10 ಹೊಸ ನೆಮ್ಮದಿ ಕೇಂದ್ರಕ್ಕೆ ಪ್ರಸ್ತಾವನೆ
ಕನ್ನಡಪ್ರಭ ವಾರ್ತೆ, ಆಳಂದ, ಜು.7
ತಾಲೂಕಿನ ಗ್ರಾಮೀಣ ಭಾಗದಲ್ಲಿನ 10 ಕಡೆ ಹೊಸ ನೆಮ್ಮದಿ ಕೇಂದ್ರಗಳ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕ ಬಿ.ಆರ್. ಪಾಟೀಲ್ ಅವರು ತಹಸೀಲ್ದಾರರಿಗೆ ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕಂದಾಯ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ರೇಷನ್ ಕಾರ್ಡ್, ಮಾಸಾಶನ ಅರ್ಜಿ ಸಲ್ಲಿಕೆಗೆ, ಪಹಣಿ ಪತ್ರ ಪಡೆಯಲು ಸಾರ್ವಜನಿಕರ ಪರದಾಟ ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದಾಗ ನೆಮ್ಮದಿ ಕೇಂದ್ರಗಳು ವಿಸ್ತಾರ ಅನಿವಾರ್ಯವಾಗಿದೆ ಎಂದು ತಹಸೀಲ್ದಾರರು ಮಾಹಿತಿ ನೀಡಿದರು.
ಈಗಿರುವ ಐದು ನೆಮ್ಮದಿ ಕೇಂದ್ರ ನಿರೀಕ್ಷಿತ ಮಟ್ಟದ ಕೆಲಸ ಆಗದೆ ಇರುವುದು. ಗ್ರಾಮೀಣ ಭಾಗದ ಜನರಿಗೆ ಅನುಕೂಲ ಒದಗಿಸಲು ಹೋಬಳಿ ಮಟ್ಟದಲ್ಲಿನ ದೊಡ್ಡ ಗ್ರಾಮ ತಡಕಲ್ ಅಥವಾ ಮುನ್ನಹಳ್ಳಿ, ಹಿರೋಳಿ ಅಥವಾ ಸರಸಂಬಾ, ಕಡಗಂಚಿ, ಮಟಕಿ, ವಿ.ಕೆ. ಸಲಗರ, ಮಾಡಿಯಾಳ, ಹೋದಲೂರ್ ಒಟ್ಟು 10 ಕಡೆ ನೆಮ್ಮದಿ ಕೇಂದ್ರಕ್ಕೆ ಪ್ರಸ್ತಾಪಿಸುವಂತೆ ಶಾಸಕರು ಹೇಳಿದರು.
ರೇಷನ್ ಕಾರ್ಡ್ ಮತ್ತು ಮಾಸಾಶನ ಕೊಡಿಸುವುದಾಗಿ ಮಧ್ಯವರ್ತಿಗಳು ಎರಡ್ಮೂರು ಸಾವಿರ ಹಣ ಪಡೆದು ವಂಚಿಸಿದ ದೂರು ಬಂದಿವೆ. ಇದಕ್ಕೆ ಆಸ್ಪದ ನೀಡದೆ ಅಧಿಕಾರಿಗಳು ಅರ್ಹರನ್ನು ಗುರುತಿಸಲು ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಪಟ್ಟಿ ಸಿದ್ಧಪಡಿಸಿ ಮಾಸಾಶನ ಹಾಗೂ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು, ವಿಳಂಬ ಏಕಾಗುತ್ತಿದೆ ಎಂದು ಉಪಸ್ಥಿತರಿದ್ದ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರಿಗೆ ಪ್ರಶ್ನಿಸಿ, ಈ ಕುರಿತು ಕ್ರಮ ಜರುಗಿಸಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

