'ಉತ್ತಮ ಸಾಹಿತ್ಯದ ಸಿಂಚನ ಎಲ್ಲೆಡೆ ಆಗಲಿ'
ಕೆಂಭಾವಿ: ಕವಿ ಮತ್ತು ಸಾಹಿತಿ ಇವರು ನಮ್ಮ ದೇಶದ ಅತ್ಯುನ್ನತ ಆಸ್ತಿ. ಇವರಿಬ್ಬರು ದೇಶದಲ್ಲಿ ನಡೆಯುವ ಅನೇಕ ಘಟನೆಗಳನ್ನು ಕವನದ ಮತ್ತು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಲುಪುವಂತೆ ಮಾಡುತ್ತಾರೆ ಎಂದು ಸಾಹಿತಿ ಡಾ. ಸಿದ್ಧರಾಮ ಹೊನ್ಕಲ್ ಹೇಳಿದರು.
ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಭಾನುವಾರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸುರಪುರ, ಶ್ರೀಗುರು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆಂಭಾವಿ ಇವರ ವತಿಯಿಂದ ಏರ್ಪಡಿಸಿದ್ದ ಮುಂಗಾರು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಆಸೆಗೆ ಮಿತಿ ಇರಬೇಕು. ಭಗವಂತ ನಮಗೆ ಕೊಟ್ಟದ್ದನ್ನು ನಾವು ಭೋಗಿಸಿ ತೃಪ್ತಿ ಪಡಬೇಕೆಂದು ಟಾಲ್ಸ್ಟಾಯ್ ಹೇಳಿದ್ದಾರೆ. ಕವಿ ಮತ್ತು ಸಾಹಿತಿಗಳು ಅನಧಿಕೃತ ಶಾಸಕರಿದ್ದಂತೆ. ಆರಿಸಿ ಹೋದ ಶಾಸಕರು ಜನರಿಗಾಗಿ ಕೆಲಸ ಮಾಡಿದರೆ ಇವರು ನಮ್ಮ ಸುತ್ತ ಸಂಭವಿಸುವ ಅನೇಕ ಪ್ರಸಂಗಗಳನ್ನು ಕವನದ ಮೂಲಕ ಹಾಗೂ ಸಾಹಿತ್ಯದ ಸಿಂಚನದ ಮೂಲಕ ಜನತೆಗೆ ತಿಳಿ ಹೇಳುತ್ತಾರೆಂದು ಹೇಳಿದರು. ನಂತರ ನಡೆದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸುರಪುರದ ಶ್ರೀನಿವಾಸ ಜಾಲವಾದಿ ಮಾತನಾಡಿದರು.
ಸನ್ಮಾನ: ಇದೇ ವೇಳೆ ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 370ನೇ ರ್ಯಾಂಕ್ ಗಳಿಸಿದ ನವೀನ ನಂದೆಪ್ಪಗೌಡ ಹಾಗೂ ಲಂಚರಹಿತ ಗ್ರಾಮ ಲೇಖಪಾಲಕ ತಿರುಪತಿ ಅಲ್ಲೂರ ಕಕ್ಕೇರಾ ಅವರನ್ನು ಸನ್ಮಾನಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶಿವಶರಣಪ್ಪ ಶಿರೂರ ಪ್ರಾಸ್ತಾವಿಕ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

