ಅನುಭವದ ಸಾರವೇ ಜನಪದ ಸಾಹಿತ್ಯ: ಸಿರೂರ್
ಕನ್ನಡಪ್ರಭ ವಾರ್ತೆ ಹುಣಸಗಿ ಜು.2
ಆಧುನಿಕತೆಯ ಹೆಸರಿನಲ್ಲಿ ಇಂದು ಜನಪದ ಸಾಹಿತ್ಯ ಮರೆಯಾಗುತ್ತಿರುವುದು ತೀವ್ರ ವಿಷಾದನಿಯ. ನಮ್ಮ ಪ್ರಾಚೀನ ಕೃಷಿಕರ ನಿತ್ಯ ಜೀವನದ ಅನುಭವದ ಸಾರವೇ ಜನಪದ ಸಾಹಿತ್ಯ. ಆಧುನಿಕತೆಗೆ ಮಾರುಹೋಗಿ ನಮ್ಮತನವನ್ನು ಎಂದೂ ಕಳೆದುಕೊಳ್ಳಬಾರದು ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಶರಣಪ್ಪ ಸಿರೂರ್ ಹೇಳಿದರು.
ಪಟ್ಟಣದ ಯುಕೆಪಿ ಕ್ಯಾಂಪಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಚುಸಾಪದಿಂದ ಏರ್ಪಡಿಸಿದ್ದ ಜನಪದ ಸಾಹಿತ್ಯ ಮತ್ತು ಬದುಕು ಎಂಬ ವಿಷಯದ ಮೇಲೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನಪದ ಪ್ರಬುದ್ಧ ಸಾಹಿತ್ಯ: ಕೈತುತ್ತು ಹೋಯ್ತು, ಚಮಚಾ ಬಂತು. ಮಮ್ಮಿ ಬಂದಳು, ಅವ್ವ ಹೋದಳು. ಅಂಕಲ್ ಬಂದ, ಕಾಕ ಮರೆಯಾದ ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿಚಾರವನ್ನು ಮಂಡಿಸಿದ ಸಿರೂರ್, ಮಾತಿನುದ್ದಕ್ಕೂ ಅನೇಕ ನಗೆ ಚಟಾಕಿಗಳನ್ನು ಹಾರಿಸಿ ಜನಪದ ಸಾಹಿತ್ಯ ಎಷ್ಟು ಪ್ರಭಾವಶಾಲಿಯಾಗಿದೆ ಎಂಬುದನ್ನು ಮನಮುಟ್ಟುವಂತೆ ತಿಳಿಸಿದರು.
ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿ, ಹಂತಿಪದ, ಬೀಸುವ ಹಾಡು, ಮೊಹರಂ ಪದಗಳು ಮತ್ತು ಗೀಗೀ ಪದಗಳನ್ನು ಹಾಡುವುದರ ಮೂಲಕ ರಂಜನೀಯವಾಗಿ ಜನಪದ ಸಾಹಿತ್ಯದ ಬಗ್ಗೆ ಮನಮುಟ್ಟುವಂತೆ ಹೇಳಿದರು. ಕಸಾಪ ವಲಯಾಧ್ಯಕ್ಷ ವೀರೇಶ ಹಳ್ಳೂರ್ ಕಾರ್ಯಕ್ರಮ ಉದ್ಘಾಟಿಸಿ, ಚುಸಾಪದ ಈ ಕಾರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ವಿದ್ಯಾಧರ ಬಡಿಗೇರ್ ಮತ್ತು ನಿಂಗಣ್ಣ ಎಣ್ಣಿವಡಗೇರಾ ಚುಟುಕು ವಾಚನ ಮಾಡಿದರು. ವಿಜಯಲಕ್ಷ್ಮಿ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಸುಮಂಗಲಾ ನೂಲಿ, ಸಂಗನಗೌಡ ಧನರೆಡ್ಡಿ ಇದ್ದರು. ಚೆನ್ನಪ್ಪ ಬಾಗೇವಾಡಿ ಸ್ವಾಗತಿಸಿದರು. ನಾಗನಗೌಡ ಪಾಟೀಲ್ ನಿರೂಪಿಸಿದರು. ಮಶಾಕ ಯಾಳಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

