ಗುಲ್ಬರ್ಗಾ

ಶಾಲಾ ವಾಹನಗಳ ಸುರಕ್ಷತೆಗೆ ತಪಾಸಣೆ

Published On :

ಗುಲ್ಬರ್ಗ: ಶಾಲಾ ವಾಹನಗಳು ಹೊಂದಿರಬೇಕಾದ ಸುರಕ್ಷತಾ ಸೌಲಭ್ಯಗಳ ಕುರಿತು ಶ್ರೇಷ್ಠ ನ್ಯಾಯಾಲಯವು ನೀಡಿದ ತೀರ್ಪಿನನುಸಾರ ಕ್ರಮ ಕೈಗೊಂಡು ತಪಾಸಣೆಗಾಗಿ ವಾಹನಗಳು ಹಾಜರುಪಡಿಸಲು ತಿಳಿಸಲಾಗಿತ್ತು. ಶಾಲಾ ವಾಹನ ಹೊಂದಿರುವ ಎಲ್ಲ ಶಾಲಾ- ಕಾಲೇಜು, ಶಿಕ್ಷಣ ಸಂಸ್ಥೆಯವರಿಗೆ ನೋಟೀಸು ನೀಡಲಾಗಿದ್ದರೂ ಸಹ ಕೆಲಮೊಂದು ಶಾಲಾ- ಕಾಲೇಜು, ಶಿಕ್ಷಣ ಸಂಸ್ಥೆಯವರು ವಾಹನವನ್ನು ಹಾಜರುಪಡಿಸಿರುವುದಿಲ್ಲ. ಈ ವಿಷಯವು ಅತೀ ಗಂಭಿರವಾಗಿದ್ದು, ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶ್ರೇಷ್ಠ ನ್ಯಾಯಾಲಯವು ನೀಡಿದ ತೀರ್ಪಿನನುಸಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗುಲ್ಬರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಈಶ್ವರ ಬಿ. ಅವಟಿ ಅವರು ತಿಳಿಸಿದ್ದಾರೆ.
ಶಾಲಾ ವಾಹನಗಳು ಪಾಲಿಸಬೇಕಾದ ನಿಯಮಗಳು ಇಂತಿವೆ. ಶಾಲಾ ವಾಹನಗಳ ವೇಗಮಿತಿ ಗಂಟೆಗೆ 40 ಕಿ.ಮೀ. ವಾಹನ 15 ವರ್ಷಕ್ಕಿಂತ ಹಳೆಯದಾಗಿರಬಾರದು. ವಾಹನಗಳು ಅರಿಶಿನ ಬಣ್ಣ ಇರಬೇಕು. ವಾಹನದ ನಾಲ್ಕು ಭಾಗಗಳಲ್ಲೂ ಶಾಲಾ ವಾಹನ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿರಬೇಕು. 12 ವರ್ಷದ ಮಗುವನ್ನು ಒಂದು ಸೀಟು ಎಂದು ಪರಿಗಣಿಸಬೇಕು. ಒಂದು ಸೀಟಿನಲ್ಲಿ ಎರಡು ಮಕ್ಕಳನ್ನು ಕೂರಿಸುವಂತಿಲ್ಲ. ಎಲ್‌ಪಿಜಿ ಗ್ಯಾಸ್ ಇರುವ ವಾಹನದಲ್ಲಿ ಸಿಲೆಂಡರ್ ಮೇಲೆ ಸೀಟು ಇರಬಾರದು. ಗಾಜು ಪಾರದರ್ಶಕವಾಗಿ ಇರಬೇಕು.  ಚಾಲಕನಿಗೆ 4 ವರ್ಷ ಅನುಭವ ಇರಬೇಕು. ನಿಯಮಗಳನ್ನು ಪಾಲಿಸದ ಶಾಲಾ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ಪ್ರಯುಕ್ತ ಜು.30ರೊಳಗಾಗಿ ಎಲ್ಲ ಶಾಲಾ ವಾಹನಗಳನ್ನು ತಪಾಸಣೆಗೆ ಹಾಜರುಪಡಿಸಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕೆಂದು ಆರ್‌ಟಿಒ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.