ಸರ್ಕಾರಿ ಶಾಲೆ ಜಮೀನು ಅತಿಕ್ರಮ: ದೂರು
ಚಿಂಚೋಳಿ: ಪಟ್ಟಣದ ಚಂದಾಪುರ ನಗರದ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಸಂಬಂಧಿಸಿದ ಜಮೀನನ್ನು ಕೆಲವು ಭೂಗಳ್ಳರು ಮನೆ ನಿವೇಶನ ಮಾಡಿ ಅತಿಕ್ರಮಣ ಮಾಡುತ್ತಿದ್ದು, ಭೂಸ್ವಾಧೀನ ಕಾಯ್ದೆ ಪ್ರಕಾರ ಶಾಲೆಯ ಜಾಗವನ್ನು ಸರ್ಕಾರಿ ಪ್ರೌಢ ಶಾಲೆ ಹೆಸರಿನಲ್ಲಿ ಸೇರ್ಪಡೆ ಮಾಡಬೇಕು ಎಂದು ಪ್ರಾಂಶುಪಾಲರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪಟ್ಟಣದ ಚಂದಾಪುರ ನಗರದ ಚಿಂಚೋಳಿ-ತಾಂಡೂರ ಮುಖ್ಯರಸ್ತೆಯ ಪಕ್ಕದಲ್ಲಿರುವ ಸರ್ವೆ ನಂ. 14 ಪಟ್ಟೆದಾರರಾದ ಕೃಷ್ಣಾಚಾರ್ಯ ಗೋವಿಂದಾಚಾರ್ಯ ಇನಾಂದಾರ ಮತ್ತು ಸರ್ವೆ ನಂ.11ರ ಪಟ್ಟೆದಾರ ಮಾನಶೆಟ್ಟಿ ಭದ್ರಪ್ಪ ಇವರು 15 ಜುಲೈ 1960ರಂದು 0.29 ಗುಂಟೆ ಜಮೀನು ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಸರ್ವೆ ನಂ.10/ಎ ಹಾಗೂ ಸರ್ವೆ ನಂ. 15 ಇವುಗಳಲ್ಲಿ ತಹಸೀಲ್ದಾರ್ ಹರಿದಾಸ ಅವರು ಒಟ್ಟು 4-10 ಎಕರೆ ಗುಂಟೆ ಜಮೀನು ಭೂ ಸ್ವಾಧೀನಪಡಿಸಿಕೊಂಡು ಒಟ್ಟು 4-30 ಎಕರೆ ಗುಂಟೆ ಜಮೀನು ಸರ್ಕಾರಿ ಪ್ರೌಢ ಶಾಲೆಗೆ ಒಳಪಡಿಸಿ ನಿಗದಿಪಡಿಸಿದ್ದಾರೆ ಎಂದರು. ಆದರೆ ಸರ್ಕಾರದಿಂದ ಗುರುತಿಸಿದ 4-30 ಎಕರೆ ಗುಂಟೆ ಜಮೀನುಗಳಲ್ಲಿ ಶಾಲೆಯ ಕಟ್ಟಡಕ್ಕಾಗಿ ಮತ್ತು ಆಟದ ಮೈದಾನಕ್ಕಾಗಿ ಗುರುತಿಸಿದ ಜಮೀನುದಲ್ಲಿ ಅನಾಮಧೇಯ ವ್ಯಕ್ತಿಗಳು ಮತ್ತು ಪಟ್ಟೆದಾರರ ರಕ್ತ ಸಂಬಂಧಿಕರು ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಶಾಲೆಯ ಜಮೀನಿನಲ್ಲಿ ಮನೆ ನಿವೇಶನಗಳಾಗಿ ಗುರುತಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಶಾಲೆ ಜಮೀನು ಅತಿಕ್ರಮಣವಾಗುತ್ತಿದೆ ಎಂದು ತಹಸೀಲ್ದಾರರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

