ಗುಲ್ಬರ್ಗಾ

ಸದ್ಯಕ್ಕೆ 'ವಿಶ್ವರೂಪಂ' ಪ್ರದರ್ಶನವಿಲ್ಲ

Published On :

ಗುಲ್ಬರ್ಗ: ನಗರದಲ್ಲಿ 'ವಿಶ್ವರೂಪಂ' ಸಿನಿಮಾ ಮೊದಲ ದಿನವಾದ ಶನಿವಾರ ಯಶಸ್ವಿಯಾಗಿ ಪ್ರದರ್ಶನಗೊಂಡರೂ ಎರಡನೇ ದಿನವಾದ ಭಾನುವಾರ ಪ್ರದರ್ಶನ ಸ್ಥಗಿತಗೊಳಿಸಿದೆ.
 ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಈ ಸಿನಿಮಾ ಪ್ರದರ್ಶನ ಸ್ಥಗಿತಕ್ಕೆ ಚಿತ್ರ ಮಂದಿರದ ಆಡಳಿತ ಮಂಡಳಿಗೆ ಆದೇಶಿಸಿದ್ದರಿಂದ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 ಮೊದಲ ದಿನ ಶನಿವಾರ ಪ್ರೇಕ್ಷಕರು(ಹೆಚ್ಚು ಯುವಕರು) ಸರತಿಯಲ್ಲಿ ನಿಂತು ಟಿಕೆಟ್ ಪಡೆದು ಸಿನಿಮಾ ವೀಕ್ಷಿಸಲು ಆಗಮಿಸಿದ್ದರಿಂದ ನೂಕುನುಗ್ಗಲು ಕಂಡಿತ್ತು. ಜಿಲ್ಲಾಡಳಿತದ ಆದೇಶದ ಮೇರೆಗೆ ಚಿತ್ರ ಪ್ರದರ್ಶನ ಭಾನುವಾರದಿಂದ ಸ್ಥಗಿತಗೊಳಿಸಲಾಗಿದೆ. ಸೋಮವಾರದ ತಮಿಳುನಾಡು ನ್ಯಾಯಾಲಯದ ತೀರ್ಪನ್ನಾಧರಿಸಿ ಪ್ರದರ್ಶನ ಮುಂದುವರಿಸಬೇಕೆ, ಬೇಡವೇ ಎಂಬ ಬಗ್ಗೆ ಜಿಲ್ಲಾಡಳಿತ ನಿರ್ದೇಶನ ನೀಡಿದ ನಂತರವಷ್ಟೆ ತಮ್ಮ ಪ್ರದರ್ಶನ ಮಾಹಿತಿ ಪ್ರಕಟಿಸುವುದಾಗಿ ಚಿತ್ರ ಮಂದಿರ ಆಡಳಿತ ಮಂಡಳಿ 'ಕನ್ನಡಪ್ರಭ'ಕ್ಕೆ ತಿಳಿಸಿದೆ.  
ಜೇವರ್ಗಿ ರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ಸನ್ ಸಿಟ್ ಮಾಲ್‌ನಲ್ಲಿಯೂ ವಿಶ್ವರೂಪಂ ಪ್ರದರ್ಶನಕ್ಕೆ ಸಿದ್ಧತೆಗಳು ಸಾಗಿದ್ದವು. ಆದರೆ ಇಲ್ಲಿಯೂ ಈಗ ಪ್ರದರ್ಶನ ಇಲ್ಲದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.