ಸುದ್ದಿ ಸಂಕ್ಷೇಪ
ಕಾಡಾಕ್ಕೆ ರಂಗನಾಥ ವರ್ಗಾವಣೆ
ಗುಲ್ಬರ್ಗ: ಗುಲ್ಬರ್ಗ ನೀರಾವರಿ ಯೋಜನೆಗಳ ವಲಯ (ಕಾಡಾ) ಆಡಳಿತಾಧಿಕಾರಿಯಾಗಿದ್ದ ಎಂ.ಆರ್. ರಂಗನಾಥ ಅವರ ವರ್ಗಾವಣೆಯಾಗಿದೆ. ಕಳೆದ 10 ವರ್ಷಗಳಿಂದ ಆಡಳಿತಾಧಿಕಾರಿಯಾಗಿದ್ದ ರಂಗನಾಥ ಅವರನ್ನು ರಾಜ್ಯ ಸಹಕಾರ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸರ್ಕಾರ ವರ್ಗಾವಣೆಗೊಳಿಸಿದೆ. ಬೆಣ್ಣೆತೋರಾ, ಅಮರ್ಜಾ, ಚುಳುಕಿ ನಾಲಾ ಯೋಜನೆ ವ್ಯಾಪ್ತಿಯಲ್ಲಿ ಶೇ. 25ರಷ್ಟಾದರೂ ಶಿಗ್ಗಾವಿಯಲ್ಲಿ ಆಗಿರುವ ಹನಿ ನೀರಾವರಿ ಮಾದರಿಯ ಪ್ರಸ್ತಾವನೆ ರೂಪಿಸಿ ಮಂಜೂರಾತಿ ದೊರಕಿಸುವಲ್ಲಿ ಹಾಗೂ ರೈತರಿಗೆ ಮಣ್ಣು ಆರೋಗ್ಯ ತಪಾಸಣಾ ಪಾಸ್‌ಬುಕ್ ಹಾಗೂ ನೀರು ಬಳಕೆದಾರರ ಸಹಕಾರ ಸಂಘ ರಚಿಸುವಲ್ಲಿ ರಂಗನಾಥ ಅವರು ಪ್ರಮುಖ ಪಾತ್ರ ವಹಿಸಿದ್ದರು.
ನಾಲವಾರ ಶಾಲೆಗೆ ಜಿಪಂ ಸದಸ್ಯರ ಭೇಟಿ
ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಪಂ ಸದಸ್ಯ ಸಾಬಣ್ಣ ಅಡ್ಡೇಶಿಯವರು ಭೇಟಿ ನೀಡಿ ಶಾಲೆ ವ್ಯವಸ್ಥೆ ಪರಿಶೀಲನೆ ನಡೆಸಿ ಕಳವಳ ವ್ಯಕ್ತಪಡಿಸಿದರು. ಶಾಲೆಗೆ ಭೇಟಿ ನೀಡಿ ಸಂದರ್ಭದಲ್ಲಿ ಕೆಲವು ಶಿಕ್ಷಕರು ಗೈರು ಹಾಜರಿದ್ದ ಬಗ್ಗೆ ತರಾಟೆಗೆ ತೆಗೆದುಕೊಂಡು, ಸರಿಯಾಗಿ ಶಾಲೆಗೆ ಬರಲು ತಾಕೀತು ಮಾಡಿದರು. ಶಾಲೆಯಲ್ಲಿ ಬಿದ್ದಿರುವ ಶಾಲಾ ಕೋಣೆ, ಮಳೆಯಿಂದ ಸೋರುತ್ತಿರುವ ಕಿಟಕಿ, ಬಾಗಿಲು, ಕಿತ್ತು ಹೋದ ಬೋರ್ಡುಗಳಿರುವ ಕೋಣೆ, ಸಮರ್ಪಕವಲ್ಲದ ಆಟದ ಮೈದಾನ, ಮಕ್ಕಳಿಗೆ ಕುಡಿವ ನೀರಿನ ವ್ಯವಸ್ಥೆ, ಬಿಸಿಯೂಟದ ಕೋಣೆಯನ್ನು ಪರಿಶೀಲನೆ ನಡೆಸಿ, ಮಕ್ಕಳ ಕಲಿನಲಿ ಕೋಣೆಯನ್ನು ನೋಡಿದರು. ಮಕ್ಕಳಿಗೆ ಗುಣಮಟ್ಟದ ಊಟ ನೀಡಲು, ಅಡಿಗೆ ಕೋಣೆಯನ್ನು ಸ್ವಚ್ಛವಾಗಿಡಲು ಸಲಹೆ ನೀಡಿದರು. ಎರಡು ವರ್ಷಗಳಿಂದ ಮುಖ್ಯಗುರುಗಳ ಹುದ್ದ ಖಾಲಿ ಇದ್ದು, ಶಾಲೆಗೆ ಗ್ರಂಥಾಲಯ, ಪ್ರಯೋಗಾಲಯ, ಮಕ್ಕಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರಭಾರಿ ಮುಖ್ಯ ಗುರುಗಳಾದ ಶಮಶೀರ್ ಪಟೇಲ್ ಮನವಿ ಸಲ್ಲಿಸಿದರು. ಈ ಬಗ್ಗೆ ಶಾಲೆಯ ಸುಧಾರಣೆಗೆ ಜಿಪಂ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಆಶ್ವಾಸನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

