲಾಡಳಿತ), ಜನರಾಗಲಿ ಮುಷ್ಕರ ಮಾಡಿ ಅಂತ ಹೇಳಿಲ್ಲವಲ್ಲ. ಮುಷ್ಕರ ಮಾಡಿರುವ ಆಟೋದವರು ಈ ಸೂಕ್ಷ್ಮ ಅರಿತು ಮುಂದಿನ ನಿರ್ಣಯ ಕೈಗೊಳ್ಳಬೇಕು ಎಂದರು.
ಹಗ್ಗಜಗ್ಗಾಟ: ಪೊಲೀಸ್ ಇಲಾಖೆಯವರೂ ಹೆಚ್ಚು ಕಮ್ಮಿ ಇದೇ ನಿಲುವು ತಳೆದಿದ್ದಾರೆ. ನಾವೂ ಯಾಕೆ ಮಾತುಕತೆಗೆ ಅವರನ್ನು(ಆಟೋದವರು) ಕರೆಯೋಣ? ರ್ಯಾಲಿ ನಡೆಸಿ ಮನವಿ ಕೊಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಪಾನಮತ್ತರಾಗಿ ಅಧಿಕಾರಿಗಳ ಮೇಲೆಯೇ ಮುಗಿಬಿದ್ದಾಗ ನಾವೇನು ಕೈಕಟ್ಟಿ ಕುಳಿತುಕೊಳ್ಳೋಣವೇ? ಲಾಠಿ ಪ್ರಹಾರ ಮಾಡಿದ್ದೇವೆ. ಹಾಗಂತ ಹೆಚ್ಚಿನ ಬಲಪ್ರಯೋಗ ಮಾಡಿಲ್ಲ. ನಮಗೂ ಆಟೋದವರ ಬಗ್ಗೆ ಮೃದುತನ ಇದೆ. ಹಾಗಂತ ಅವರು ಮಾಡಿದ್ದನ್ನೆಲ್ಲ ನೋಡುತ್ತ ಕುಳಿತುಕೊಳ್ಳಲು ಸಾಧ್ಯವೇ? ಎಂಬುದು ಪೊಲೀಸರ ಖಾರ ಪ್ರಶ್ನೆ.
ಶಾಂತವಾಗಿ ರ್ಯಾಲಿ ಮಾಡಿದ್ದೇವೆ. ಇಡೀ ನಗರ ಸುತ್ತಿದವರು ಮನವಿ ಕೊಟ್ಟು ಮನೆಗೆ ಹೋಗುವಾಗ ಪೊಲೀಸರು ಹೊಡೆದಿದ್ದಾರೆ. ಇದು ನ್ಯಾಯವೇ? ಪಾನಮತ್ತರಾಗಿದ್ದು ಚಾಲಕರು ಅಲ್ಲ, ಕಿಡಿಗೇಡಿಗಳಿದ್ದಾರೆ. ಅಂತಹವರಿಗೆ ಶಿಕ್ಷೆಯಾಗಲಿ. ಚಾಲಕರನ್ನೇಕೆ ಬಂಧಿಸಲಾಗಿದೆ ಎಂಬುದು ಆಟೋ ಸಂಘಗಳ ಜಂಟಿ ಕ್ರಿಯಾ ಸಮಿತಿಯವರ ಪ್ರತಿ ಪ್ರಶ್ನೆ.
ಮುಷ್ಕರ ಕೈಬಿಟ್ಟು ಸೇವೆಗೆ ಬನ್ನಿ: ಇದೆಲ್ಲದರ ನಡುವೆಯೇ ನಗರವಾಸಿಗಳು ಈ ಬೆಳವಣಿಗೆ ಬಗ್ಗೆ ಚರ್ಚಿಸುತ್ತಿದ್ದಾರೆ. ಆಟೋದವರ ಮುಷ್ಕರ, ಅವರು ಜಿಲ್ಲಾಡಳಿತದ ಮುಂದಿಟ್ಟಿರುವ ಬೇಡಿಕೆಗಳನ್ನೆಲ್ಲ ಗಮನಿಸಿ ಕಾರ್ಯಸಾಧುವಲ್ಲದ ಬೇಡಿಕೆಗಳನ್ನು ಮುಂದಿಟ್ಟಿರುವ ಆಟೋದವರ ಮುಷ್ಕರ ಬೆಂಬಲಿಸಲಾಗದು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆಟೋದವರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಳೆದಿರುವ ನಿಲುವಿಗೆ ಜನಬೆಂಬಲ ವ್ಯಕ್ತವಾಗುತ್ತಿದೆ. ನೃಪತುಂಗ ಸಾರಿಗೆಯವರು ಜನರಿಗೆ ತೊಂದರೆಯಾಗದಂತೆ ಹೆಚ್ಚಿನ ಸೇವೆ ನೀಡುತ್ತಿರುವುದರಿಂದ ಅವರ ಸೇವೆ ಇನ್ನೂ ಜನರಿಗೆ ಅಪ್ಯಾಯಮಾನವಾಗಿ ಕಾಣಲಾರಂಭಿಸಿದೆ. ವರ್ತುಲ ರಸ್ತೆಯ ನಿಷೇಧದ ನಡುವೆಯೇ ಕ್ರೂಸರ್ ವಾಹನಗಳಿಗೆ ನಗರ ಪ್ರವೇಶಕ್ಕೆ ಮುಕ್ತ ಅನುಮತಿ ದೊರಕಿದ್ದರಿಂದ ಜನರನ್ನು ಕಳೆದ 3 ದಿನಗಳಿಂದ ಕಾಡುತ್ತಿದ್ದ ಸಂಪರ್ಕ ಸಮಸ್ಯೆ ಇದೀಗ ತುಸು ಕರಗಿದಂತಾಗಿದೆ.
ತಪ್ಪು ಗ್ರಹಿಕೆ ಯಾಕೆ? ಬದಲಾವಣೆಗೆ ಎಲ್ಲರೂ ಒಗ್ಗಿಕೊಳ್ಳಬೇಕು. ತಪ್ಪು ಗ್ರಹಿಕೆಯಿಂದಾಗಿ ಆಟೋದವರು ಮುಷ್ಕರದ ದಾರಿಯಲ್ಲಿ ಸಾಗಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. “}ÚOÚÐy ಮುಷ್ಕರ ಬಿಟ್ಟು ಸೇವೆಗೆ ÈÚßÁÚØ’ ಎಂಬುದು ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಇಂದಿರಾ ಮಾನ್ವೀಕರ್ ಹೇಳಿರುವ ಕಿವಿಮಾತು.
ಬೆಂಗಳೂರಿನಲ್ಲಿ ಮೆಟ್ರೋ ಬಂದರೂ ಆಟೋ ಚಾಲಕರು ಭಯವಿಲ್ಲದೆ ಆರಾಮಾಗಿರುವಾಗ ಇಲ್ಲೇಕೆ ಇಂತಹ ಆತಂಕ? ಈಕರಸಾ ಸಂಸ್ಥೆಯ ಚಾಲಕರ ನೇಮಕಾತಿಯಲ್ಲಿ ಆಟೋ ಚಾಲಕರಿಗೂ ನೌಕರಿ ಅವಕಾಶವಿದೆ. ಇಂತಹ ಸುವರ್ಣ ಸಂದರ್ಭ ಅನುಕೂಲಕ್ಕೆ ಬಳಸದೆ ಜಗಳ ಕಾದರೆ ಏನೂ ಸಾಧಿಸಲಾಗದು. ನೃಪತುಂಗ ಸಾರಿಗೆಗೆ ವಿರೋಧಿಸದೆ, ಮುಷ್ಕರ ಕೈಬಿಟ್ಟು ಸೇವೆಗೆ ಮರಳುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿರಿ ಎಂದು ಆಟೋ ಚಾಲಕರಿಗೆ ಇಂದಿರಾ ಮಾನ್ವೀಕರ್ ಸಲಹೆ ನೀಡಿದ್ದಾರೆ.
ಸಾರಿಗೆ ಸಂಸ್ಥೆಗೆ ಸಿಬ್ಬಂದಿ ಬೆಂಬಲ: ಆಟೋ ಮುಷ್ಕರ ಖಂಡನೀಯ. ನೃಪತುಂಗ ಸೇವೆ ವಿರೋಧಿಸಿರುವ ಮುಷ್ಕರ ಯಾವ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಸಾರಿಗೆ ಸಂಸ್ಥೆ ಎಸ್ಸಿ-ಎಸ್ಟಿ ನೌಕರರ ಸಂಘಟನೆ ಹೇಳಿದೆ. ಪ್ರಕಟಣೆ ನೀಡಿರುವ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಹಾಗೂ ಗಣಪತಿ ಗೋಳ್ಯಾ, ಆಟೋ ಮುಷ್ಕರದ ಬಿಸಿ ಜನರಿಗೆ ತಟ್ಟದಂತೆ ಸಂಸ್ಥೆ  ಸಿಬ್ಬಂದಿ ವರ್ಗ ಹಗಲು-ರಾತ್ರಿ ಹೆಚ್ಚಿನ ಸಮಯ ಸೇವೆಗೆ ಸಿದ್ಧ. ಸಂಸ್ಥೆಯ ಜನಪರ ಕ್ರಮಕ್ಕೆ ಬೆಂಬಲಿಸುವುದಾಗಿ ಹೇಳಿದ್ದಾರೆ.



ಆಟೋದವರ
ಬೇಡಿಕೆ ಓದಿದ್ದೇವೆ
ಆಟೋದವರು ಮೂರು ದಿನಗಳ ಹಿಂದೆ ನೀಡಿರುವ ಬೇಡಿಕೆಗಳ ಮನವಿ ಪತ್ರ ಓದಿದ್ದೇವೆ. ಅದರಲ್ಲಿ ಕಾರ್ಯಸಾಧುವಾಗಿರುವಂಥ ಬೇಡಿಕೆ ಈಡೇರಿಸುವ ದಿಶೆಯಲ್ಲಿ ಅಗತ್ಯ ಕ್ರಮ ಬರುವ ದಿನಗಳಲ್ಲಿ ಜರುಗಿಸುವ ಪ್ರಯತ್ನ ಮಾಡುತ್ತೇವೆ. ಹಾಗಂತ ನೃಪತುಂಗ ಸಾರಿಗೆ ಸೇವೆಯ ಸಂಬಂಧ ಅವರು ಇಟ್ಟಿರುವ ಕೆಲವು ಬೇಡಿಕೆಗಳನ್ನೂ ಈಡೇರಿಸುವೆ ಎಂದು ಹೇಳುವುದಿಲ್ಲ.
 - ಪ್ರಸನ್ನಕುಮಾರ್, ಜಿಲ್ಲಾಧಿಕಾರಿ

ನೋ ಮೋರ್ ಅರೆಸ್ಟ್
ಸೋಮವಾರ ಮನವಿ ಕೊಡುವಾಗ ಉಂಟಾದ ಗೊಂದಲ, ಪಾನಮತ್ತರ ತಕರಾರು-ತಂಟೆಗಳನ್ನು ಎಲ್ಲ ರೂ ಕಂಡಿ ದ್ದಾರೆ. ಪೊ ಲೀಸ್ ಅಧಿಕಾರಿಗಳ ಮೇಲೆಯೇ ಮುಗಿಬಿದ್ದ ವರ್ತನೆ ಸರಿಯಾದದ್ದಲ್ಲ. ಗುಂಪು ಚದುರಿಸಲು ಲಾಠಿ ಬಳಸಲಾಗಿದೆ. ಹೆಚ್ಚಿನ ಬಲಪ್ರಯೋಗ ಮಾಡಿಲ್ಲ. ಗಲಾಟೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಇನ್ನೂ ಹಲವರು ಗಲಾಟೆಯ ಹಿಂದಿದ್ದಾರೆ ಎಂಬ ಪಕ್ಕಾ ಮಾಹಿತಿ ನಮ್ಮ ಬಳಿ ಇದೆ. ಆದರೂ ಇನ್ನು ಮುಂದೆ ಯಾರನ್ನು ಬಂಧಿಸೋದಿಲ್ಲ.
-ಎನ್. ಸತೀಶಕುಮಾರ್,
ಪೊಲೀಸ್ ವರಿಷ್ಠಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.