ಕುಡಿದ ಅಮಲಿನಲ್ಲಿ ಪಿಡಿಒಗೆ ನಿಂದಿಸಿದ ಗ್ರಾಪಂ ಸದಸ್ಯ
ಚಿಂಚೋಳಿ: ತಾಲೂಕಿನ ಹಲಚೇರಾ ಗ್ರಾಪಂ ಪ್ರಸಕ್ತ ಸಾಲಿನ 13ನೇ ಹಣಕಾಸು ಮತ್ತು ಬಿಆರ್ಜಿಎಫ್ ಯೋಜನೆಯ ಕ್ರಿಯಾಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲು ಕರೆದಿದ್ದ ಗ್ರಾಮ ಸಭೆಯಲ್ಲಿ ಸದಸ್ಯರೊಬ್ಬರು ಕುಡಿದ ಅಮಲಿನಲ್ಲಿ ಪಿಡಿಒಗೆ ನಿಂದಿಸಿದ ಕಾರಣ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.
ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ ಭರತ ಬುಳ್ಳಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಿಡಿಒ ಮಹೇಶ ಬುರಟ್ಟಿ ಪ್ರಸಕ್ತ ಸಾಲಿನಲ್ಲಿ ಹಲಚೇರಾ ಗ್ರಾಮಕ್ಕೆ ಸಂಬಂಧಿಸಿ ಜನತೆಗೆ ಅನುಕೂಲವಾಗುವ ಕಾಮಗಾರಿ ಕುರಿತು ಸರ್ಕಾರದ ನಿಯಮ ಮತ್ತು ಆದೇಶಗಳನ್ನು ಪ್ರಸ್ತಾಪಿಸುತ್ತಿದ್ದಾಗ ಹಲಚೇರಾ ಗ್ರಾಪಂ ಸದಸ್ಯ ಚಂದ್ರಕಾಂತ ಮೋಘಾ ಕುಡಿದ ಅಮಲಿನಲ್ಲಿ ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಆಗ ಗೊಂದಲದಿಂದ ಕೂಡಿದ ಸಭೆಯಲ್ಲಿಯೇ ಗ್ರಾಮದಲ್ಲಿ ಸಮುದಾಯ ಭವನ, ಗ್ರಂಥಾಲಯ, ಮಹಿಳಾ ಆರೋಗ್ಯ ಸಹಾಯಕಿಯರ ಕಟ್ಟಡ, ಮಹಿಳಾ ಶೌಚಾಲಯ, ಸಿಮೆಂಟ್ ರಸ್ತೆ, ಕುಡಿಯುವ ನೀರು ಪೂರೈಕೆಗೆ ಪೈಪ್ಲೈನ್, ಶಾಲಾಕೋಣೆ, ಅಂಗನವಾಡಿ ಕಟ್ಟಡ ಮತ್ತು ಕೊಳವೆಬಾವಿ ಕೊರೆಯುವುದು ಇನ್ನಿತರ ಕಾಮಗಾರಿಗಳನ್ನು ಪ್ರಸ್ತಾಪಿಸಲಾಯಿತು.
ಗ್ರಾಪಂ ಸದಸ್ಯರಾದ ಸೀತಮ್ಮ, ನಾಗಣ್ಣ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

